ಬೆಂಗಳೂರು : ಶಿವಾಜಿನಗರ ಉಪ ಸಮರ ರಂಗೇರಿದ್ದು, ಬಿಜೆಪಿ ಅಭ್ಯರ್ಥಿ ಎಂ. ಶರವಣ ಪರ ಸಚಿವ ವಿ. ಸೋಮಣ್ಣ ಹಾಗೂ ನಟ ಜಗ್ಗೇಶ್ ಅಖಾಡಕ್ಕೆ ಇಳಿದು ಮತ ಮತಯಾಚನೆ ಮಾಡಿದ್ರು.
ಶಿವಾಜಿನಗರ: ಅಭ್ಯರ್ಥಿ ಪರ ಮತಯಾಚನೆ ಮಾಡಿದ ಸೋಮಣ್ಣ, ಜಗ್ಗೇಶ್!
ಶಿವಾಜಿನಗರದ ಕ್ವೀನ್ಸ್ ರೋಡ್ನಲ್ಲಿರುವ ರಾಜೀವ್ ಗಾಂಧಿ ಕಾಲೋನಿಯಲ್ಲಿ ಬಿಜೆಪಿ ಅಭ್ಯರ್ಥಿ ಎಂ ಶರವಣ ಪರ ಸಚಿವ ವಿ ಸೋಮಣ್ಣ ಹಾಗೂ ನಟ ಜಗ್ಗೇಶ್ ಅಖಾಡಕ್ಕೆ ಇಳಿದು ಮತ ಮತಯಾಚನೆ ಮಾಡಿದ್ರು.
ಕ್ವೀನ್ಸ್ ರೋಡ್ನಲ್ಲಿರುವ ರಾಜೀವ್ ಗಾಂಧಿ ಕಾಲೋನಿಯಲ್ಲಿ ಪ್ರಚಾರದ ವೇಳೆ ಮಾತನಾಡಿದ ಸಚಿವ ವಿ ಸೋಮಣ್ಣ, ಶಿವಾಜಿನಗರ ಪ್ರತಿಷ್ಠಿತ ವಿಧಾನ ಸಭಾ ಕ್ಷೇತ್ರವಾಗಿದೆ. ಬಡವರು ಹಾಗೂ ಬುದ್ಧಿಜೀವಿಗಳು ವಾಸಮಾಡುತ್ತಿರುವ ತಾಣವಾಗಿದೆ. ಶಿವಾಜಿನಗರದ ಪ್ರಭಾವಿ ನಾಯಕರಾದ ಕಾರ್ಪೊರೇಟರ್ ಗುಣಶೇಖರ್ ಅವರು ಕಾಂಗ್ರೆಸ್ನಲ್ಲಿ ಬೇಜಾರಾಗಿ ಈಗ ನಮ್ಮ ಜೊತೆ ಕೈಜೋಡಿಸಿದ್ದಾರೆ.
ನಂತರ ಮಾತಾನಡಿದ ಜಗ್ಗೇಶ್, ವಿರೋಧ ಪಕ್ಷದವರ ಬಗ್ಗೆ ವ್ಯಂಗ್ಯವಾಗಿ ಮಾತನಾಡಿ, 'ಯಾವ ಆಧಿಕಾರಿ ಅಧಿಕಾರದಲ್ಲಿ ಇರುತ್ತಾನೆ ಅವರಿಗೆ ಲೆಟರ್ ಕೊಟ್ರೆ ಕೆಲಸ ಆಗುತ್ತೆ. ಟ್ರಾನ್ಸ್ ಫರ್ ಅಥವಾ ರಿಟೈರ್ಡ್ ಆಗಿರುವ ಅಧಿಕಾರಿಗಳಿಗೆ ಲೆಟರ್ ಕೊಟ್ರೆ ಕೆಲಸ ಆಗಲ್ಲ'. ಅದ್ದರಿಂದ ಅಧಿಕಾರದಲ್ಲಿ ಇರುವ ಬಿಜೆಪಿಗೆ ಮತನೀಡಿ ನೀಡಿ ಎಂದು ಜಗ್ಗೇಶ್ ಮನವಿ ಮಾಡಿದರು. ಜೊತೆಗೆ ಸ್ಲಂ ನಿವಾಸಿಗಳಿಗೆ ಮನೆ ನಿರ್ಮಾಣ ಮಾಡಿಸಿ ಕೊಡುವ ಭರವಸೆ ನೀಡಿದರು.