ಬೆಂಗಳೂರು:ಒಕ್ಕಲಿಗರ ಸಂಘದ ಸಾವಿರಾರು ನೌಕರರು ಇಂದು ರಕ್ತದಾನ ಮಾಡುವ ಮೂಲಕ ವಿನೂತನ ರೀತಿಯಲ್ಲಿ ಮುಷ್ಕರ ನಡೆಸಿದರು.
ಕಿಮ್ಸ್ ನೌಕರರ ಮುಷ್ಕರ ಇಂದಿಗೆ 14ನೇ ದಿನಕ್ಕೆ ಕಾಲಿಟ್ಟಿದ್ದು, ಕಿದ್ವಾಯಿ ಆಸ್ಪತ್ರೆಯ ಕ್ಯಾನ್ಸರ್ ರೋಗಿಗಳಿಗೆ ರಕ್ತದಾನ ಮಾಡುವ ಮೂಲಕ, “ರಕ್ತ ಕೊಟ್ಟೇವು 6ನೇ ವೇತನ ಬಿಡೆವು” ಎಂಬ ಘೋಷಣೆಯೊಂದಿಗೆ ವಿನೂತನ ಪ್ರತಿಭಟನೆ ನಡೆಸಿದರು.
ರಾಜ್ಯ ಒಕ್ಕಲಿಗರ ಸಂಘದ ಆಡಳಿತ ಕಚೇರಿಯ ಮುಂದೆ ಒಕ್ಕಲಿಗ ಸಂಘದ ಸಾವಿರಾರು ನೌಕರರು ಕಿದ್ವಾಯಿ ಆಸ್ಪತ್ರೆಯ ಕ್ಯಾನ್ಸರ್ ರೋಗಿಗಳಿಗೆ ರಕ್ತದಾನ ಮಾಡಿದರು. ರಾಜ್ಯ ಒಕ್ಕಲಿಗರ ಸಂಘದ ಎಂಪ್ಲಾಯಿಸ್ ಅಸೋಷಿಯೇಷನ್ ನಿಂದ ಮೇ 9 ರಿಂದಲೇ ಈ ಮುಷ್ಕರ ಆರಂಭವಾಗಿದೆ.
ನೌಕರರಿಗೆ 6ನೇ ವೇತನವನ್ನು ನೀಡಬೇಕೆಂಬ ಬೇಡಿಕೆಯ ಪತ್ರವನ್ನು ಕಳೆದ 6 ತಿಂಗಳ ಹಿಂದೆ ನೀಡಿದ್ದರೂ ಇದುವರೆಗೂ ಜಾರಿ ಮಾಡಿಲ್ಲವೆಂದು ಪ್ರತಿಭಟನಾಕಾರರು ಆರೋಪಿಸಿದರು.
ಇದೇ ವೇಳೆ ಮಾತಾನಾಡಿದ, ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಆರ್. ರಂಗರಾಜು, ಕಳೆದ ವರ್ಷ ಮೇ- ಜೂನ್ ತಿಂಗಳಿನಲ್ಲೂ ಪ್ರತಿಭಟನೆ ನಡೆಸಲಾಗಿತ್ತು. ಆಗ ಎಲ್ಲ ವೈದ್ಯರಿದ್ದರು, ನಂತರ ಅವರಿಗೆ ಬೇಕಾದ ಎಲ್ಲ ಸೌಲಭ್ಯಗಳು ದೊರೆತಿವೆ. ಹಾಗಾಗಿ ಅವರೀಗ ಪ್ರತಿಭಟನೆಯಿಂದ ದೂರ ಉಳಿದಿದ್ದಾರೆ. ಈ ಮುಷ್ಕರದಿಂದ ಯಾವ ರೋಗಿಗಳಿಗೂ ತೊಂದರೆ ಉಂಟಾಗಿಲ್ಲ ಎಂದು ತಿಳಿಸಿದರು.
ಪ್ರತಿಭಟನಾನಿರತ ಕಿಮ್ಸ್ ಸಿಬ್ಬಂದಿಯಿಂದ ಎಚ್ಚರಿಕೆ ವಿಭಿನ್ನವಾಗಿ ಪ್ರತಿಭಟನೆ ಮಾಡುವ ನಿಟ್ಟಿನಲ್ಲಿ ಈಗಾಗಲೇ 60 ಯುನಿಟ್ ನಷ್ಟು ರಕ್ತ ಸಂಗ್ರಹಿಸಲಾಗಿದೆ. ನೌಕರರಿಗೆ ನೀಡಬೇಕಾದ ಸವಲತ್ತುಗಳನ್ನು ಪೂರೈಸುವವರೆಗೂ ನಮ್ಮ ಈ ಮುಷ್ಕರ ನಿಲ್ಲುವುದಿಲ್ಲ. ಸರ್ಕಾರದ ಮಟ್ಟದಲ್ಲಿ ಈ ವಿಷಯದ ಕುರಿತು ಮಾತುಕತೆ ನಡೆಸಲಾಗುವುದು ಅಂತ ತಿಳಿಸಿದರು.