ಬೆಂಗಳೂರು:ಕಲಬುರ್ಗಿ ವಿಮಾನ ನಿಲ್ದಾಣ ನಿರ್ಮಾಣದ ವೇಳೆ ಜಾಗ ಕಳೆದುಕೊಂಡ ಸಂತ್ರಸ್ತರಿಗೆ ಉದ್ಯೋಗದ ಜೊತೆಗೆ ತೆರವುಗೊಂಡ ದೇವಸ್ಥಾನದ ಮರು ನಿರ್ಮಾಣಕ್ಕೂ ₹50 ಲಕ್ಷ ಅನುದಾನ ನೀಡೋದಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಬಂಜಾರ ಸಮುದಾಯಕ್ಕೆ ಆಶ್ವಾಸನೆ ನೀಡಿದ್ದಾರೆ.
ಕಲಬುರ್ಗಿ ವಿಮಾನ ನಿಲ್ದಾಣಕ್ಕೆ ಜಾಗ ಕೊಟ್ಟವರಿಗೆ ಉದ್ಯೋಗ.. ಸಿಎಂ ಬಿಎಸ್‌ವೈ ಭರವಸೆ
ಗೃಹ ಕಚೇರಿ ಕೃಷ್ಣಾದಲ್ಲಿ ಬಂಜಾರ ಸಮುದಾಯದ ಸ್ವಾಮೀಜಿಗಳು, ಸಂಸದರು, ಶಾಸಕರು, ಮುಖಂಡರುಗಳ ಜೊತೆ ಸಿಎಂ ಸಭೆ ನಡೆಸಿದರು. ಏರ್‌ಪೋರ್ಟ್ ನಿರ್ಮಾಣದ ವೇಳೆ ಸಮುದಾಯದ ದೇವಸ್ಥಾನವನ್ನು ಸಮಾಜದ ಗಮನಕ್ಕೆ ತಾರದೆ ತೆರವುಗೊಳಿಸುವಲ್ಲಿ ತಹಶೀಲ್ದಾರ್ ಮತ್ತು ಇಂಜಿನಿಯರ್ ಕೈವಾಡವಿದೆ. ಹಾಗಾಗಿ ಅವರಿಬ್ಬರ ವಿರುದ್ಧ ಕ್ರಮ ಕೈಗೊಳ್ಬೇಕೆಂದು ಬಂಜಾರ ಸಮುದಾಯ ಆಗ್ರಹಿಸಿತು.
ಗೃಹ ಕಚೇರಿ ಕೃಷ್ಣಾದಲ್ಲಿ ಬಂಜಾರ ಸಮುದಾಯದ ಸ್ವಾಮೀಜಿಗಳು ಹಾಗೂ ಸಂಸದರು, ಶಾಸಕರು, ಮುಖಂಡರುಗಳ ಜೊತೆ ಸಿಎಂ ಯಡಿಯೂರಪ್ಪ ಸಭೆ ನಡೆಸಿದರು. ಕಲಬುರ್ಗಿ ಏರ್ ಪೋರ್ಟ್ ನಿರ್ಮಾಣದ ವೇಳೆ ಸಮುದಾಯದ ದೇವಸ್ಥಾನವನ್ನು ಬಂಜಾರ ಸಮಾಜದವರ ಗಮನಕ್ಕೆ ತಾರದೇ ತೆರವುಗೊಳಿಸಿದ್ದಾರೆ. ಇದರಲ್ಲಿ ಸ್ಥಳೀಯ ತಹಶೀಲ್ದಾರ್ ಮತ್ತು ಇಂಜಿನಿಯರ್ ಅವರ ಕೈವಾಡ ಇದೆ. ಹಾಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಬಂಜಾರ ಸಮುದಾಯ ಆಗ್ರಹಿಸಿತು.
ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ,ತಹಶೀಲ್ದಾರ್‌ರ ಕರ್ತವ್ಯ ಲೋಪದ ವರದಿ ನೀಡಬೇಕು. ವಿಮಾನ ನಿಲ್ದಾಣದ ನಿರ್ಮಾಣದ ವೇಳೆ ಜಾಗ ಕಳೆದುಕೊಂಡವರಿಗೆ ಉದ್ಯೋಗ ಜತೆಗೆ ದೇವಸ್ಥಾನ ನಿರ್ಮಾಣಕ್ಕೆ ₹50 ಲಕ್ಷ ಅನುದಾನ ನೀಡೋದಾಗಿ ವಾಗ್ದಾನ ಮಾಡಿದರು. ಅಷ್ಟೇ ಅಲ್ಲ, ತಾಂಡಕ್ಕೆ ಹೋಗುವ ರಸ್ತೆಗಳನ್ನು ಸಹ ಉತ್ತಮ ಗುಣಮಟ್ಟದಲ್ಲಿ ರಿಪೇರಿ ಮಾಡಿಸುವ ಭರವಸೆಯನ್ನ ಯಡಿಯೂರಪ್ಪ ನೀಡಿದರು.