ಕರ್ನಾಟಕ

karnataka

ಬೈ ಎಲೆಕ್ಷನ್ ಕಾರಣ ಪರಿಷತ್​​ ಚುನಾವಣೆ ಮತ ಎಣಿಕೆ ಮುಂದೂಡಿದ ಚುನಾವಣಾ ಆಯೋಗ

By

Published : Nov 1, 2020, 2:03 AM IST

ಶಿರಾ, ರಾಜರಾಜೇಶ್ವರಿ ನಗರದ ಉಪಚುನಾವಣೆ ಫಲಿತಾಂಶ ಹೊರಬೀಳುವ ದಿನವೇ ವಿಧಾನ ಪರಿಷತ್​ ಚುನಾವಣೆ ಮತ ಎಣಿಕೆ ಕಾರ್ಯ ನಡೆಯಲಿದ್ದು, ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ.

Election commission
Election commission

ಬೆಂಗಳೂರು :ಇದೇ ತಿಂಗಳ 28ರಂದು ನಡೆದಿದ್ದ ವಿಧಾನ ಪರಿಷತ್​ನ ನಾಲ್ಕು ಸ್ಥಾನಗಳ ಚುನಾವಣೆಯ ಮತ ಎಣಿಕೆ ಕಾರ್ಯ ನವೆಂಬರ್​ 2ರ ಬದಲಾಗಿ ನವೆಂಬರ್​ 10ರಂದು ನಡೆಯಲಿದೆ ಎಂದು ಚುನಾವಣಾ ಆಯೋಗ ಪ್ರಕಟಣೆ ಹೊರಡಿಸಿದೆ.

ಆಗ್ನೇಯ ಪದವೀಧರ ಕ್ಷೇತ್ರ, ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರ, ಬೆಂಗಳೂರು ಶಿಕ್ಷಕರ ಕ್ಷೇತ್ರ ಮತ್ತು ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ಅಕ್ಟೋಬರ್ 28ರಂದು ಮತದಾನ ನಡೆದಿತ್ತು. ಇದರ ಫಲಿತಾಂಶ ನವೆಂಬರ್​ 2ರಂದು ಬಹಿರಂಗಗೊಳ್ಳಬೇಕಾಗಿತ್ತು. ಆದರೆ ನವೆಂಬರ್​ 3ರಂದು ನಡೆಯಲಿರುವ ಶಿರಾ ಹಾಗೂ ರಾಜರಾಜೇಶ್ವರಿ ನಗರದ ಉಪಚುನಾವಣೆ ಫಲಿತಾಂಶ ನವೆಂಬರ್​ 10ರಂದು ಪ್ರಕಟಗೊಳ್ಳುವ ಕಾರಣ ಅದೇ ದಿನ ವಿಧಾನಪರಿಷತ್​ ಚುನಾವಣೆ ಫಲಿತಾಂಶ ಬಹಿರಂಗಗೊಳ್ಳಲಿದೆ.

ಯಾಕೆ ಈ ನಿರ್ಧಾರ!?

ಪರಿಷತ್ ಫಲಿತಾಂಶದ ಮರುದಿನವೇ ಉಪ ಚುನಾವಣೆ ನಡೆಯುವುದರಿಂದ ಚುನಾವಣಾ ಸಿಬ್ಬಂದಿ ಕರ್ತವ್ಯ ನಿರ್ವಹಿಸಲು ತೊಂದರೆಯಾಗುವ ಸಾಧ್ಯತೆ ಇದೆ. ಹೀಗಾಗಿ ದಿನಾಂಕವನ್ನು ಮುಂದೂಡಲಾಗಿದೆ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.‌ ಇದರ ಜತೆಗೆ ಕಾಂಗ್ರೆಸ್ ಪಕ್ಷ ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಮುಂದೂಡುವಂತೆ ಮನವಿ ಮಾಡಿತ್ತು.

ಈ ಮನವಿ ಪರಿಶೀಲನೆ ನಡೆಸಿದ ಚುನಾವಣಾ ಆಯೋಗವು ಎರಡು ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುವುದರಿಂದ ಫಲಿತಾಂಶ ಪ್ರಕಟಿಸಲು ಎದುರಾಗುವ ಸಮಸ್ಯೆ ಕುರಿತು ಮಾಹಿತಿ ನೀಡುವಂತೆ ರಾಜ್ಯ ಚುನಾವಣಾಧಿಕಾರಿಗೆ ನಿರ್ದೇಶನ ನೀಡಿತ್ತು. ಆಯೋಗದ ನಿರ್ದೇಶನದ ಮೇರೆಗೆ ಚುನಾವಣಾಧಿಕಾರಿಗಳು ನೀಡಿರುವ ವರದಿಯನ್ನು ಮುಖ್ಯ ಚುನಾವಣಾಧಿಕಾರಿಗಳು ರವಾನಿಸಿದ್ದರು. ಇದನ್ನು ಗಮನಿಸಿದ ಆಯೋಗವು ಉಪಚುನಾವಣೆಯ ದಿನದಂದೇ ವಿಧಾನಪರಿಷತ್‌ನ ನಾಲ್ಕು ಸ್ಥಾನಗಳ ಫಲಿತಾಂಶ ಪ್ರಕಟಿಸುವ ಬಗ್ಗೆ ತೀರ್ಮಾನ ಕೈಗೊಂಡು ಈ ಆದೇಶ ಹೊರಹಾಕಿದೆ.

ABOUT THE AUTHOR

...view details