ಕರ್ನಾಟಕ

karnataka

ETV Bharat / state

ಆರ್​. ಶಂಕರ್ ಗೆ ಪೌರಾಡಳಿತ, ಹೆಚ್​. ನಾಗೇಶ್ ಗೆ ಸಣ್ಣಕೈಗಾರಿಕೆ ಖಾತೆ... ನಿರೀಕ್ಷೆ ಹುಸಿ ಮಾಡದ ಸಿಎಂ - Kannada news,Etv Bhrath,Government,account ,allocation,ಆರ್​. ಶಂಕರ್, ಪೌರಾಡಳಿತ,ಹೆಚ್​. ನಾಗೇಶ್, ಸಣ್ಣಕೈಗಾರಿಕೆ, ಖಾತೆ, ಹಂಚಿಕೆ,ಮಾಡಿದ, ಸರ್ಕಾರ,ನೂತನ ಸಚಿವ,ಎಚ್ ಡಿ ಕುಮಾರಸ್ವಾಮಿ,ಬೆಂಗಳೂರು,

ನಿರೀಕ್ಷೆಯಂತೆ ಕಾಂಗ್ರೆಸ್ ಕಡೆಯಿಂದ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಆರ್ ಶಂಕರ್ ಗೆ ಪೌರಾಡಳಿತ ಖಾತೆ ನೀಡಲಾಗಿದ್ದು, ಜೆಡಿಎಸ್ ನಿಂದ ಸಚಿವರಾಗಿರುವ ಎಚ್ ನಾಗೇಶ್ ಗೆ ಸಣ್ಣ ಕೈಗಾರಿಕೆ ಖಾತೆ ನೀಡಲಾಗಿದೆ.

ನೂತನ ಸಚಿವರಾಗಿ ಆರ್​. ಶಂಕರ್,ಹೆಚ್​. ನಾಗೇಶ್ ಆಯ್ಕೆ

By

Published : Jun 24, 2019, 9:33 PM IST

ಬೆಂಗಳೂರು: ನೂತನ ಸಚಿವರ ನಿರೀಕ್ಷೆಯನ್ನು ಕಡೆಗೂ ಪೂರೈಸಿರುವ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಇಂದು ಸಂಜೆ ಸಚಿವರ ಖಾತೆ ಹಂಚಿಕೆ ಮಾಡಿದ್ದಾರೆ.

ನಿರೀಕ್ಷೆಯಂತೆ ಕಾಂಗ್ರೆಸ್ ಕಡೆಯಿಂದ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಆರ್ ಶಂಕರ್ ಗೆ ಪೌರಾಡಳಿತ ಖಾತೆ ನೀಡಲಾಗಿದ್ದು, ಜೆಡಿಎಸ್ ನಿಂದ ಸಚಿವರಾಗಿರುವ ಎಚ್ ನಾಗೇಶ್ ಗೆ ಸಣ್ಣ ಕೈಗಾರಿಕೆ ಖಾತೆ ನೀಡಲಾಗಿದೆ. ಇದುವರೆಗೂ ಈ ಖಾತೆಯನ್ನು ನಿಭಾಯಿಸುತ್ತಿದ್ದ ಸಚಿವ ಶ್ರೀನಿವಾಸ್ ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆಯನ್ನು ಮರು ಹಂಚಿಕೆ ಮಾಡಿಲಾಗಿದೆ.

ರಾಜ್ಯಪಾಲ ವಜುಭಾಯಿ ವಾಲಾ ಸಚಿವರ ನೂತನ ಖಾತೆಯ ಪಟ್ಟಿಗೆ ಸಹಿ ಮಾಡಿದ್ದಾರೆ. ಸರ್ಕಾರ ರಾಜ್ಯ ಪತ್ರದ ಮೂಲಕ ಅಧಿಕೃತ ಘೋಷಣೆ ಮಾಡಿದೆ.ಸಿಎಸ್ ಶಿವಳ್ಳಿ ನಿಧನದಿಂದ ತೆರವಾಗಿದ್ದ ಸಚಿವ ಸ್ಥಾನ ಹಾಗೂ ಅವರು ಹೊಂದಿದ್ದ ಪೌರಾಡಳಿತ ಖಾತೆ ಕಾಂಗ್ರೆಸ್ ಪಕ್ಷದ ಕಡೆಯಿಂದ ಸಚಿವರಾಗಿರುವ ಆರ್ ಶಂಕರ್ ಗೆ ಲಭಿಸಿದೆ. ಇವರು ತಮಗೆ ಈ ಹಿಂದೆ ತಾವು ನಿಭಾಯಿಸುತ್ತಿದ್ದ ಅರಣ್ಯ ಖಾತೆ ಇಲ್ಲವೇ ಸಚಿವ ಡಿಕೆ ಶಿವಕುಮಾರ್ ಬಳಿ ಇರುವ ಕನ್ನಡ ಮತ್ತು ಸಂಸ್ಕೃತಿ ಖಾತೆಯನ್ನು ನೀಡುವಂತೆ ಕೇಳಿಕೊಂಡಿದ್ದರು.

ಆದರೆ ಇವರ ಬೇಡಿಕೆಗೆ ಸ್ಪಂದನೆ ಸಿಕ್ಕಿಲ್ಲ. ಇನ್ನೊಂದೆಡೆ ಜೆಡಿಎಸ್ ಸಚಿವ ಸ್ಥಾನದಿಂದ ಕೆಳಗಿಳಿದಿದ್ದ ಎನ್ ಮಹೇಶ್ ನಿಭಾಯಿಸುತ್ತಿದ್ದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಹೊಸದಾಗಿ ಸಚಿವರಾದ ಎಚ್. ನಾಗೇಶ್ ಪಾಲಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಇವರಿಗೆ ಶ್ರೀನಿವಾಸ ಬಳಿಯಿದ್ದ ಸಣ್ಣ ಕೈಗಾರಿಕೆ ಖಾತೆಯನ್ನು ನೀಡಲಾಗಿದ್ದು, ಶ್ರೀನಿವಾಸ್ ಗೆ ಸಿಎಂ ಬಳಿಯಿದ್ದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ನೀಡಲಾಗಿದೆ. ನಾಗೇಶ್ ತಮಗೆ ಸಿಎಂ ಬಳಿ ಇರುವ ಅಬಕಾರಿ ಖಾತೆಯನ್ನು ನೀಡುವಂತೆ ಸಾಕಷ್ಟು ಒತ್ತಡ ಹೇರಿದ್ದರು. ಈ ಕಾರಣಕ್ಕಾಗಿಯೇ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿ ಹನ್ನೊಂದು ದಿನ ಕಳೆದರೂ ಖಾತೆ ಹಂಚಿಕೆ ಆಗಿರಲಿಲ್ಲ. ಸಾಕಷ್ಟು ಹಗ್ಗಜಗ್ಗಾಟದ ನಂತರ ಕೊನೆಗೂ ಖಾತೆ ಹಂಚಿಕೆ ಮಾಡಲಾಗಿದೆ.

For All Latest Updates

TAGGED:

ABOUT THE AUTHOR

...view details