ಕರ್ನಾಟಕ

karnataka

ವಾಟರ್​ ಟ್ಯಾಂಕ್ ದುರಂತ:  ಮೂವರು ಅಧಿಕಾರಿಗಳ ಸಸ್ಪೆಂಡ್

By

Published : Jun 18, 2019, 3:48 AM IST

ಸೋಮವಾರ ಬೆಳಗ್ಗೆ 11 ಗಂಟೆಗೆ 100 ಎಂಎಲ್‌ಡಿ‌ ಎಸ್‌ಟಿಪಿಡಿ ಡೈಜೆಸ್ಟರ್​​ನಲ್ಲಿ ಘಟನೆ‌ ನಡೆದಿದ್ದು, ದುರಂತದಲ್ಲಿ ಇಬ್ಬರು ಸೈಟ್ ಇಂಜಿನಿಯರ್‌ಗಳು, ಒಬ್ಬರು ಸೂಪರ್‌ವೈಸರ್ ಮೃತಪಟ್ಟಿದ್ದಾರೆ. ಸೌಂದರ್ಯ ಎನ್‌ವೈರೋ ಕಂಟ್ರೋಲ್ ಎಂಬ ಕಂಪನಿಗೆ ಕಾಮಗಾರಿಯ ಗುತ್ತಿಗೆ ನೀಡಿದ್ದು, ಅವರದ್ದೇ ಸಿಬ್ಬಂದಿ ಅಲ್ಲಿ ಕೆಲಸ ಮಾಡುತ್ತಿದ್ದರು.

ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್

ಬೆಂಗಳೂರು : ಲುಂಬಿನಿ ಗಾರ್ಡನ್ ಬಳಿ ಜಲಮಂಡಳಿಯ ನಿರ್ಮಾಣ ಹಂತದ ತಾಜ್ಯ ನೀರು ಸಂಸ್ಕರಣ ಘಟಕ ದುರಂತಕ್ಕೆ ಸಂಬಂಧಿಸಿದಂತೆ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಮೇಲ್ಛಾವಣಿ ಕುಸಿದು ಮೂರು ಜನ ಸಾವನ್ನಪ್ಪಿದ ಬೆನ್ನಲ್ಲೇ ತುರ್ತು ಪತ್ರಿಕಾಗೋಷ್ಠಿ ಮಾಡಿದ ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್ ಈ ಬಗ್ಗೆ ಮಾಹಿತಿ ನೀಡಿದರು.

ಬೆಳಗ್ಗೆ11 ಗಂಟೆಗೆ 100 ಎಂಎಲ್‌ಡಿ‌ ಎಸ್‌ಟಿಪಿಡಿ ಡೈಜೆಸ್ಟರ್​ನಲ್ಲಿ ಘಟನೆ‌ ನಡೆದಿದೆ. 2 ಸೂಪರ್ ವೈಸರ್, 15 ಕಾರ್ಮಿಕರು ಅಲ್ಲಿ ಕೆಲಸ ಮಾಡುತ್ತಿದ್ದರು. ಸಂಪೂರ್ಣ ಸೌಂದರ್ಯ ಎನ್‌ವೈರೋ ಕಂಟ್ರೋಲ್ ಎಂಬ ಕಂಪನಿಗೆ ಇದರ ಕಾಮಗಾರಿ ಗುತ್ತಿಗೆ ನೀಡಿದ್ದು, ಅವರದ್ದೇ ಸಿಬ್ಬಂದಿ ಅಲ್ಲಿ ಕೆಲಸ ಮಾಡುತ್ತಿದ್ದರು. ದುರಂತದಲ್ಲಿ ಇಬ್ಬರು ಸೈಟ್ ಇಂಜಿನಿಯರ್‌ಗಳು, ಒಬ್ಬರು ಸೂಪರ್‌ವೈಸರ್ ಮೃತರಾಗಿದ್ದಾರೆ.

