ಬೆಂಗಳೂರು:ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ರಾಜ್ಯದಲ್ಲಿ 5,298.69 ಕೋಟಿ ರೂ. ಮೊತ್ತದ 78 ಯೋಜನೆಗಳ ಬಂಡವಾಳ ಹೂಡಿಕೆ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಿದೆ. ಕರ್ನಾಟಕ ಉದ್ಯೋಗ ಮಿತ್ರ ಕಚೇರಿಯಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಅಧ್ಯಕ್ಷತೆಯಲ್ಲಿ ನಡೆದ 138ನೇ ರಾಜ್ಯಮಟ್ಟದ ಏಕಗವಾಕ್ಷಿ ಸಮಿತಿ ಸಭೆಯಲ್ಲಿ ಹೊಸ ಹೂಡಿಕೆ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಗಿದೆ. ರಾಜ್ಯದಲ್ಲಿ ಒಟ್ಟು 78 ಯೋಜನೆಗಳಿಂದ 5,298.69 ಕೋಟಿ ರೂ. ಬಂಡವಾಳ ಹೂಡಿಕೆಯಾಗಲಿದ್ದು, ಆ ಮೂಲಕ 13,917 ಜನರಿಗೆ ಉದ್ಯೋಗಗಳು ಲಭಿಸಲಿವೆ ಎಂದು ಅಂದಾಜಿಸಲಾಗಿದೆ.
ಈ ಪ್ರಸ್ತಾವನೆಗಳಲ್ಲಿ 50 ಕೋಟಿ ರೂ.ಗೂ ಹೆಚ್ಚಿನ ಬಂಡವಾಳ ಹೂಡಿಕೆಯಲ್ಲಿ 17 ಪ್ರಮುಖ ಬೃಹತ್ ಮತ್ತು ಮಧ್ಯಮ ಯೋಜನೆಗಳಿಗೆ ಸಮಿತಿಯ ಅನುಮೋದನೆ ನೀಡಿದೆ. ಇದರಿಂದ 3552.66ಕೋಟಿ ರೂ. ಬಂಡವಾಳ ಹೂಡಿಕೆಯಾಗಿ 6,933 ಜನರಿಗೆ ಉದ್ಯೋಗ ಲಭಿಸಲಿದೆ. 15 ಕೋಟಿ ರೂ. ನಿಂದ 50 ಕೋಟಿ ರೂ. ಒಳಗಿನ ಬಂಡವಾಳ ಹೂಡಿಕೆಯ 59 ಹೊಸ ಯೋಜನೆಗಳಿಗೆ ಸಮಿತಿ ಹಸಿರು ನಿಶಾನೆ ನೀಡಿದೆ. ಒಟ್ಟು 1,542.88 ಕೋಟಿ ರೂ. ಬಂಡವಾಳ ಹೂಡಿಕೆಯಾಗಿ ಅಂದಾಜು 6,984 ಜನರಿಗೆ ಉದ್ಯೋಗ ಸೃಜನೆಯಾಗಲಿದೆ.
203.15 ಕೋಟಿ ರೂ. ಹೆಚ್ಚುವರಿ ಬಂಡವಾಳ ಹೂಡಿಕೆಯ ಯೋಜನೆಗಳಿಗೆ ಏಕಗವಾಕ್ಷಿ ಸಮಿತಿ ಅನುಮೋದನೆ ನೀಡಿದೆ. ಸಭೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್. ಸೆಲ್ವಕುಮಾರ್, ಕೈಗಾರಿಕಾ ಅಭಿವೃದ್ಧಿ ಆಯುಕ್ತರಾದ ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಓ ಆರ್. ಗಿರೀಶ್, ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ಗಂಗಾಧರಯ್ಯ ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತಿರಿದ್ದರು.
