ಬೆಂಗಳೂರು:ಚುನಾವಣಾ ಅಕ್ರಮಗಳ ಮೇಲೆ ನಿಗಾವಹಿಸಿರುವ ಚುನಾವಣಾ ಆಯೋಗವು ಇಂದು 2.80 ಕೋಟಿ ರೂ. ನಗದು ವಶಪಡಿಸಿಕೊಂಡಿದೆ. ರಾಮದುರ್ಗ ಕ್ಷೇತ್ರದಲ್ಲಿ 1.53 ಕೋಟಿ ರೂ. ನಗದು, ಹಿರಿಯೂರು ಕ್ಷೇತ್ರದಲ್ಲಿ 62.10 ಲಕ್ಷ ರೂ. ಮೌಲ್ಯದ 1.112 ಕೆಜಿ ಚಿನ್ನ, ತರಿಕೇರಿ ಕ್ಷೇತ್ರದಲ್ಲಿ 23.51 ಕೋಟಿ ರೂ. ಮೌಲ್ಯದ 40.590 ಕೆಜಿ ಚಿನ್ನ, 20.695 ಕೆಜಿ ಬೆಳ್ಳಿ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.
ರಾಯಚೂರು ನಗರ ಕ್ಷೇತ್ರದಲ್ಲಿ 82.71 ಲಕ್ಷ ರೂ. ಮೌಲ್ಯದ 1.7824 ಕೆಜಿ ಚಿನ್ನ, 28 ಲಕ್ಷ ರೂ ಮೌಲ್ಯದ 70 ಕೆಜಿ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ ಇಲ್ಲಿಯವರೆಗೆ ಒಟ್ಟು 79.51 ಕೋಟಿ ರು. ನಗದು, 18.71 ಕೋಟಿ ರು. ಮೌಲ್ಯದ ಉಚಿತ ಕೊಡುಗೆಗಳನ್ನು ಜಪ್ತಿ ಮಾಡಲಾಗಿದೆ.
47.93 ಕೋಟಿ ರು. ಮೌಲ್ಯದ 12.52 ಲಕ್ಷ ಲೀಟರ್ ಮದ್ಯ, 15.82 ಕೋಟಿ ರು. ಮೌಲ್ಯದ 1,047.96 ಕೆಜಿ ಮಾದಕ ವಸ್ತುಗಳು, 73.46 ಕೋಟಿ ರು. ಮೌಲ್ಯದ 144.27 ಕೆಜಿ ಚಿನ್ನ, 77.52 ಕೋಟಿ ರು. ಮೌಲ್ಯದ 726.16 ಕೆಜಿ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ನಗದು, ಮದ್ಯ ಸೇರಿದಂತೆ ಒಟ್ಟು 239.52 ಕೋಟಿ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಆಯೋಗ ತಿಳಿಸಿದೆ.
1,714 ಎಫ್‌ಐಆರ್, 69,534 ಶಸ್ತ್ರಾಸ್ತ್ರಗಳನ್ನು ಜಮೆ ಮಾಡಿಸಿಕೊಳ್ಳಲಾಗಿದೆ. 18 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. 20 ಶಸ್ತ್ರಾಸ್ತ್ರಗಳ ಪರವಾನಿಗೆ ರದ್ದು ಪಡಿಸಲಾಗಿದೆ. ಸಿಆರ್‌ಪಿಸಿ ಕಾಯ್ದೆಯಡಿ 4,447 ಪ್ರಕರಣಗಳನ್ನು ದಾಖಲಿಸಲಾಗಿದೆ. 6,891 ವ್ಯಕ್ತಿಗಳಿಂದ ಮುಚ್ಚಳಿಕೆ ಪತ್ರ ಪಡೆಯಲಾಗಿದೆ. 11,677 ಜಾಮೀನು ರಹಿತ ವಾರೆಂಟ್‌ಗಳನ್ನು ಜಾರಿಗೊಳಿಸಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.
ರಾಜ್ಯದಲ್ಲಿ ಚುನಾವಣೆಯಲ್ಲಿ ಈ ಬಾರಿ ಕುರುಡು ಕಾಂಚಾಣದ ಕುಣಿತ ಜೋರಾಗಿದೆ. ಅಕ್ರಮ ನಗದು, ಮದ್ಯ, ವಸ್ತುಗಳ ಜಪ್ತಿ ಮೊತ್ತ 150 ಕೋಟಿ ರೂ. ಗಡಿ ದಾಟಿ 161.66 ಕೋಟಿ ರೂ.ಗೆ ತಲುಪಿದೆ. ಮಾರ್ಚ್ 29ರಿಂದ ಇಲ್ಲಿವರೆಗೆ ಚುನಾವಣಾ ಆಯೋಗ 161.66 ಕೋಟಿ ರೂ. ನಗದು, ಮದ್ಯ, ವಸ್ತುಗಳನ್ನು ವಶಕ್ಕೆ ಪಡೆದಿದೆ ಎಂಬುದು ತಿಳಿದುಬಂದಿದೆ.
ಚುನಾವಣೆಯ ವಿವಿಧ ಜಾಗೃತ ದಳಗಳಿಂದ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಮಾದರಿ ನೀತಿ ಸಂಹಿತೆ, ಚುನಾವಣಾ ವೆಚ್ಚ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯನ್ನು ಉಲ್ಲಂಘಿಸಿರುವ ಕುರಿತು ಕಾರ್ಯಾಚರಣೆ ನಡೆಸಿ ಕೋಟಿ ಕೋಟಿ ಅಕ್ರಮ ನಗದು, ಮದ್ಯ, ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂಬುದು ತಿಳಿದುಬಂದಿದೆ. ಒಟ್ಟು ಜಪ್ತಿ ಮಾಡಿದ ನಗದು 67.34 ಕೋಟಿ ರೂ. ಫ್ರೀಬೀಸ್ ಗಳ ಮೌಲ್ಯ 18.44 ಕೋಟಿ ರೂ, ಮದ್ಯ 33.91 ಕೋಟಿ ರೂ. ಮೊತ್ತ, ಡ್ರಗ್ಸ್ ಮತ್ತು ಮಾದಕ ವಸ್ತುಗಳ ಮೊತ್ತ 13.35 ಕೋಟಿ ರೂ. ಚಿನ್ನ 26 ಕೋಟಿ ರೂ, ಬೆಳ್ಳಿ ವಸ್ತುಗಳು 2.59 ಕೋಟಿ ರೂ. ಆಗಿದೆ.
ಇದನ್ನೂ ಓದಿ:ಚುನಾವಣಾ ಅಕ್ರಮ: ಒಟ್ಟು 161.66 ಕೋಟಿ ನಗದು, ಮದ್ಯ, ವಸ್ತುಗಳ ಜಪ್ತಿ