ಕರ್ನಾಟಕ

karnataka

ETV Bharat / state

2023 ಸಾಲಿನಲ್ಲಿ ಸರ್ಕಾರಿ ನೌಕರರ ಗಳಿಕೆ ರಜೆ ನಗದೀಕರಣಕ್ಕೆ ಅವಕಾಶ ಕಲ್ಪಿಸಿ ಆದೇಶ

ಎಲ್ಲಾ ವೃಂದದ ಅರ್ಹ ಅಧಿಕಾರಿ/ನೌಕರರು ಒಂದು ತಿಂಗಳ ಮುಂಚಿತ ನೋಟಿಸ್‌ ನೀಡಿ 01/01/2023 ರಿಂದ 31/12/2023 ರವರೆಗಿನ ಅವಧಿಯಲ್ಲಿ ಅವರ ಇಚ್ಛೆಯಂತೆ ಯಾವುದೇ ತಿಂಗಳಿನಲ್ಲಿ ಗಳಿಕೆ ರಜೆ ನಗದೀಕರಣದ ಪ್ರಯೋಜನ ಪಡೆಯಲು ಅರ್ಹರಾಗಿರುತ್ತಾರೆ.

Vidhana Soudha
ವಿಧಾನ ಸೌಧ

By

Published : Dec 20, 2022, 5:16 PM IST

ಬೆಂಗಳೂರು:2023 ಸಾಲಿನಲ್ಲಿ ಸರ್ಕಾರಿ ನೌಕರರ ಗಳಿಕೆ ರಜೆ (EL) ನಗದೀಕರಣ ಅವಕಾಶ ಕಲ್ಪಿಸಿ ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರ 2023ನೇ ಸಾಲಿನ ಅವಧಿಯಲ್ಲಿ ರಾಜ್ಯ ಸರ್ಕಾರಿ ನೌಕರರು ಗರಿಷ್ಠ 15 ದಿನಗಳಿಗೆ ಮೀರದ ಗಳಿಕೆ ರಜೆಯನ್ನು ರಜಾ ವೇತನಕ್ಕೆ ಸಮನಾದ ನಗದೀಕರಣ ಸೌಲಭ್ಯ ಪಡೆಯುವ ಯೋಜನೆಯನ್ನು ಜಾರಿಗೊಳಿಸಿ ಆದೇಶಿಸಿದೆ.

ಎಲ್ಲಾ ವೃಂದದ ಅರ್ಹ ಅಧಿಕಾರಿ/ನೌಕರರು ಒಂದು ತಿಂಗಳ ಮುಂಚಿತ ನೋಟಿಸ್‌ ನೀಡಿ 01/01/2023 ರಿಂದ 31/12/2023 ರವರೆಗಿನ ಅವಧಿಯಲ್ಲಿ ಅವರ ಇಚ್ಛೆಯಂತೆ ಯಾವುದೇ ತಿಂಗಳಿನಲ್ಲಿ ಗಳಿಕೆ ರಜೆ ನಗದೀಕರಣದ ಪ್ರಯೋಜನ ಪಡೆಯಲು ಅರ್ಹರಾಗಿರುತ್ತಾರೆ.

ಗೆಜೆಟೆಡ್‌ ಅಧಿಕಾರಿಗಳ ವಿಚಾರವಾಗಿ 2023ನೇ ಸಾಲಿನ ಗಳಿಕೆ ರಜೆ ನಗದೀಕರಣ ಸೌಲಭ ಮಂಜೂರಾತಿ ಉದ್ದೇಶಕ್ಕಾಗಿ ಮಾತ್ರ ಹೆಚ್.ಆರ್.ಎಂ.ಎಸ್‌ ನಲ್ಲಿ ಲಭ್ಯವಿರುವ ಅಧಿಕಾರಿಗಳ ಗಳಿಕೆ ರಜೆ ಲೆಕ್ಕಾಚಾರದ ಆಧಾರದ ಮೇಲೆ ನಗದೀಕರಣವನ್ನು ಮಂಜೂರು ಮಾಡಲು ಸಕ್ಷಮ ರಜೆ ಮಂಜೂರಾತಿ ಪ್ರಾಧಿಕಾರಿಗಳು ಕ್ರಮವಹಿಸಬೇಕು ಎಂದು ಸೂಚಿಸಲಾಗಿದೆ.

ಇದನ್ನೂ ಓದಿ:ಪರಿಷತ್​ನಲ್ಲಿ ಸದ್ದು ಮಾಡಿದ ಕಬ್ಬಿನ ತೂಕದಲ್ಲಿ ಮೋಸ ವಿಷಯ: ಚರ್ಚೆಗೆ ಅವಕಾಶ ನೀಡಿದ ಸಭಾಪತಿ

ABOUT THE AUTHOR

...view details