ಕರ್ನಾಟಕ

karnataka

ETV Bharat / state

ಬಜೆಟ್ ವರ್ಷದ 9 ತಿಂಗಳು ಕಳೆದರೂ ಇಲಾಖಾವಾರು ಆರ್ಥಿಕ ಪ್ರಗತಿ ಬರೇ 44%! - ETv Bharat Kannada news

2022-23 ಸಾಲಿನ ಬಜೆಟ್ ಮಂಡನೆಯಾಗಿ ಎಂಟು ತಿಂಗಳು ಕಳೆದರೂ ಶೇ.44 ರಷ್ಟು ಮಾತ್ರ ಇಲಾಖಾವಾರು ಪ್ರಗತಿ ಕಂಡುಬಂದಿದೆ.

Chief Minister Basavaraj Bommai
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ

By

Published : Dec 12, 2022, 8:18 PM IST

Updated : Dec 12, 2022, 8:49 PM IST

ಬೆಂಗಳೂರು:ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರು 2022-23ನೇ ಸಾಲಿನ ತಮ್ಮ ಮೊದಲ ಬಜೆಟ್ ಮಂಡಿಸಿ ಮುಕ್ಕಾಲು ವರ್ಷ ಕಳೆದು ಹೋಗಿದೆ. ಆದರೆ, ಎಂಟು ತಿಂಗಳು ಕಳೆದ ಬಳಿಕವೂ ಇಲಾಖಾವಾರು ಬಜೆಟ್ ಅನುಷ್ಠಾನದ ಸ್ಥಿತಿಗತಿ ಮಾತ್ರ ತೃಪ್ತಿಕರವಾಗಿಲ್ಲ. ಈ ಬಜೆಟ್ ಚುನಾವಣೆಗೂ ಮುನ್ನದ ಪೂರ್ಣಾವಧಿ ಆಯವ್ಯಯ ಆಗಿತ್ತು. ಚುನಾವಣೆ ವರ್ಷವಾಗಿರುವುದರಿಂದ ಬಜೆಟ್ ಅನುಷ್ಠಾನಕ್ಕೆ ವೇಗ ಕೊಡುವುದು ಸಿಎಂಗೆ ಅನಿವಾರ್ಯವಾಗಿದೆ.

2022-23ನೇ ಸಾಲಿನ ಮೊದಲ ಎಂಟು ತಿಂಗಳಲ್ಲಿ ಬೊಮ್ಮಾಯಿ ಸರ್ಕಾರ ಇಲಾಖಾವಾರು ಪ್ರಗತಿ ಕಾಣುವಲ್ಲಿ ಹಿಂದೆ ಬಿದ್ದಿದೆ. ಹಣಕಾಸು ವರ್ಷದ ಇಷ್ಟು ಅವಧಿಯಲ್ಲಿ ಒಟ್ಟು ಇಲಾಖಾವಾರು ಆರ್ಥಿಕ ಪ್ರಗತಿ ಕಂಡಿರುವುದು ಕೇವಲ ಶೇ.44 ರಷ್ಟು. ಬಜೆಟ್ ವರ್ಷ ಮುಗಿಯಲು ಇನ್ನೇನು ನಾಲ್ಕು ತಿಂಗಳು ಉಳಿದಿದ್ದು, ಕನಿಷ್ಠ 50% ಆದರೂ ಪ್ರಗತಿ ಕಾಣಬೇಕಾಗಿತ್ತು. ಆದರೆ ಸದ್ಯದ ಪ್ರಗತಿ ತೆವಳುತ್ತಾ ಸಾಗುತ್ತಿದೆ.

ಈ ಸಾಲಿನಲ್ಲಿ ಎಲ್ಲಾ ಇಲಾಖೆಗಳಿಗೆ ಈವರೆಗೆ ಒಟ್ಟು 2,55,962.98 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿತ್ತು. ಈ ಪೈಕಿ ನವೆಂಬರ್‌ವರೆಗೆ ಎಂಟು ತಿಂಗಳಲ್ಲಿ ಒಟ್ಟು 1,27,651 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಒಟ್ಟು 1,11,550.30 ಕೋಟಿ ರೂ. ವೆಚ್ಚ ಮಾಡಲಾಗಿದೆ.

