ಕರ್ನಾಟಕ

karnataka

ETV Bharat / state

2021 ನೇ ಸಾಲಿನ ಏಕಲವ್ಯ, ಜೀವಮಾನ ಸಾಧನೆ, ಕ್ರೀಡಾರತ್ನ ಪ್ರಶಸ್ತಿ ಪ್ರದಾನ - ಕ್ರೀಡಾರತ್ನ ಪ್ರಶಸ್ತಿ ಪ್ರದಾನ

2021ನೇ ಸಾಲಿನ ಏಕಲವ್ಯ ಪ್ರಶಸ್ತಿ, ಜೀವಮಾನ ಸಾಧನೆ ಪ್ರಶಸ್ತಿ, ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿಯನ್ನು ರಾಜಭವನದ ಗಾಜಿನಮನೆಯಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಸ್ತಿ ಪ್ರದಾನಿಸಿ, ಪ್ರಶಸ್ತಿ ಪುರಸ್ಕೃತರನ್ನು ಗೌರವಿಸಿದರು.

ETV Bharath Karnataka
2021 ನೇ ಸಾಲಿನ ಏಕಲವ್ಯ, ಜೀವಮಾನ ಸಾಧನೆ, ಕ್ರೀಡಾರತ್ನ ಪ್ರಶಸ್ತಿ ಪ್ರದಾನ

By

Published : Dec 6, 2022, 1:23 PM IST

ಬೆಂಗಳೂರು: 2021ನೇ ಸಾಲಿನ ಏಕಲವ್ಯ ಪ್ರಶಸ್ತಿ, ಜೀವಮಾನ ಸಾಧನೆ ಪ್ರಶಸ್ತಿ, ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ಹಾಗೂ 2022 ನೇ ಸಾಲಿನ ಕ್ರೀಡಾ ಪೋಷಕ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. 36 ನೇ ರಾಷ್ಟ್ರೀಯ ಕ್ರೀಡಾಕೂಟ ಪದಕ ವಿಜೇತರಿಗೆ ನಗದು ಪುರಸ್ಕಾರ ಮಾಡಲಾಯಿತು. ರಾಜಭವನದ ಗಾಜಿನಮನೆಯಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಸ್ತಿ ನೀಡಿ, ಪ್ರಶಸ್ತಿ ಪುರಸ್ಕೃತರನ್ನು ಗೌರವಿಸಿದರು.

2021 ನೇ ಸಾಲಿನ ಏಕಲವ್ಯ, ಜೀವಮಾನ ಸಾಧನೆ, ಕ್ರೀಡಾರತ್ನ ಪ್ರಶಸ್ತಿ ಪ್ರದಾನ

ಏಕಲವ್ಯ ಪ್ರಶಸ್ತಿ: ಏಕಲವ್ಯ ಕಂಚಿನ ಪ್ರತಿಮೆ, ಪ್ರಶಸ್ತಿ ಪತ್ರ, ಸಮವಸ್ತ್ರ, 2 ಲಕ್ಷ ನಗದು ಬಹುಮಾನ ಒಳಗೊಂಡಿರುತ್ತದೆ.

ಜೀವಮಾನ ಸಾಧನೆ ಪ್ರಶಸ್ತಿ: ಪ್ರಶಸ್ತಿ ಫಲಕ, ಸಮವಸ್ತ್ರ, 1.50 ಲಕ್ಷ ನಗದು ಬಹುಮಾನ ಒಳಗೊಂಡಿದೆ.

ಕ್ರೀಡಾ ರತ್ನ ಪ್ರಶಸ್ತಿ: ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರ, ಸಮವಸ್ತ್ರ, 1 ಲಕ್ಷ ನಗದು ಬಹುಮಾನ ಒಳಗೊಂಡಿದೆ.

ಕ್ರೀಡಾ ಪೋಷಕ ಪ್ರಶಸ್ತಿ: ಪ್ರಶಸ್ತಿ ಪತ್ರ, 5 ಲಕ್ಷ ರೂ ನಗದು ಬಹುಮಾನ ಒಳಗೊಂಡಿದೆ.

