ಯಲಹಂಕ: ಬೆಂಗಳೂರು ಮಹಾನಗರದಲ್ಲಿ ವಿದ್ಯುತ್ ಚಾಲಿತ ಬಸ್ಗಳು ಸಂಚರಿಸಲಿವೆ. ಯಲಹಂಕದಲ್ಲಿ ಇಂದು ವಿದ್ಯುತ್ ಚಾಲಿತ ಬಸ್ಗಳಿಗೆ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ವರ್ಚುಯಲ್ ಮೂಲಕ ಚಾಲನೆ ನೀಡಲಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಬಿಎಂಟಿಸಿ, ಪ್ರಯಾಣಿಕರ ಸಂಚಾರಕ್ಕೆ ವಿದ್ಯುತ್ ಚಾಲಿತ ಬಸ್ ಸೇವೆಯನ್ನ ನೀಡಲಿದೆ. ಪ್ರಥಮ ಹಂತದಲ್ಲಿ ಯಲಹಂಕದ ಪುಟ್ಟೇನಹಳ್ಳಿಯ ಘಟಕದಿಂದ 30 ರಿಂದ 100 ವಿದ್ಯುತ್ ಚಾಲಿತ ಬಸ್ಗಳು ಸಂಚಾರ ಮಾಡಲಿವೆ. ವಾಯು ಮಾಲಿನ್ಯ ಮತ್ತು ನಿರ್ವಹಣಾ ವೆಚ್ಚ ಕಡಿಮೆ ಮಾಡುವ ಕಾರಣಕ್ಕೆ ವಿದ್ಯುತ್ ಚಾಲಿತ ಬಸ್ಗಳನ್ನ ನಗರ ಸಂಚಾರಕ್ಕೆ ಬಳಸಲಾಗುತ್ತಿದೆ. ಕೇಂದ್ರ ಸರ್ಕಾರದ ಭಾರಿ ಕೈಗಾರಿಕಾ ಇಲಾಖೆಯ ಫೇಮ್ -2 ಯೋಜನೆಯಡಿ 300 ಬಸ್ಗಳು ಬಿಎಂಟಿಸಿಗೆ ಸೇರ್ಪಡೆಯಾಗಲಿವೆ.