ಕರ್ನಾಟಕ

karnataka

ETV Bharat / state

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಅನುಕಂಪದ ಆಧಾರದಲ್ಲಿ 58 ಜನರಿಗೆ ಉದ್ಯೋಗ - ಸಚಿವ ರಾಮಲಿಂಗಾರೆಡ್ಡಿ ನೇಮಕಾತಿ ಆದೇಶ

ಅನುಕಂಪ ಆಧಾರದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಸಾಂಕೇತಿಕವಾಗಿ ಐವರಿಗೆ ಸಚಿವ ರಾಮಲಿಂಗಾ ರೆಡ್ಡಿ ನೇಮಕಾತಿ ಆದೇಶ ನೀಡಿದರು.

employment-for-58-people-in-nwkrt-compassionate-basis
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಅನುಕಂಪ ಆಧಾರದಲ್ಲಿ 58 ಜನರಿಗೆ ಉದ್ಯೋಗ:ನೇಮಕಾತಿ ಆದೇಶ ಪತ್ರ ನೀಡಿದ ರಾಮಲಿಂಗಾರೆಡ್ಡಿ

By

Published : Jun 29, 2023, 4:38 PM IST

Updated : Jun 29, 2023, 5:33 PM IST

ಬೆಂಗಳೂರು : ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಅನುಕಂಪದ ಆಧಾರದ ಮೇಲೆ ನೇಮಕಾತಿಗಾಗಿ ಕಾಯುತ್ತಿದ್ದ 58 ಅಭ್ಯರ್ಥಿಗಳನ್ನು ತಾಂತ್ರಿಕ ಸಹಾಯಕ ಹುದ್ದೆಗಳಿಗೆ ನೇಮಕಾತಿ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಶಾಂತಿನಗರದಲ್ಲಿರುವ ಕೆಎಸ್ಆರ್​ಟಿಸಿ ಕೇಂದ್ರ ಕಚೇರಿಯಲ್ಲಿ ಸಾಂಕೇತಿಕವಾಗಿ ಐವರಿಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ನೇಮಕಾತಿ ಆದೇಶ ಪತ್ರ ನೀಡಿದರು.

ನೇಮಕಾತಿಗೊಂಡವರ ವಿವರ :ರೇಖಾ ಆರ್. ಪರಾಂಡೆ (ಪತ್ನಿ) ದಿವಂಗತ ರಾಯಪ್ಪ ಬಿ. ಪರಾಂಡೆ, ಚಾಲಕ / ನಿರ್ವಾಹಕ, ಬಾಗಲಕೋಟೆ ವಿಭಾಗ, ಸುಮಾಬಾಯಿ (ಪತ್ನಿ) ದಿವಂಗತ. ಶೇಖರನಾಯ್ಕ ಕೆ. ಎಂ, ಚಾಲಕ, ಹಾವೇರಿ ವಿಭಾಗ, ರೂಪ ಡಿ. ಮಾಯಣ್ಣವರ (ಪತ್ನಿ) ದಿವಂಗತ. ದಾನಪ್ಪ ಮಾಯಣ್ಣವರ, ಚಾಲಕ, ಹುಬ್ಬಳ್ಳಿ-ಧಾರವಾಡ ನಗರ ಸಾರಿಗೆ ವಿಭಾಗ, ಮೊಹಮ್ಮದ್ ಫಾರೂಕ್ ಎಂ ಕೆಳಗಡೆ (ಮಗ), ದಿವಂಗತ ಮೊಹಮ್ಮದ್ ಗೌಸ್ ಹೆಚ್. ಕೆಳಗಡೆ, ಚಾಲಕ, ಹಾವೇರಿ ವಿಭಾಗ, ಮಂಜುನಾಥ ಎಂ. ತಿಗಡಿ(ಮಗ), ದಿವಂಗತ. ಮಾರುತಿ ಎಸ್. ತಿಗಡಿ, ಚಾಲಕ, ನಿರ್ವಾಹಕ/ ಧಾರವಾಡ ವಿಭಾಗ.

ಈ ಸಂದರ್ಭದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್ ಉಪಸ್ಥಿತರಿದ್ದರು. ಉಳಿದ ಅಭ್ಯರ್ಥಿಗಳಿಗೂ ನೇಮಕಾತಿ ಆದೇಶ ಪತ್ರಗಳನ್ನು ನೀಡಲಾಗುತ್ತದೆ ಎಂದು ಅವರು ತಿಳಿಸಿದರು.

