ಕರ್ನಾಟಕ

karnataka

ETV Bharat / state

ಕೋವಿಡ್ ಬಿಕ್ಕಟ್ಟಿನ ನಡುವೆಯೂ ರೈತನ ಬೆನ್ನುಲುಬಾದ ಪಶುಗಳ ಆರೋಗ್ಯಕ್ಕೆ ಒತ್ತು: ಪ್ರಭು ಚವ್ಹಾಣ್ - Emphasis on animal health

ರಾಜ್ಯದಲ್ಲಿ ಪಶುಗಳಿಗೆ ನೀಡಲಾಗುವ ಎಲ್ಲ ಔಷಧಗಳ ದಾಸ್ತಾನು ಸಮರ್ಪಕವಾಗಿದ್ದು ಯಾವುದೇ ಲಸಿಕಾ ಅಭಿಯಾನಗಳಿಗೆ ಹಿನ್ನಡೆ ಆಗುವುದಿಲ್ಲ ಎಂದು ಸಚಿವರು ಹೇಳಿದ್ದಾರೆ. ಮುಂದಿನ 6 ತಿಂಗಳಲ್ಲಿ ನೀಡಲಾಗುವ ಎಲ್ಲ ಲಸಿಕೆಗಳನ್ನು ಆಯಾ ಜಿಲ್ಲೆಗಳಿಗೆ ಒದಗಿಸಲು ಕ್ರಮ ವಹಿಸಲಾಗಿದೆ. ರೈತರು ಜಾನುವಾರು ಸಾಕಣೆದಾರರು ಕಾಲಕಾಲಕ್ಕೆ ಲಸಿಕಾ ಅಭಿಯಾನದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಚಿವರು ತಿಳಿಸಿದ್ದಾರೆ.

ಪ್ರಭು ಚವ್ಹಾಣ್
ಪ್ರಭು ಚವ್ಹಾಣ್

By

Published : Jun 4, 2021, 4:15 AM IST

ಬೆಂಗಳೂರು : ಪಶುಸಂಪತ್ತು ಆರೋಗ್ಯದಿಂದ ಇದ್ದರೆ ರೈತನ ಆದಾಯ ವೃದ್ದಿಯಾಗುತ್ತದೆ. ರೈತನ ಜೀವನಾಧಾರವಾದ ಜಾನುವಾರುಗಳ ಆರೋಗ್ಯ ಕಾಪಾಡುವುದು ಪಶುಸಂಗೋಪನೆ ಇಲಾಖೆಯ ಆದ್ಯ ಕರ್ತವ್ಯವಾಗಿದ್ದು ರಾಜ್ಯದಲ್ಲಿ ಕೋವಿಡ್ 19 ಸಂಕಷ್ಟದ ನಡುವೆಯು ಜಾನುವಾರುಗಳಿಗೆ ನೀಡಲಾಗುವ ಎಲ್ಲ ಪ್ರಮುಖ ಲಸಿಕಾ ಕಾರ್ಯಕ್ರಮಗಳು ಪ್ರಗತಿಯಲ್ಲಿದೆ, ಜಾನುವಾರುಗಳ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.

ಮೇ ಅಂತ್ಯದ ವರೆಗೆ ನೆರಡಿ ರೋಗಕ್ಕೆ 43512 ಜಾನುವಾರುಗಳಿಗೆ ಲಸಿಕೆ ನೀಡಲಾಗಿದೆ. ಚಪ್ಪೆ ರೋಗಕ್ಕೆ 1,98,545 ಜಾನುವಾರುಗಳಿಗೆ ಲಸಿಕೆ ನೀಡಲಾಗಿದೆ. ನೀಲಿ ನಾಲಿಗೆ ರೋಗ (ರೋಗೋದ್ರೇಕ ಕಂಡುಬಂದಾಗ ನೀಡಲಾಗುವ ಲಸಿಕೆ) 7,308 ಜಾನುವಾರುಗಳಿಗೆ ನೀಡಲಾಗಿದೆ. ಕರಳು ಬೇನೆ ಲಸಿಕೆಯನ್ನು ಎರಡು ಸುತ್ತಿನಲ್ಲಿ 9,45,259 ಜಾನುವಾರುಗಳಿಗೆ ನೀಡಲಾಗಿದೆ. ಗಳಲೆ ರೋಗ ಎರಡು ಸುತ್ತಿನಲ್ಲಿ 7,45,232 ಜಾನುವಾರುಗಳಿಗೆ ನೀಡಲಾಗಿದೆ. ಪಿ.ಪಿ.ಆರ್ ಲಸಿಕೆಯನ್ನು ಎರಡು ಸುತ್ತಿನಲ್ಲಿ 41,871 ಜಾನುವಾರುಗಳಿಗೆ ನೀಡಲಾಗಿದೆ. ಹುಚ್ಚು ನಾಯಿ ರೋಗಕ್ಕೆ ರಾಜ್ಯದಲ್ಲಿ ಈವರೆಗೆ 5,575 ನಾಯಿಗಳಿಗೆ ಲಸಿಕೆ ನೀಡಲಾಗಿದೆ. ಕೊಕ್ಕರೆ ರೋಗಕ್ಕೆ ಎರಡು ಸುತ್ತಿನಲ್ಲಿ 7,77,953 ಪಕ್ಷಿ/ಕೋಳಿಗಳಿಗೆ ನೀಡಲಾಗಿದೆ. ಕುರಿ ಸಿಡುಬು (ರೋಗೋದ್ರೇಕ ಕಂಡುಬಂದಾಗ ನೀಡಲಾಗುವ ಲಸಿಕೆ) 2,12,569 ಜಾನುವಾರುಗಳಿಗೆ ನೀಡಲಾಗಿದೆ. ಲಂಪಿಸ್ಕಿನ್ ರೋಗಕ್ಕೆ 2150 ಜುವಾರುಗಳಿಗೆ ಲಸಿಕೆ ನೀಡಲಾಗಿದೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ.