ಅನುಮೋದನೆ ನೀಡಿರುವ ಪ್ರಸ್ತಾವನೆಗಳು ಯಾವುದು?:
- ವಿಐಎನ್ಪಿ(VINP) ಡಿಸ್ಟಿಲರೀಸ್ ಮತ್ತು ಶುಗರ್ಸ್ ಪ್ರೈ. ಲಿಮಿಟೆಡ್, (ಯುಎನ್ಐಟಿ(UNIT II), ಸ್ಥಳ: ಉತ್ತರ ಕನ್ನಡ, ಹೂಡಿಕೆ – 499.25, ಕೋಟಿ ರೂ. ಉದ್ಯೋಗ ಸೃಷ್ಟಿ 470
- ಮುತ್ತಯ್ಯ ಪಾನೀಯ ಮತ್ತು ಮಿಠಾಯಿ ಪ್ರೈವೇಟ್ ಲಿಮಿಟೆಡ್, ಸ್ಥಳ: ತಮಿಳುನಾಡು, ಹೂಡಿಕೆ-475 ಕೋಟಿ ರೂ., ಉದ್ಯೋಗ ಸೃಷ್ಟಿ 298
- ಎಂಆರ್ಎನ್(MRN) ಚಾಮುಂಡಿ ಕ್ಯಾನೆಪವರ್ ಮತ್ತು ಬಯೋಫೈನರೀಸ್ ಪ್ರೈವೇಟ್ ಲಿಮಿಟೆಡ್, ಸ್ಥಳ: ಬಾಗಲಕೋಟೆ, ಹೂಡಿಕೆ –248.02 ಕೋಟಿ ರೂ., ಉದ್ಯೋಗ ಸೃಷ್ಟಿ 461
- ಸಿಲೋನ್ ಬೆವರೇಜ್ ಕ್ಯಾನ್ ಪ್ರೈವೇಟ್ ಲಿಮಿಟೆಡ್,ಸ್ಥಳ: ತಮಿಳುನಾಡು, ಹೂಡಿಕೆ – 439.18 ಕೋಟಿ ರೂ., ಉದ್ಯೋಗ ಸೃಷ್ಟಿ 500.
- ಅನ್ವಿಶ್ ವೆಂಚರ್ಸ್, ಸ್ಥಳ: ಬೆಂಗಳೂರು, ಹೋಡಿಕೆ ಮೊತ್ತ 488.20 ಕೋಟಿ ರೂ., ಉದ್ಯೋಗ ಸೃಷ್ಟಿ 1050
-ಶಿರಗುಪ್ಪಿ ಶುಗರ್ ವರ್ಕ್ಸ್ ಲಿಮಿಟೆಡ್ KAGWAD, ಸ್ಥಳ: ಬೆಳಗಾವಿ, ಹೂಡಿಕೆ ಮೊತ್ತ 180 ಕೋಟಿ ರೂ., ಉದ್ಯೋಗ ಸೃಷ್ಟಿ 670
- ವೀನಸ್ ಟೆಕ್ನಾಲಜೀಸ್, ಸ್ಥಳ: ಬೆಂಗಳೂರು, ಹೂಡಿಕೆ ಮೊತ್ತ 249.70 ಕೋಟಿ ರೂ., ಉದ್ಯೋಗ ಸೃಷ್ಟಿ 700
-ಶ್ರೀ ಕೇಶವ್ ಸಿಮೆಂಟ್ಸ್ ಮತ್ತು ಇನ್ಫ್ರಾ ಲಿಮಿಟೆಡ್ ಬೆಳಗಾವಿ, ಸ್ಥಳ: ಬೆಂಗಳೂರು, ಹೂಡಿಕೆ- 124 ಕೋಟಿ ರೂ., ಉದ್ಯೋಗ ಸೃಷ್ಟಿ 168
- ಸಲ್ಯಾಂಡ್ಸ್ಕಿ ಆಟೋಮೇಷನ್ ಮತ್ತು ಪ್ರಕ್ರಿಯೆ ಪರಿಹಾರಗಳು ಪ್ರೈವೇಟ್ ಲಿಮಿಟೆಡ್, ಸ್ಥಳ: ತೆಲಂಗಾಣ ಹೂಡಿಕೆ ಮೊತ್ತ 127.2 ಕೋಟಿ ರೂ., ಉದ್ಯೋಗ ಸೃಷ್ಟಿ 365
- ಯೋನೆಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ , ಸ್ಥಳ: ಬೆಂಗಳೂರು ಅರ್ಬನ್, ಹೂಡಿಕೆ 92 ಕೋಟಿ ರೂ. ಉದ್ಯೋಗ ಸೃಷ್ಟಿ 475
- ಎಎಸ್ಕೆ(ASK) ಆಟೋಮೊಬೈಲ್ಸ್ ಪ್ರೈವೇಟ್ ಲಿಮಿಟೆಡ್, ಸ್ಥಳ: ಕೋಲಾರ, ಹೂಡಿಕೆ ಮೊತ್ತ 117.7 ಕೋಟಿ ರೂ., ಉದ್ಯೋಗ ಸೃಷ್ಟಿ 700
-ಪಂಚಾಮೃತ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್, ಸ್ಥಳ: ಧಾರವಾಡ, ಹೂಡಿಕೆ ಮೊತ್ತ 98 ಕೋಟಿ ರೂ., ಉದ್ಯೋಗ ಸೃಷ್ಟಿ 86
- ಅಗಸ್ತ್ಯ ಆಗ್ರೋ ಲಿಮಿಟೆಡ್, ಸ್ಥಳ: ಸಿಕಂದರಾಬಾದ್, ಹೂಡಿಕೆ ಮೊತ್ತ 95 ಕೋಟಿ ರೂ., ಉದ್ಯೋಗ ಸೃಷ್ಟಿ 204
-ಶಾಲಿಮಾರ್ ಇನ್ಸೆನ್ಸ್ ಪ್ರೈವೇಟ್ ಲಿಮಿಟೆಡ್,ಸ್ಥಳ: ಬೆಂಗಳೂರು, ಹೂಡಿಕೆ ಮೊತ್ತ 81.27 ಕೋಟಿ ರೂ., ಉದ್ಯೋಗ ಸೃಷ್ಟಿ 91
- ಯಾನಾ ಸೋಲಾರ್ ಪ್ರೈವೇಟ್ ಲಿಮಿಟೆಡ್, ಸ್ಥಳ: ಬೆಂಗಳೂರು, ಹೂಡಿಕೆ ಮೊತ್ತ 90.14 ಕೋಟಿ ರೂ., ಉದ್ಯೋಗ ಸೃಷ್ಟಿ 200
- ಇಶಾ ಫುಡ್ಸ್ ಬೆಂಗಳೂರು , ಸ್ಥಳ: ಬೆಂಗಳೂರು, ಹೂಡಿಕೆ ಮೊತ್ತ 80 ಕೋಟಿ ರೂ., ಉದ್ಯೋಗ ಸೃಷ್ಟಿ 295
- ಮಿಡಾಜ್ (MiDaz) ಹೋಮ್ ಕ್ರಾಫ್ಟ್ , ಸ್ಥಳ: ಬೆಂಗಳೂರು ನಗರ, ಹೂಡಿಕೆ ಮೊತ್ತ 68 ಕೋಟಿ ರೂ., ಉದ್ಯೋಗ ಸೃಷ್ಟಿ 200
ಇದನ್ನೂ ಓದಿ:ಎಸ್ ಬಿ ಮಿನರಲ್ಸ್ ಒಡೆತನದ ಎರಡು ಗಣಿ ಕಂಪನಿಗೆ ಸೇರಿದ 5.21 ಕೋಟಿ ರೂ ಮೌಲ್ಯದ ಸ್ಥಿರಾಸ್ತಿ ಜಪ್ತಿ