ಇವಿ ಪವರ್ ಪ್ಲಸ್ ಬಸ್ ಅಪಘಾತಕ್ಕೆ ಕೆಎಸ್ಆರ್​ಟಿಸಿ ಸ್ಪಷ್ಟನೆ: ಜೂನ್ 28ರಂದು ಮೈಸೂರು - ಬೆಂಗಳೂರು ಹೆದ್ದಾರಿಯಲ್ಲಿ ಮಡಿಕೇರಿಯಿಂದ ಬೆಂಗಳೂರಿಗೆ ಬರುತ್ತಿದ್ದ ಇವಿ ಪವರ್‌ಪ್ಲಸ್ ವಾಹನದ ಮುಂಭಾಗದಲ್ಲಿ ಚಲಿಸುತ್ತಿದ್ದ ಬೊಲೆರೋ ಲಗೇಜ್ ವಾಹನವು ಒಳಗೆ ಮತ್ತು ಟಾಪ್ ಮೇಲೆ ಪ್ಲೈವುಡ್​​ ಶೀಟ್​(20 mm plywood sheet)ಗಳನ್ನು ತುಂಬಿಕೊಂಡು ಹೋಗುತ್ತಿತ್ತು. ಹಠಾತ್ತನೆ ಬೊಲೆರೋ ವಾಹನದ‌ ಟೈರ್ ಬಸ್ಟ್ ಆದ ಕಾರಣ ಅದರ ವೇಗ ಕಡಿಮೆ ಆಗಿದೆ. ಇದರಿಂದ ಹಿಂದೆ ಬರುತ್ತಿದ್ದ ಇವಿ ಬಸ್ಸು ಬೊಲೊರೋಗೆ ತಾಗಿ ಬೊಲೆರೊ ವಾಹನದಲ್ಲಿದ್ದ 17ಕ್ಕೂ ಹೆಚ್ಚು ಪ್ಲೈವುಡ್​ ಶೀಟ್​ಗಳು ಬಸ್ಸಿನ ಮುಂಭಾಗದ ಗಾಜನ್ನು ಹೊಕ್ಕಿ ಬಸ್ಸಿನೊಳಗೆ ಬಂದಿದ್ದವು.

ಇದು ಬಸ್​​ ಚಾಲಕನ ಎದೆಗೆ ತಗುಲಿ ಸಂಪೂರ್ಣ ನಿಯಂತ್ರಣ ಕಳೆದುಕೊಂಡು‌ ಬಲಭಾಗದ ಡಿವೈಡರ್ ದಾಟಿ ಸರ್ವೀಸ್ ರಸ್ತೆಗೆ ನುಗ್ಗಿತ್ತು. ಸಂಭವಿಸಿದ ಅಪಘಾತದಲ್ಲಿ ಚಾಲಕ ಕಂ ನಿರ್ವಾಹಕ ರಮೇಶ್ ಮರಣ ಹೊಂದಿದ್ದರು. ಬಸ್ಸಿನಲ್ಲಿದ್ದ 22 ಜನ ಪ್ರಯಾಣಿಕರಿಗೆ‌ ಸಣ್ಣ‌ಪುಟ್ಟ ಗಾಯಗಳಾಗಿದ್ದು, ಗಾಯಳುಗಳನ್ನು ರಾಮನಗರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಚಾಲಕ ಮತ್ತು ಮೂವರು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ‌ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.

ಮುಖ್ಯ ಸಂಚಾರ ವ್ಯವಸ್ಥಾಪಕರು (ಕಾರ್ಯಾಚರಣೆ ), ಮುಖ್ಯ ಭದ್ರತಾ ಮತ್ತು ಜಾಗೃತಧಿಕಾರಿ, ವಿಭಾಗೀಯ ನಿಯಂತ್ರಣಾಧಿಕಾರಿ, ರಾಮನಗರ ವಿಭಾಗ, ಬೆಂಗಳೂರು ಕೇಂದ್ರೀಯ ವಿಭಾಗ ಹಾಗೂ ಇತರೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ಮತ್ತು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ವ್ಯವಸ್ಥೆ ಮಾಡಿರುತ್ತಾರೆ. ಈ ಅಪಘಾತಕ್ಕೆ ನಿಗಮವು ತೀವ್ರ ವಿಷಾದವನ್ನು ವ್ಯಕ್ತಪಡಿಸುತ್ತದೆ. ನಮ್ಮ ನಿರ್ವಾಹಕರ ಅಗಲಿಕೆ ಅತೀವ ನೋವನ್ನುಂಟು ಮಾಡಿದ್ದು, ನಿಗಮದ ಅಧಿಕಾರಿಗಳು ಅವರ‌ ಕುಟುಂಬದವರೊಂದಿಗೆ ಸಂಪರ್ಕದಲ್ಲಿದ್ದು ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಆಸ್ಪತ್ರೆಯಲ್ಲಿರುವ ಪ್ರಯಾಣಿಕರ ವೈದ್ಯಕೀಯ ಚಿಕಿತ್ಸಾ ವೆಚ್ಛವನ್ನು ನಿಗಮವು ಭರಿಸುತ್ತದೆ ಎಂದು ಕೆಎಸ್ಆರ್‌ಟಿಸಿ ಪ್ರಕಟಣೆ ಮೂಲಕ ತಿಳಿಸಿದೆ.

ಇದನ್ನೂ ಓದಿ :ಬೆಂಗಳೂರು- ಮೈಸೂರು ಎಕ್ಸ್​ಪ್ರೆಸ್​ ವೇನಲ್ಲಿ ಮತ್ತೆ ಅಪಘಾತ: ಬಸ್​ ಕಂಡಕ್ಟರ್​ ಸಾವು

Last Updated : Jun 29, 2023, 5:33 PM IST

ABOUT THE AUTHOR

...view details