ಬೆಂಗಳೂರು:ಮಾಜಿ ಸಚಿವ ರಮೇಶ್ ಜಾರಕಿಹೊಳಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಮುಂಬೈನಲ್ಲಿದ್ದಾರೆ, ದಿಲ್ಲಿಯಲ್ಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಆದರೆ ಅಂತಿಮವಾಗಿ ಇಂದು ನಗರದ ಆನಂದರಾವ್ ವೃತ್ತದ ರಾಜಮಹಲ್ ಹೋಟೆಲ್ನಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ.
ಅಲ್ಲೂ ಇಲ್ಲ, ದಿಲ್ಲಿಯಲ್ಲೂ ಅಲ್ಲ... ಇಲ್ಲಿದ್ರಂತೆ ಬೆಳಗಾವಿಯ ಸಾಹುಕಾರ್! - undefined
ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ ಬಳಿಕ ಅಲ್ಲಿದ್ದಾರೆ, ಇಲ್ಲಿದ್ದಾರೆ ಎಂದೇ ಚರ್ಚಿಸಲಾಗುತ್ತಿತ್ತು. ಆದ್ರೆ ಇಂದು ಅಂತಿಮವಾಗಿ ನಗರದ ಆನಂದರಾವ್ ವೃತ್ತದ ರಾಜಮಹಲ್ ಹೋಟೆಲ್ನಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ.
ಪಕ್ಷದ ನಾಯಕರ, ಗುಪ್ತಚರ ಇಲಾಖೆಯ ಕಣ್ಣು ತಪ್ಪಿಸಿ ಬೆಳಗಾವಿಯ ಸಾಹುಕಾರ ತಮ್ಮ ಆಪ್ತರ ಜತೆ ಚರ್ಚಿಸುವ ಉದ್ದೇಶದಿಂದ ರಾಜಮಹಲ್ ಎಂಬ ಸಣ್ಣದೊಂದು ಹೋಟೆಲ್ನಲ್ಲಿ ತಂಗಿದ್ದರು. ಆದರೆ ಅದೂ ಪತ್ತೆಯಾದ ಹಿನ್ನೆಲೆ ನಿನ್ನೆ ರಾತ್ರಿಯಿಂದ ತಂಗಿದ್ದ ರಾಜಮಹಲ್ ಹೋಟೆಲ್ನ 811ನೇ ಸಂಖ್ಯೆಯ ಕೊಠಡಿಯನ್ನು ಬೆಳಗ್ಗೆ 10ಕ್ಕೆ ಖಾಲಿ ಮಾಡಿ ತೆರಳಿದ್ದಾರೆ ಎಂದು ತಿಳಿದು ಬಂದಿದೆ.
ಸದ್ಯ ಅವರು ಎಲ್ಲಿದ್ದಾರೆ ಎಂಬ ಮಾಹಿತಿ ಇಲ್ಲ. ಆದರೆ ಕೂಗಳತೆಯಷ್ಟು ದೂರದಲ್ಲಿದ್ದ ಖಾಸಗಿ ಪಂಚತಾರಾ ಹೋಟೆಲ್, ಅನತಿ ದೂರದಲ್ಲಿದ್ದ ತಮ್ಮ ಸರ್ಕಾರಿ ನಿವಾಸ ಬಿಟ್ಟು ಇಲ್ಲಿ ಇಷ್ಟೊಂದು ಚಿಕ್ಕ ಜಾಗದಲ್ಲಿ ಹೇಗೆ ತಂಗಿದ್ದರು ಎನ್ನುವುದೇ ಕುತೂಹಲಕ್ಕೆ ಕಾರಣವಾಗಿದೆ.