ಮಹದೇವಪುರ: ದಕ್ಷಿಣ ಭಾರತದ ಅತೀ ದೊಡ್ಡ ವಿದ್ಯುತ್ ಚಾಲಿತ ಕಾರುಗಳ ಚಾರ್ಜಿಂಗ್ ಪಾಯಿಂಟ್ ಅನ್ನು ಲೋಕಾರ್ಪಣೆಗೊಳಿಸಲಾಗಿದೆ. ಮಹದೇವಪುರ ಕ್ಷೇತ್ರದ ವೈಟ್‌ಫೀಲ್ಡ್ ಫೋರಂ ನೈಬರ್‌ಹುಡ್ ಮಾಲ್‌ನಲ್ಲಿ ಫಿನ್‌ಲ್ಯಾಂಡ್ ದೇಶದ ಸಹಯೋಗದಲ್ಲಿ ಫಾರ್ಟಮ್ ಚಾರ್ಜ್ ಆಂಡ್ ಡ್ರೈವ್ ಇಂಡಿಯಾ ಕಂಪನಿ ಆರಂಭ ಮಾಡಲಾಗಿದೆ. ಏಕಕಾಲದಲ್ಲಿ ಸುಮಾರು 50 ಕಾರುಗಳನ್ನಿಲ್ಲಿ ಚಾರ್ಜ್ ಮಾಡಬಹುದು.
ದ.ಭಾರತದ ಅತೀ ದೊಡ್ಡ ಎಲೆಕ್ಟ್ರಿಕ್ ಕಾರುಗಳ ಚಾರ್ಜಿಂಗ್ ಪಾಯಿಂಟ್ ಲೋಕಾರ್ಪಣೆ - ಮಹದೇವಪುರದಲ್ಲಿ ವಿದ್ಯುತ್ ಚಾಲಿತ ಕಾರುಗಳ ಚಾರ್ಜಿಂಗ್ ಪಾಯಿಂಟ್
ಮಹದೇವಪುರ ಕ್ಷೇತ್ರದ ವೈಟ್‌ಫೀಲ್ಡ್ ಫೋರಂ ನೈಬರ್‌ಹುಡ್ ಮಾಲ್‌ನಲ್ಲಿ ಫಿನ್ ಲ್ಯಾಂಡ್ ದೇಶದ ಸಹಯೋಗದಲ್ಲಿ ಫಾರ್ಟಮ್ ಚಾರ್ಜ್ ಆಂಡ್ ಡ್ರೈವ್ ಇಂಡಿಯಾ ಕಂಪನಿ ಆರಂಭ ಮಾಡಲಾಗಿದೆ. ಏಕಕಾಲದಲ್ಲಿ ಸುಮಾರು 50 ಕಾರುಗಳನ್ನಿಲ್ಲಿ ಚಾರ್ಜ್ ಮಾಡಬಹುದು.
ದಕ್ಷಿಣ ಭಾರತದ ಅತೀ ದೊಡ್ಡ ವಿದ್ಯುತ್ ಚಾಲಿತ ಕಾರುಗಳ ಚಾರ್ಜಿಂಗ್ ಪಾಯಿಂಟ್ ಲೋಕಾರ್ಪಣೆ
ಚಾರ್ಜಿಂಗ್ ಪಾಯಿಂಟ್ ಉದ್ಘಾಟಿಸಿ ಮಾತನಾಡಿದ ಶಾಸಕ ಅರವಿಂದ ಲಿಂಬಾವಳಿ, 'ದಿನದಿಂದ ದಿನಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರುತ್ತಿದೆ. ಇದರ ಜೊತೆಗೆ, ವಾಯು ಮಾಲಿನ್ಯ ನಿಯಂತ್ರಣ ಮಾಡಲು ಎಲೆಕ್ಟ್ರಿಕ್ ವಾಹನಗಳು ತುಂಬಾ ಸಹಕಾರಿ. ಎಲೆಕ್ಟ್ರಿಕ್ ಕಾರುಗಳನ್ನು ಸಾಕಷ್ಟು ದೇಶಗಳಲ್ಲಿ ಬಳಸುತ್ತಿದ್ದಾರೆ. ಅದೇ ರೀತಿ ನಮ್ಮ ದೇಶದಲ್ಲೂ ಹೆಚ್ಚಾಗಿ ಬಳಕೆ ಮಾಡಿದ್ದಲ್ಲಿ ಪರಿಸರ ಮಾಲಿನ್ಯ ನಿಯಂತ್ರಣದಿಂದ ಕಡಿಮೆ ಮಾಡಬಹುದು' ಎಂದರು.
ಇದನ್ನೂ ಓದಿ: ರಮೇಶ್ ಜಾರಕಿಹೊಳಿಗೆ ಮಂತ್ರಿ ಸ್ಥಾನ ಕೊಡಲೇಬೇಕು: ಶಾಸಕ ಯತ್ನಾಳ ಆಗ್ರಹ