ಕರ್ನಾಟಕ

karnataka

ETV Bharat / state

ಶಿವಾಜಿನಗರ ಉಪಚುನಾವಣೆ: ಅಕ್ರಮ ತಡೆಯಲು ಸಿದ್ದವಾದ ಚುನಾವಣಾ ಆಯೋಗ

ಡಿಸೆಂಬರ್‌ 5 ಕ್ಕೆ ಶಿವಾಜಿನಗರ ಉಪಚುನಾವಣೆ ನಡೆಯಲಿದ್ದು, ಕಣದಲ್ಲಿರುವ ಅಭ್ಯರ್ಥಿಗಳು ಪ್ರಚಾರದಲ್ಲಿ ಬ್ಯುಸಿಯಾಗಿದ್ರೆ. ಇತ್ತ ಚುನಾವಣಾ ಅಯೋಗ ಕೂಡ ಉಪ ಕದನಕ್ಕೆ ಸಕಲ ಸಿದ್ದತೆ ಮಾಡಿಕೊಂಡಿದ್ದು, ಅಕ್ರಮ ತಡೆಯಲು ಹದ್ದಿನ ಕಣ್ಣುಇಟ್ಟಿದೆ.

ಶಿವಾಜಿನಗರ ಉಪಚುನಾವಣೆ: ಅಕ್ರಮ ತಡೆಯಲು ಸಿದ್ದವಾದ ಚುನಾವಣಾ ಆಯೋಗ

By

Published : Nov 23, 2019, 2:24 AM IST

ಶಿವಾಜಿನಗರ:ಡಿಸೆಂಬರ್‌ 5ರಂದು ಶಿವಾಜಿನಗರ ಉಪಚುನಾವಣೆ ನಡೆಯಲಿದ್ದು, ಕಣದಲ್ಲಿರುವ ಅಭ್ಯರ್ಥಿಗಳು ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ಚುನಾವಣಾ ಅಯೋಗ ಕೂಡ ಉಪ ಕದನಕ್ಕೆ ಸಕಲ ಸಿದ್ದತೆ ಮಾಡಿಕೊಂಡಿದ್ದು, ಅಕ್ರಮ ತಡೆಯಲು ಹದ್ದಿನ ಕಣ್ಣುಇಟ್ಟಿದೆ ಎಂದು ಚುನಾವಣಾಧಿಕಾರಿ ನಟೇಶ್ ತಿಳಿಸಿದ್ದಾರೆ.

ಶಿವಾಜಿನಗರ ಉಪಚುನಾವಣೆ: ಅಕ್ರಮ ತಡೆಯಲು ಸಿದ್ದವಾದ ಚುನಾವಣಾ ಆಯೋಗ

ಉಪಚುನಾವಣೆಗೆ ಚುನಾವಣಾ ಅಯೋಗ ಸಕಲ ಸಿದ್ದತೆ ಮಾಡಿಕೊಂಡಿದ್ಧು, ಜಿಲ್ಲಾ ಚುನಾವಣೆಗೆ ಅಗತ್ಯವಿರುವಷ್ಟು ಇವಿಎಂ ಮೆಷಿನ್​​​ಗಳನ್ನು ನಮಗೆ ಹಸ್ತಾಂತರಿಸಿದ್ದು, ನಮ್ಮ ಸ್ಟ್ರಾಂಗ್ ರೂಂನಲ್ಲಿ ಇವಿಎಂ ಮೆಷಿನ್​​ಗಳನ್ನು ಇಡಲಾಗಿದೆ ಎಂದರು. ಅಲ್ಲದೆ ಚುನಾವಣೆ ನೀತಿ ಸಂಹಿತೆ ವಿಚಾರವಾಗಿ ಎಲ್ಲಾ ಅಭ್ಯರ್ಥಿಗಳು ಹಾಗೂ ಅಭ್ಯರ್ಥಿಗಳ ಏಜೆಂಟ್​ರನ್ನ ಕರೆದು ಕೋಡ್ ಆಫ್ ಕಂಡೆಕ್ಟ್ ಬಗ್ಗೆ ಮಾಹಿತಿ ನೀಡಿದ್ದು. ಶಿವಾಜಿನಗರ ವ್ಯಾಪ್ತಿಯಲ್ಲಿ ನಾಲ್ಕು ಚೆಕ್ ಪೋಸ್ಟ್​​​ಗಳಿದ್ದು, ಮೂರು ಪಾಳಿಗಳಲ್ಲಿ ನಮ್ಮ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ನಾಲ್ಕು ಚೆಕ್ ಪೋಸ್ಟ್​​​ಗಳಲ್ಲಿ ಒಡಾಡುವ ವಾಹನಗಳನ್ನು ಚೆಕ್ ಮಾಡಿ ಚಾಲಕರ ಸಂಪೂರ್ಣ ಡಿಟೇಲ್ಸ್​​ ಸಂಗ್ರಹಿಸುತ್ತಿದ್ದೇವೆ ಎಂದರು.

ಅಭ್ಯರ್ಥಿಗಳು ನಾಲ್ಕರಿಂದ ಐದು ಜನರೊಂದಿಗೆ ಮನೆ ಮನೆಗೆ ಹೋಗಿ ಮತ ಕೇಳಲು ನಮ್ಮ ಕಡೆಯಿಂದ ಯಾವುದೇ ಅನುಮತಿ ಇಲ್ಲ ,ಜೊತೆಗೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರಚಾರ ಮಾಡಬೇಕಾದರೆ ಅನುಮತಿ ಕಡ್ಡಾಯವಾಗಿದೆ. ಅಲ್ಲದೆ ಈಗಾಗಲೇ ಶಿವಾಜಿನಗರ ಮತದಾರರ ಪಟ್ಟಿ ಅಂತಿಮವಾಗಿದ್ದು, 2 ಲಕ್ಷದ ಐದು ಸಾವಿರ ಮತದಾರರಿದ್ದು ಒಟ್ಟು 195 ಬೂತ್​ಗಳಿವೆ ಎಂದು ಶಿವಾಜಿನಗರದ ಉಪಚುನಾವಣೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.

ABOUT THE AUTHOR

...view details