ಬೆಂಗಳೂರು: ಭಾರಿ ಮಳೆಯಿಂದಾಗಿ ವಿದ್ಯುತ್ ಪರಿವರ್ತಕದ ಪಕ್ಕದಲ್ಲೇ ಹೋಗುತ್ತಿದ್ದ ಹಸುವಿಗೆ ಶಾಕ್ ಹೊಡೆದು ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆ ಬನ್ನೇರುಘಟ್ಟ ಸಮೀಪದ ಬಿಲವಾರದಹಳ್ಳಿ ರಸ್ತೆ ಬಳಿ ನಡೆದಿದೆ.
ಬನ್ನೇರುಘಟ್ಟದಲ್ಲಿ ವಿದ್ಯುತ್ ಸ್ಪರ್ಶಿಸಿ ಹಸು ಸಾವು, ರೈತ ಪಾರು - ಬೆಂಗಳೂರು ವಿದ್ಯುತ್ ಶಾಕ್ ಹೊಡೆದು ಹಸು ಸಾವು ಸುದ್ದಿ
ನಿನ್ನೆ ಗ್ರಾಮದ ರೈತ ಹಸುಗಳನ್ನು ಹೊಲದ ಕಡೆ ಮೇಯಿಸಲು ಕರೆದುಕೊಂಡು ಹೋಗಿದ್ದಾಗ ಘಟನೆ ಜರುಗಿದೆ. ಪರಿವರ್ತಕದ ಸುತ್ತ ಯಾವುದೇ ರಕ್ಷಾ ಕವಚ ಇಲ್ಲದಿರುವುದು ದುರಂತಕ್ಕೆ ಕಾರಣ ಎಂದು ಹೇಳಲಾಗಿದೆ. ಅದೃಷ್ಟವಶಾತ್ ಜೊತೆಯಲ್ಲಿದ್ದ ಮತ್ತೊಂದು ಹಸು ಹಾಗೂ ರೈತ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವಿದ್ಯುತ್ ಸ್ಪರ್ಶಿಸಿ ಹಸು ಸಾವು
ನಿನ್ನೆ ಗ್ರಾಮದ ರೈತ ಹಸುಗಳನ್ನು ಹೊಲದ ಕಡೆ ಮೇಯಿಸಲು ಕರೆದುಕೊಂಡು ಹೋಗಿದ್ದಾಗ ಘಟನೆ ಜರುಗಿದೆ. ಪರಿವರ್ತಕದ ಸುತ್ತ ಯಾವುದೇ ರಕ್ಷಾ ಕವಚ ಇಲ್ಲದಿರುವುದು ದುರಂತಕ್ಕೆ ಕಾರಣ ಎಂದು ಹೇಳಲಾಗಿದೆ. ಅದೃಷ್ಟವಶಾತ್ ಜೊತೆಯಲ್ಲಿದ್ದ ಮತ್ತೊಂದು ಹಸು ಹಾಗೂ ರೈತ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪರಿವರ್ತಕದ ಸುತ್ತಲೂ ರಕ್ಷಣಾ ಕವಚ ಹಾಕಿ ಮುನ್ನೆಚ್ಚರಿಕೆ ಕ್ರಮ ವಹಿಸುವ ಬಗ್ಗೆ ಸಾಕಷ್ಟು ಬಾರಿ ಬೆಸ್ಕಾಂ ಅಧಿಕಾರಿಗಳಿಗೆ ದೂರು ನೀಡಿದರು ಸಹ, ತಲೆ ಕೆಡಿಸಿಕೊಳ್ಳದೆ ಇರುವುದು ಪದೇ ಪದೆ ಇಂತಹ ದುರ್ಘಟನೆಗೆ ಕಾರಣವಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.