ಆನೇಕಲ್:ಜೂನ್ 10 ಹಾಗೂ 11ರಂದು ಜಿಗಣಿ ಹಾಗೂ ಬನ್ನೇರುಘಟ್ಟ ಸುತ್ತಮುತ್ತ ವಿದ್ಯುತ್ ಪೂರೈಕೆ ಇಲ್ಲ ಎಂದು ಬೆಸ್ಕಾಂ ಇಲಾಖೆ ಪ್ರಕಟಿಸಿದೆ.
ಇಂದು - ನಾಳೆ ಜಿಗಣಿ, ಬನ್ನೇರುಘಟ್ಟ ಭಾಗಗಳಲ್ಲಿ ಕರೆಂಟ್ ಕಟ್ - ಬೆಂಗಳೂರಿನಲ್ಲಿ ವಿದ್ಯುತ್ ಕಟ್,
ಇಂದು - ನಾಳೆ ಜಿಗಣಿ ಹಾಗೂ ಬನ್ನೇರುಘಟ್ಟ ಸುತ್ತಮುತ್ತ ಕರೆಂಟ್ ಕಟ್ ಮಾಡಲಾಗುವುದು ಎಂದು ಬೆಸ್ಕಾಂ ಇಲಾಖೆ ಪ್ರಕಟಿಸಿದೆ.

ಜಿಗಣಿ, ಬನ್ನೇರುಘಟ್ಟ ಭಾಗಗಳಲ್ಲಿ ಕರೆಂಟ್ ಕಟ್
ನೂತನ ವಿದ್ಯುತ್ ಮಾರ್ಗದ ಕಾಮಗಾರಿ ಹಿನ್ನೆಲೆ ವಿದ್ಯುತ್ ನಿಲ್ಲಿಸಲಾಗುವುದು. ಸಿ.ಕೆ ಪಾಳ್ಯ, ವಡೇರಹಳ್ಳಿ, ಸಕಲವಾರ, ಹುಲ್ಲಹಳ್ಳಿ, ಕಲ್ಕೆರೆ, ಜಿಗಣಿ, ಕಲ್ಲುಬಾಳು, ಕೊಪ್ಪ ಹಾಗೂ ನಿಸರ್ಗ ಬಡಾವಣೆಯಲ್ಲಿ ಬೆಳ್ಳಗೆ 11 ರಿಂದ ಸಂಜೆ 3 ಗಂಟೆವರೆಗೆ ವಿದ್ಯುತ್ ಸ್ಥಗಿತಗೊಳಿಸಲಾಗುವುದು ಎಂದು ಬೆಸ್ಕಾಂ ಅಧಿಕಾರಿಗಳಿಂದ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಲಾಗಿದೆ.
ಇನ್ನು ಸಾರ್ವಜನಿಕರು ಸಹಕರಿಸುವಂತೆ ಬೆಸ್ಕಾಂ ಇಲಾಖೆ ಮನವಿ ಮಾಡಿದೆ.