ಒಬ್ಬ ವ್ಯಕ್ತಿಯ ಶ್ವಾಸಕೋಶಕ್ಕೆ ತೀವ್ರ ಹಾನಿಯಾಗಿದೆ, ಘಟನೆಯಲ್ಲಿ ಗಾಯಗೊಂಡು 5 ಜನ ಐಸಿಯುನಲ್ಲಿದ್ದಾರೆ. ಎನ್‌ವೈರೋ ಕಂಪನಿ ಸೂರತ್‌ನಲ್ಲಿರುವ ಏಜೆನ್ಸಿಯಾಗಿದ್ದು, ಕಾಮಗಾರಿಯ ಗುಣಮಟ್ಟವನ್ನು ಪರಿಶೀಲನೆ ಮಾಡಬೇಕಾದ ಕಂಪನಿಯ ಎಂಜಿನಿಯರ್​ಗಳು ದುರಂತಕ್ಕೆ ಬಲಿಯಾಗಿದ್ದು ಬೇಸರದ ಸಂಗತಿ. ಒಂದು ಕಾಮಗಾರಿಯು 30.01.2020ಕ್ಕೆ ಮುಗಿಯಬೇಕಿತ್ತು, 30 ತಿಂಗಳ ಡೆಡ್​ಲೈನ್​ ನೀಡಲಾಗಿತ್ತು. ಒಟ್ಟು 360 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯುತಿತ್ತು ಎಂದರು.

ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್

65 ಕ್ಯೂಬಿಕ್ ಮೀಟರ್ ಕಾಂಕ್ರೀಟ್ ಹಾಕುತ್ತಿದ್ದರು, ಬಹುತೇಕ ಕಾಮಗಾರಿ ಪೂರ್ಣಗೊಳ್ಳುವ ಸಂದರ್ಭದಲ್ಲಿ ಈ ದುರದೃಷ್ಟಕರ ದುರ್ಘಟನೆ‌ ನಡೆದಿದೆ. ದುರ್ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ‌ ದಾಖಲಿಸಲಾಗಿದೆ. ಅವರಿಗೆಲ್ಲಾ ಕಂಪನಿಯಿಂದ ಪರಿಹಾರ ನೀಡುವಂತೆ ಸೂಚಿಸಲಾಗಿದೆ. ಎನ್ವೈರೋ ಕಂಪನಿಗೆ ಪೆನಾಲ್ಟಿ‌ ಹಾಕುತ್ತೇವೆ. ನಮ್ಮ ಎಇ ಹಾಗೂ ಎಇಇ‌ ಕೂಡ ಸ್ಪಾಟ್‌ನಲ್ಲಿ ಇರಬೇಕಿತ್ತು, ಅವರು ಇರದ ಕಾರಣ ಅವರನ್ನು ಸಸ್ಪೆಂಡ್ ಮಾಡಲಾಗಿದೆ. ಕಂಪನಿ ಆಸ್ಪತ್ರೆ ವೆಚ್ಚ ಭರಿಸದಿದ್ರೆ, ಅವರಿಗೆ ‌ನೀಡಬೇಕಾದ ಹಣದಲ್ಲಿ ಕತ್ತರಿ ಹಾಕಲಾಗುತ್ತೆ ಎಂದು ತುಷಾರ್ ಗಿರಿನಾಥ್ ತಿಳಿಸಿದರು.

ಈ ಘಟನೆ ಸಂಬಂಧ ಅಧಿಕಾರಿಗಳಾದ ಇಇ, ಸಿಎಂ ವೆಂಕಟ ಶಿವರೆಡ್ಡಿ, ಎಇಇ, ಮೊಹಮ್ಮದ್ ಹನೀಫ್, ಮತ್ತು ಎಇ ಭಾಗ್ಯಲಕ್ಷ್ಮೀ ಎಂಬವವರನ್ನು ಸಸ್ಪೆಂಡ್ ಮಾಡಲಾಗಿದೆ ಎಂದು ತಿಳಿಸಿದರು.

For All Latest Updates

TAGGED:

ABOUT THE AUTHOR

...view details