ಬೆಂಗಳೂರು :ರಾಜಧಾನಿಯಲ್ಲಿ ಅನ್ಲಾಕ್ ನಂತರ ಸರಗಳ್ಳರು ಮತ್ತೆ ಬಾಲ ಬಿಚ್ಚಿದ್ದಾರೆ. ಬ್ಲ್ಯಾಕ್ ಪಲ್ಸರ್ ಬೈಕ್ನಲ್ಲಿ ಬಂದ ಖದೀಮರು, ವಿಜಯನಗರದ 2ನೇ ಕ್ರಾಸ್ನಲ್ಲಿ ಸರಗಳ್ಳತನ ಮಾಡಿ ಪರಾರಿಯಾಗಿದ್ದಾರೆ.
ಬೆಳಗಿನ ಜಾವ 6 ಗಂಟೆ ಸುಮಾರಿಗೆ ಈ ಘಟನೆ ನೆಡೆದಿದೆ. 72 ವರ್ಷದ ವಯೋವೃದ್ಧೆ ಇಂದ್ರಮ್ಮ ಎಂಬುವರ ಚಿನ್ನದ ಸರವನ್ನು ಬೈಕ್ನಲ್ಲಿ ಬಂದ ಇಬ್ಬರು ಸರಗಳ್ಳರು ಕದ್ದು ಪರಾರಿಯಾಗಿದ್ದಾರೆ.