ಮುಂದಿನ 6 ತಿಂಗಳಲ್ಲಿ ನೀಡಲಾಗುವ ಲಸಿಕಾ ಕಾರ್ಯಕ್ರಮದ ವಿವರ:

• ಜೂನ್ - ತಿಂಗಳಿನಲ್ಲಿ ಗಳಲೆ ರೋಗ ಹಾಗೂ ಕರಳು ಬೇನೆ ರೋಗಕ್ಕೆ ಲಸಿಕೆ ನೀಡಲಾಗುತ್ತದೆ
• ಜುಲೈ - ತಿಂಗಳಿನಲ್ಲಿ ಪಿ.ಪಿ.ಆರ್ ರೋಗಕ್ಕೆ ಲಸಿಕೆ ನೀಡಲಾಗುತ್ತದೆ
• ಆಗಸ್ಟ್ - ತಿಂಗಳಿನಲ್ಲಿ ಕಾಲುಬಾಯಿ ಜ್ವರ ಹಾಗೂ ಪಿ.ಪಿ.ಆರ್ ರೋಗಕ್ಕೆ ಲಸಿಕೆ ನೀಡಲಾಗುತ್ತದೆ
• ಸೆಪ್ಟೆಂಬರ್ - ತಿಂಗಳಿನಲ್ಲಿ ಕಾಲುಬಾಯಿ ಜ್ವರ ರೋಗಕ್ಕೆ ಲಸಿಕೆ ನೀಡಲಾಗುತ್ತದೆ
• ಅಕ್ಟೋಬರ್ - ಯಾವುದೇ ಲಸಿಕಾ ಅಭಿಯಾನಗಳಿರುವುದಿಲ್ಲ
• ನವೆಂಬರ್ - ತಿಂಗಳಿನಲ್ಲಿ ಗಳಲೆ ರೋಗಕ್ಕೆ ಲಸಿಕೆ ನೀಡಲಾಗುತ್ತದೆ
• ಡಿಸೆಂಬರ್- ತಿಂಗಳಿನಲ್ಲಿ ಕರಳು ಬೇನೆ ಹಾಗೂ ಗಳಲೇ ಬೆನೆಗೆ ಲಸಿಕೆ ನೀಡಲಾಗುತ್ತದೆ

ರಾಜ್ಯದಲ್ಲಿ ಪಶುಗಳಿಗೆ ನೀಡಲಾಗುವ ಎಲ್ಲ ಔಷಧಗಳ ದಾಸ್ತಾನು ಸಮರ್ಪಕವಾಗಿದ್ದು ಯಾವುದೇ ಲಸಿಕಾ ಅಭಿಯಾನಗಳಿಗೆ ಹಿನ್ನಡೆ ಆಗುವುದಿಲ್ಲ ಎಂದು ಸಚಿವರು ಹೇಳಿದ್ದಾರೆ. ಮುಂದಿನ 6 ತಿಂಗಳಲ್ಲಿ ನೀಡಲಾಗುವ ಎಲ್ಲ ಲಸಿಕೆಗಳನ್ನು ಆಯಾ ಜಿಲ್ಲೆಗಳಿಗೆ ಒದಗಿಸಲು ಕ್ರಮ ವಹಿಸಲಾಗಿದೆ. ರೈತರು ಜಾನುವಾರು ಸಾಕಣೆದಾರರು ಕಾಲಕಾಲಕ್ಕೆ ಲಸಿಕಾ ಅಭಿಯಾನದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಚಿವರು ತಿಳಿಸಿದ್ದಾರೆ.

ಇದನ್ನು ಓದಿ:ಯಶವಂತಪುರದಲ್ಲಿ ತಲೆ ಎತ್ತಲಿದೆ 400 ಹಾಸಿಗೆಗಳ ಕೋವಿಡ್‌ ಕೇರ್ ಕೇಂದ್ರ: ಸಚಿವರ ಭೇಟಿ, ಪರಿಶೀಲನೆ

ABOUT THE AUTHOR

...view details