ಬೆಂಗಳೂರು:ವೈಯಕ್ತಿಕ ಕಾರಣಕ್ಕಾಗಿ ಪೊಲೀಸ್ ಇಲಾಖೆಗೆ ರಾಜೀನಾಮೆ ನೀಡಿರುವ ಅಣ್ಣಾಮಲೈ ರಾಜೀನಾಮೆ ಪತ್ರ ಅಂಗೀಕಾರವಾಗುತ್ತಿದ್ದಂತೆ ಇದೇ ಮೊದಲ ಬಾರಿಗೆ ಕೆ.ಅಣ್ಣಾಮಲೈ ಪ್ರತಿಕ್ರಿಯೆ ನೀಡಿದ್ದಾರೆ.
ಎಂಟು ವರ್ಷಗಳ ಪೊಲೀಸ್ ಸೇವೆ ಹೆಮ್ಮೆ ತಂದಿದೆ; ಮತ್ತಷ್ಟು ಸವಾಲು ಸ್ವೀಕರಿಸಲು ಸಿದ್ಧ ಎಂದ ಅಣ್ಣಾಮಲೈ! - police service
ದೇಶ ಹಾಗೂ ನಿಮ್ಮೆಲ್ಲರ ಸೇವೆ ಮಾಡಿರುವುದು ಹೆಮ್ಮೆಯ ಸಂಗತಿ. ಭವಿಷ್ಯದ ದೃಷ್ಟಿಯಿಂದ ನಾನು ಮತ್ತಷ್ಟು ಸವಾಲುಗಳನ್ನ ಸ್ವೀಕರಿಸಲು ಸಿದ್ಧನಾಗಿದ್ದೇನೆಂದು ಅಣ್ಣಾಮಲೈ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ಎಂಟು ವರ್ಷಗಳ ಪೊಲೀಸ್ ಸೇವೆ ಹೆಮ್ಮೆ ತಂದಿದೆ: ಅಣ್ಣಾಮಲೈ
ಎಂಟು ವರ್ಷಗಳ ನಾಗರಿಕ ಸೇವೆಯಿಂದ ಅಧಿಕೃತವಾಗಿ ನಿವೃತ್ತನಾಗಿದ್ದೇನೆ. ದೇಶ ಹಾಗೂ ನಿಮ್ಮೆಲ್ಲರ ಸೇವೆ ಮಾಡಿರುವುದು ಹೆಮ್ಮೆಯ ಸಂಗತಿ. ನಾಗರಿಕ ಸೇವೆಗಳ ಬಗ್ಗೆ ನನಗೆ ವೈಯಕ್ತಿಕವಾಗಿ ಗೌರವವಿದೆ. ಭವಿಷ್ಯದ ದೃಷ್ಟಿಯಿಂದ ನಾನು ಮತ್ತಷ್ಟು ಸವಾಲುಗಳನ್ನ ಸ್ವೀಕರಿಸಲು ಸಿದ್ಧನಾಗಿದ್ದೇನೆ ಎಂದು ತಮ್ಮ ಅಧಿಕೃತ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ಈ ನಡುವೆ ಅಣ್ಣಾಮಲೈ ಆರ್ಎಸ್ಎಸ್ ಸೇರಿಕೊಳ್ಳಲಿದ್ದಾರೆ ಎಂಬ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಅಣ್ಣಾಮಲೈ ಹೇಳಿಕೊಂಡಿಲ್ಲ.