ಬೆಂಗಳೂರು:ಇಂಜಿನಿಯರಿಂಗ್ ವಿದ್ಯಾರ್ಥಿ ಹರ್ಷ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಲೇಜು ಪ್ರಿನ್ಸಿಪಾಲ್ ಸೇರಿ 10 ಲೆಕ್ಚರರ್ಸ್ಗಳ ವಿರುದ್ದ ಪರಪ್ಪನ ಅಗ್ರಹಾರ ಪೊಲೀಸರು FIR ದಾಖಲಿಸಿದ್ದಾರೆ.
ಅಮೃತ್ ಇಂಜಿನಿಯರಿಂಗ್ ಕಾಲೇಜಿನ ಪ್ರೀನ್ಸಿಪಾಲ್ ಧನ್ ರಾಜ್ ಸ್ವಾಮಿ ಹಾಗೂ ಇತರೆ ಶಿಕ್ಷಕರು ಸಾಕ್ಷ್ಯ ನಾಶ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ಮಾಡಿದ್ದಾರೆ ಹಾಗೆ ವಿದ್ಯಾರ್ಥಿ ಹರ್ಷ ಬಿದ್ದ ಜಾಗದಲ್ಲಿ ನೀರು ಹಾಕಿ ರಕ್ತ ತೊಳೆದು ಸಾಕ್ಷ ನಾಶ ಮಾಡಿದ್ದಾರೆ. ಬಿದ್ದಿರುವ ಸ್ಥಳದಲ್ಲಿದ್ದ ಸಿಸಿಟಿವಿ ಪೊಟೆಜ್ ಡಿಲೀಟ್ ಮಾಡಿ ಕಾಲೇಜು ಆಡಳಿತ ಮಂಡಳಿ ತನಿಖೆಗೆ ಅಡ್ಡಿಪಡಿಸಿಸಿದ್ದಾರೆಂದು ಐಪಿಸಿ ಸೆಕ್ಷನ್ 201, 306 ರ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.