ETV Bharat Karnataka

ಕರ್ನಾಟಕ

karnataka

ETV Bharat / state

1977ರ ರಾಜ್ಯ ನಾಗರಿಕ ಸೇವೆಗಳ ನಿಯಮಗಳ ತಿದ್ದುಪಡಿ ಸಂಬಂಧ ಅಧಿಸೂಚನೆ ಪ್ರಕಟ - Notification Enforcement

1977ರ ಕರ್ನಾಟಕ ನಾಗರಿಕ ಸೇವೆಗಳ (ಸಾಮಾನ್ಯ ನೇಮಕಾತಿ) ನಿಯಮಗಳ ತಿದ್ದುಪಡಿ ಸಂಬಂಧ ರಾಜ್ಯ ಸರ್ಕಾರ ಅಧಿಸೂಚನೆ ಪ್ರಕಟಗೊಳಿಸಿದೆ.

Enforcement of Notification by State Government
ಸಂಗ್ರಹ ಚಿತ್ರ
author img

By

Published : Sep 9, 2020, 9:55 PM IST

ಬೆಂಗಳೂರು :1977ರ ಕರ್ನಾಟಕ ನಾಗರಿಕ ಸೇವೆಗಳ (ಸಾಮಾನ್ಯ ನೇಮಕಾತಿ) ನಿಯಮಗಳನ್ನು ತಿದ್ದುಪಡಿ ಮಾಡುವ ಸಂಬಂಧ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಈ ಸಂಬಂಧ ರಾಜ್ಯಪತ್ರ ಹೊರಡಿಸಿದ್ದು, ಈ ಕೆಳಗಿನ ನಿಯಮಗಳ ಕರಡು, ಕರ್ನಾಟಕ ಸರ್ಕಾರವು ಸೆಕ್ಷನ್ 3ರ ಉಪವಿಭಾಗ (8) ರಿಂದ ನೀಡಲ್ಪಟ್ಟ ಅಧಿಕಾರವನ್ನು ಚಲಾಯಿಸಲು ಪ್ರಸ್ತಾಪಿಸಿದೆ.

in article image
ರಾಜ್ಯ ಸರ್ಕಾರದ ಅಧಿಸೂಚನೆ

ಇದನ್ನು ಸೆಕ್ಷನ್ 3ರ 8ನೇ ವಿಭಾಗದೊಂದಿಗೆ ಓದಿ ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ ಕಾಯ್ದೆ, 1978 (1990 ರ ಕರ್ನಾಟಕ ಕಾಯ್ದೆ 14) ಈ ಕಾಯಿದೆಯ ಸೆಕ್ಷನ್ (3) ರ ಉಪವಿಭಾಗ (2) ರ ಷರತ್ತು (ಎ) ಪ್ರಕಾರ ಅಗತ್ಯವಿರುವ ಎಲ್ಲ ವ್ಯಕ್ತಿಗಳ ಮಾಹಿತಿಗಾಗಿ ಪ್ರಕಟಿಸಲಾಗಿದೆ. ಅಧಿಕೃತ ಗೆಜೆಟ್​ನಲ್ಲಿ ಪ್ರಕಟವಾದ ದಿನಾಂಕದಿಂದ 15 ದಿನಗಳ ನಂತರ ಈ ಕರಡನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಸೂಚನೆ ನೀಡಲಾಗಿದೆ.

ರಾಜ್ಯ ಸರ್ಕಾರದ ಅಧಿಸೂಚನೆ

ಮೇಲೆ ತಿಳಿಸಿದ ಅವಧಿಯ ಸಮಯ ಮುಗಿಯುವ ಮೊದಲು ಈ ಕರಡುಗೆ ಸಂಬಂಧಿಸಿದಂತೆ ಯಾವುದೇ ವ್ಯಕ್ತಿಯಿಂದ ರಾಜ್ಯ ಸರ್ಕಾರವು ಸ್ವೀಕರಿಸಬಹುದಾದ ಯಾವುದೇ ಆಕ್ಷೇಪಣೆ ಅಥವಾ ಸಲಹೆಯನ್ನು ರಾಜ್ಯ ಸರ್ಕಾರವು ಪರಿಗಣಿಸುತ್ತದೆ. ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಸರ್ಕಾರದ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ವಿಧಾನಸೌಧ, ಬೆಂಗಳೂರು -560 001ಗೆ ತಿಳಿಸಬಹುದು ಎಂದು ತಿಳಿಸಲಾಗಿದೆ.

ರಾಜ್ಯ ಸರ್ಕಾರದ ಅಧಿಸೂಚನೆ
ರಾಜ್ಯ ಸರ್ಕಾರದ ಅಧಿಸೂಚನೆ

ABOUT THE AUTHOR

...view details