2021 ನೇ ಸಾಲಿನ ಏಕಲವ್ಯ, ಜೀವಮಾನ ಸಾಧನೆ, ಕ್ರೀಡಾರತ್ನ ಪ್ರಶಸ್ತಿ ಪ್ರದಾನ
2021 ನೇ ಸಾಲಿನ ಏಕಲವ್ಯ ಪ್ರಶಸ್ತಿ ಪುರಸ್ಕೃತರು:
ಏಕಲವ್ಯ ಪ್ರಶಸ್ತಿ
ಹೆಸರು ವಿಭಾಗ
1 ಚೇತನ್ ಬಿ ಅಥ್ಲೆಟಿಕ್ಸ್
2 ಶಿಖಾ ಗೌತಮ್ ಬ್ಯಾಡ್ಮಿಂಟನ್
3 ಕೀರ್ತಿ ರಂಗಸ್ವಾಮಿ ಸೈಕ್ಲಿಂಗ್
4 ಅದಿತ್ರಿ ವಿಕ್ರಾಂತ್ ಪಾಟೀಲ್ ಫೆನ್ಸಿಂಗ್
5 ಅಮೃತ್ ಮುದ್ರಾಬೆಟ್ ಜಿಮ್ನಾಸ್ಟಿಕ್
6 ಶೇಷೇಗೌಡ ಬಿ.ಎಂ ಹಾಕಿ
7 ರೇಷ್ಮಾ ಮರೂರಿ ಲಾನ್ ಟೆನ್ನಿಸ್
8 ತನೀಷ್ ಜಾರ್ಜ್ ಮ್ಯಾಥ್ಯು ಈಜು
9 ಯಶಸ್ವಿನಿ ಘೋರ್ಪಡೆ ಟೇಬಲ್ ಟೆನ್ನಿಸ್
10 ಹರಿಪ್ರಸಾದ್ ವಾಲಿಬಾಲ್
11 ಸೂರಜ್ ಸಂಜು ಅಣ್ಣೀಕೇರಿ ಕುಸ್ತಿ
12 ಹೆಚ್.ಎಸ್. ಸಾಕ್ಷಾತ್ ನೆಟ್ ಬಾಲ್
13 ಮನೋಜ್ ಬಿ.ಎಂ ಬಾಸ್ಕೆಟ್ ಬಾಲ್
14 ರಾಘವೇಂದ್ರ ಪಿ ಪ್ಯಾರಾ ಅಥ್ಲೆಟಿಕ್ಸ್

2021 ನೇ ಸಾಲಿನ ಜೀವಮಾನ ಸಾಧನೆ ಪ್ರಶಸ್ತಿ ಪುರಸ್ಕೃತರು:

ಜೀವಮಾನ ಸಾಧನೆ ಪ್ರಶಸ್ತಿ ಪುರಸ್ಕೃತರು
ಹೆಸರು ವಿಭಾಗ
1 ಅಲ್ಕಾ ಎನ್ ಫಡತಾರೆ ಸೈಕ್ಲಿಂಗ್
2 ಬಿ.ಆನಂದ್ ಕುಮಾರ್ ಪ್ಯಾರಾ ಬ್ಯಾಡ್ಮಿಂಟನ್
3 ಹೆಚ್.ಎಲ್. ಶೇಖರಪ್ಪ ಯೋಗ
4 ಕೆ.ಸಿ.ಅಶೋಕ್ ವಾಲಿಬಾಲ್
5 ರವೀಂದ್ರ ಶೆಟ್ಟಿ ಕಬಡ್ಡಿ
6 ಬಿ.ಜಿ.ಅಮರನಾಥ್ ಯೋಗ

ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ಪುರಸ್ಕೃತರು:

ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ಪುರಸ್ಕೃತರು
ಹೆಸರು ವಿಭಾಗ
1 ಕವನ ಎಂ.ಎಂ ಬಾಲ್ ಬ್ಯಾಡ್ಮಿಂಟನ್
2 ಬಿ.ಗಜೇಂದ್ರ ಗುಂಡು ಎತ್ತುವುದು
3 ಶ್ರೀಧರ್ ಕಂಬಳ
4 ರಮೇಶ್ ಮಳವಾಡ್ ಖೋ-ಖೋ
5 ವೀರಭದ್ರ ಮುಧೋಳ್ ಮಲ್ಲಕಂಬ
6 ಖುಷಿ ಹೆಚ್ ಯೋಗ
7 ಲೀನಾ ಅಂತೋಣಿ ಸಿದ್ದಿ ಮಟ್ಟಿ ಕುಸ್ತಿ
8 ದರ್ಶನ್ ಜೆ ಕಬಡ್ಡಿ

2021-23 ನೇ ಸಾಲಿನ ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿ ಪುರಸ್ಕೃತರು:ಬಿ ಎಂ ಎಸ್ ಕಾಲೇಜು, ಮಂಗಳ ಪ್ರೆಂಡ್ಸ್ ಸರ್ಕಲ್ ಮತ್ತು ನಿಟ್ಟೆ ಎಜುಕೇಷನ್ ಟ್ರಸ್ಟ್.

ಇದನ್ನೂ ಓದಿ:ಏಕಲವ್ಯ, ಕ್ರೀಡಾರತ್ನ ಪ್ರಶಸ್ತಿ ಪ್ರಕಟ: ರಾಜಭವನದಲ್ಲಿ ನಾಳೆ ಪ್ರಶಸ್ತಿ ಪ್ರದಾನ

ABOUT THE AUTHOR

...view details