ಕರ್ನಾಟಕ

karnataka

ETV Bharat / state

ಇಂಜಿನಿಯರಿಂಗ್ ಪದವೀಧರ​.. ಪ್ರತಿಷ್ಠಿತ ಸಂಸ್ಥೆಗಳಲ್ಲಿ ಸೆಕ್ಯೂರಿಟಿ ಗಾರ್ಡ್‌ ಆಗ್ತಿದ್ದ.. ಬರೀ ಕಂಪ್ಯೂಟರ್‌ಗಳನ್ನೇ ಎಗರಿಸ್ತಿದ್ದ.. - ಸೆಕ್ಯೂರಿಟಿಯಿಂದ ಕಳ್ಳತನ

ಮೊದಲು ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸಕ್ಕೆ ಸೇರಿ ನಂತರ ಅದೇ ಸಂಸ್ಥೆ ದೋಚುವ ಪ್ಲಾನ್ ಮಾಡುತ್ತಿದ್ದ. ಯಾವ ಕಾಲೇಜಿನಲ್ಲಿ ಎಷ್ಟು ಕಂಪ್ಯೂಟರ್‌ಗಳಿವೆ ಎಂದು ಮಾಹಿತಿ ಸಂಗ್ರಹಿಸುತ್ತಿದ್ದ. ಬಳಿಕ ಕಂಪ್ಯೂಟರ್‌ ಸೇರಿದಂತೆ ಬಿಡಿಭಾಗಗಳ ಕಳ್ಳತನ ಮಾಡುತ್ತಿದ್ದ..

Engineering graduate arrested for robbed institutions
ಸೆಕ್ಯೂರಿಟಿಯಾಗಿ ಅಲ್ಲೇ ಕಳ್ಳತನ

By

Published : Aug 27, 2021, 2:53 PM IST

Updated : Aug 27, 2021, 4:00 PM IST

ಬೆಂಗಳೂರು :ಇಂಜಿನಿಯರಿಂಗ್ ಪದವಿ ಮುಗಿಸಿದಾತ ಕಳ್ಳತನಕ್ಕಿಳಿದು ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಪ್ರತಿಷ್ಠಿತ ಇನ್ಸ್‌ಸ್ಟಿಟ್ಯೂಟ್​​ಗಳಲ್ಲಿ ಸೆಕ್ಯೂರಿಟಿ ಕೆಲಸಕ್ಕೆಂದು ಸೇರಿ ಅಲ್ಲಿಯೇ ಕಳ್ಳತನ ಎಸಗುತ್ತಿದ್ದ. ಇದೀಗ ಒಡಿಶಾ ಮೂಲದ ರಾಜಪಾತ್ರ ಎಂಬಾತನನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ.

ಈತ ಕಾಲೇಜು ಹಾಗೂ ಹಲವು ಸಂಸ್ಥೆಗಳಲ್ಲಿ ಕಂಪ್ಯೂಟರ್ ಬಿಡಿ ಭಾಗಗಳನ್ನ ಕಳ್ಳತನ ಮಾಡುತ್ತಿದ್ದ. ಮೊದಲು ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸಕ್ಕೆ ಸೇರಿ ನಂತರ ಅದೇ ಸಂಸ್ಥೆ ದೋಚುವ ಪ್ಲಾನ್ ಮಾಡುತ್ತಿದ್ದ. ಯಾವ ಕಾಲೇಜಿನಲ್ಲಿ ಎಷ್ಟು ಕಂಪ್ಯೂಟರ್‌ಗಳಿವೆ ಎಂದು ಮಾಹಿತಿ ಸಂಗ್ರಹಿಸುತ್ತಿದ್ದ. ಬಳಿಕ ಕಂಪ್ಯೂಟರ್‌ ಸೇರಿದಂತೆ ಬಿಡಿಭಾಗಗಳ ಕಳ್ಳತನ ಮಾಡುತ್ತಿದ್ದ. ಇಷ್ಟೆಲ್ಲ ಆದ್ಮೇಲೆ ಒಡಿಶಾಗೆ ತೆರಳಿದ್ದ ಖದೀಮ ಅಲ್ಲಿನ ಪ್ರತಿಷ್ಠಿತ ಸಂಸ್ಥೆ ಬಿಜು ಲರ್ನಿಂಗ್​​​ನಲ್ಲಿ ಕೆಲಸ ಗಿಟ್ಟಿಸಿದ್ದ.

ಅಲ್ಲಿಯೂ ಕಳ್ಳತನ ಎಸಗಿದ್ದ. ಕಂಪ್ಯೂಟರ್ ಬಿಡಿಭಾಗಗಳ ಮಾರಾಟ ಮಾಡಲು ಮತ್ತೆ ಬೆಂಗಳೂರಿಗೆ ಆಗಮಿಸಿದ್ದ. ಆದರೆ, ನಗರ ಪೊಲೀಸರ ಕಾರ್ಯಾಚರಣೆಯಲ್ಲಿ ಕಳ್ಳನನ್ನು ಬಂಧಿಸಲಾಗಿದೆ. ಈತ ಸುಮಾರು ₹40 ಲಕ್ಷ ಮೌಲ್ಯದ ವಸ್ತುಗಳನ್ನ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.

ಒಡಿಶಾ ಸಿಎಂ ಮಾಲೀಕತ್ವದ ಸಂಸ್ಥೆಗೂ ಕನ್ನ

ಒಡಿಶಾ ಸಿಎಂ ನವೀನ್ ಪಟ್ನಾಯಕ್‌ ಒಡೆತನದ ಇನ್ಸ್‌ಸ್ಟಿಟ್ಯೂಟ್​​​ನಲ್ಲೂ ತನ್ನ ಕೈಚಳಕ ತೋರಿಸಿದ್ದಾನೆ. ಇಲ್ಲಿನ ಬಿಜು ಪಾಟ್ನಾಯಕ್ ಇ-ಲರ್ನಿಂಗ್‌‌‌‌ ಸೆಂಟರ್​​ನಲ್ಲಿ ಕೆಲಸಕ್ಕೆಂದು ಸೇರಿದ್ದ ಈತ ಅಲ್ಲಿಯೂ ಕಳ್ಳತನ ಮಾಡಿದ್ದಾನೆ.

ತಂಗಿ ಮದುವೆಗಾಗಿ ಕಳ್ಳತನ

ಬೆಂಗಳೂರು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಕಳ್ಳತನದ ಕಾರಣ ಬಿಚ್ಚಿಟ್ಟಿದ್ದಾನೆ. ತಂಗಿಯ ಮದುವೆಗಾಗಿ ಹಣ ಹೊಂದಿಸಲು ಕಳ್ಳತನ ಮಾಡಿರುವುದಾಗಿ ತಿಳಿಸಿದ್ದಾನೆ. ಕಳ್ಳತನ ಮಾಡಿದ್ದ ವಸ್ತುಗಳನ್ನು ಆನ್​ಲೈನ್​ನಲ್ಲೂ ಮಾರಾಟ ಮಾಡಿದ್ದಾನಂತೆ. ಓಎಲ್​​ಎಕ್ಸ್​ನಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.

Last Updated : Aug 27, 2021, 4:00 PM IST

ABOUT THE AUTHOR

...view details