ಬೆಂಗಳೂರು: ನಗರದ ಕೆ.ಜಿ. ರಸ್ತೆಯ ಪ್ರಭಾತ್ ಕಾಂಪ್ಲೆಕ್ಸ್ನಲ್ಲಿ ಚುನಾವಣಾ ಅಕ್ರಮ ಶಂಕೆ ಮೇರೆಗೆ ಚುನಾವಣಾಧಿಕಾರಿಗಳು ಹಾಗೂ ಪೊಲೀಸರು ದಾಳಿ ನಡೆಸಿ 100ಕ್ಕೂ ಅಧಿಕ ಮತದಾರರ ಮಾಹಿತಿ ಹೊಂದಿರುವ ಮಷಿನ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಚುನಾವಣಾ ಅಕ್ರಮ ಶಂಕೆ... ಪ್ರಭಾತ್ ಕಾಂಪ್ಲೆಕ್ಸ್ ಮೇಲೆ ದಾಳಿ - ಮತಗಟ್ಟೆ
ನಗರದ ಕೆ.ಜಿ. ರಸ್ತೆಯ ಪ್ರಭಾತ್ ಕಾಂಪ್ಲೆಕ್ಸ್ನಲ್ಲಿ ಚುನಾವಣಾ ಅಕ್ರಮ ಶಂಕೆ ಮೇರೆಗೆ ಚುನಾವಣಾಧಿಕಾರಿಗಳು ಹಾಗೂ ಪೊಲೀಸರು ದಾಳಿ ನಡೆಸಿ 100ಕ್ಕೂ ಅಧಿಕ ಮತದಾರರ ಮಾಹಿತಿ ಹೊಂದಿರುವ ಮಷಿನ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
phi ಅನ್ನುವ ಆ್ಯಪ್ ಹೊಂದಿರುವ ಮೆಷಿನ್ ಇದಾಗಿದ್ದು, ಮತದಾರನ ಹೆಸರನ್ನು ಈ ಆ್ಯಪ್ನಲ್ಲಿ ನಮೂದಿಸಿದರೆ ಮತದಾನ ಕೇಂದ್ರ ಸಹಿತ ಎಲ್ಲಾ ಮಾಹಿತಿ ಲಭ್ಯವಾಗುತ್ತದೆ. ಪರಿಶೀಲನೆ ವೇಳೆ ಹಿಂದಿನ ವಿಧಾನಸಭಾ ಚುನಾವಣೆ ಸಂದರ್ಭದ ಅಂಕಿ-ಅಂಶ ಸಹ ಪತ್ತೆಯಾಗಿದ್ದು, ಯಾವ ಮತಗಟ್ಟೆಯಲ್ಲಿ ಎಷ್ಟು ಶೇಕಡಾ ಮತದಾನವಾಗಿದೆ ಅನ್ನುವ ಅಂಕಿ-ಅಂಶಗಳು ಬರಲಿವೆ. ಮತದಾನದ ದಿನ ಮತದಾರರಿಗೆ ಮತಗಟ್ಟೆಯ ಬಗ್ಗೆ ಮಾಹಿತಿ ಸಿಗಲು ಅನುಕೂಲವಾಗಲು ಮಷಿನ್ ಬಳಸಿರುವ ಬಗ್ಗೆ ಕಚೇರಿ ಸಿಬ್ಬಂದಿಯಿಂದ ಅಧಿಕಾರಿಗಳಿಗೆ ಮಾಹಿತಿ ನೀಡಿರುವುದಾಗಿ ತಿಳಿದು ಬಂದಿದೆ.
ಇಬ್ರಾಹಿಂ ಖಲೀಲುಲ್ಲಾ ಎನ್ನುವವರಿಗೆ ಸೇರಿದ ಕಚೇರಿ ಇದಾಗಿದ್ದು, ಸಿಬ್ಬಂದಿ ಹೇಳಿಕೆಯಿಂದ ಕೆಲ ಅನುಮಾನ ಸೃಷ್ಟಿಯಾಗಿದೆ. ಈ ನಿಟ್ಟಿನಲ್ಲಿ ಖಲೀಲುಲ್ಲಾ ಎಂಬುವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.