ಈ ಆರ್ಥಿಕ ವರ್ಷದಲ್ಲಿ ಆದಾಯ ಮೂಲಗಳು ಚೇತರಿಸಿಕೊಂಡಿದ್ದು, ನಿರೀಕ್ಷಿತ ಗುರಿ ಮೀರಿ ತೆರಿಗೆ ಸಂಗ್ರಹ ಮಾಡಲಾಗುತ್ತಿದೆ. ಆದರೆ ಇಲಾಖಾವಾರು ಬಜೆಟ್ ಅನುಷ್ಟಾನದ ಆರ್ಥಿಕ ಪ್ರಗತಿ ಮಾತ್ರ ನಿರಾಶಾದಾಯಕವಾಗಿದೆ. ಇತ್ತ ಬೊಮ್ಮಾಯಿ‌ ಅವರು ಬಜೆಟ್ ಅನುಷ್ಠಾನಕ್ಕೆ ವೇಗ ನೀಡುವ ಸಂಬಂಧ ಇಲಾಖಾವಾರು ಸಭೆ ನಡೆಸುತ್ತಲೇ ಇದ್ದಾರೆ. ಆದರೂ ಕೂಡ ಇಲಾಖಾವಾರು ಬಜೆಟ್ ಅನುಷ್ಠಾನಕ್ಕೆ ವೇಗ ನೀಡುವಲ್ಲಿ ಸಿಎಂ ಎಡವಿದರೇ ಎಂಬ ಪ್ರಶ್ನೆ ಮೂಡಿದೆ.

ನವೆಂಬರ್ ಅಂತ್ಯದವರೆಗೆ ಎಲ್ಲಾ ಇಲಾಖೆಗಳಲ್ಲಿ ಒಟ್ಟು ಹಂಚಿಕೆಗೆ ಕೇವಲ ಶೇ.44.32 ರಷ್ಟು ಆರ್ಥಿಕ ಪ್ರಗತಿ ಸಾಧಿಸಲು ಸಾಧ್ಯವಾಗಿದೆ. ನವೆಂಬರ್ ತಿಂಗಳಲ್ಲಿ ಶೇ.54.52 ರಷ್ಟು ಮಾತ್ರ ಪ್ರಗತಿ ಸಾಧಿಸಲು ಸಾಧ್ಯವಾಗಿದೆ. ಸುಮಾರು 25 ಇಲಾಖೆಗಳು ನವೆಂಬರ್‌ವರೆಗೆ ಶೇ.44 ರ ಆಸುಪಾಸಿನಲ್ಲಿ ಪ್ರಗತಿ ಸಾಧಿಸಿರುವುದು ನೋಡಿದರೆ ಬಜೆಟ್ ಅನುಷ್ಠಾನದ ಗತಿ ಏನಿದೆ ಎಂಬುದು ಗೊತ್ತಾಗುತ್ತದೆ. ಸುಮಾರು 14 ಇಲಾಖೆಗಳು ಪ್ರಮುಖವಾಗಿ ಕಂದಾಯ, ಗೃಹ, ಮೂಲಸೌಕರ್ಯ, ಸಣ್ಣ ನೀರಾವರಿ, ಪಶುಸಂಗೋಪನೆ, ನಗರಾಭಿವೃದ್ಧಿ, ಉನ್ನತ ಶಿಕ್ಷಣ, ಸಹಕಾರಿ, ಶಿಕ್ಷಣ, ತೋಟಗಾರಿಕೆ, ಲೋಕೋಪಯೋಗಿ ಇಲಾಖೆಗಳು ಮಾತ್ರ ಶೇ.50-60 ರ ಆಸುಪಾಸಿನಲ್ಲಿ ಉತ್ತಮ ಪ್ರಗತಿ ಕಂಡಿವೆ.

ಪ್ರಮುಖ ಇಲಾಖೆಗಳ ಆರ್ಥಿಕ ಪ್ರಗತಿ ಹೀಗಿದೆ:

1) ಕಾರ್ಮಿಕ ಇಲಾಖೆ:

ಒಟ್ಟು ಅನುದಾನ- 608.30 ಕೋಟಿ
ಬಿಡುಗಡೆ- 379.97 ಕೋಟಿ
ಪ್ರಗತಿ - 45.42%

2) ಸಮಾಜ ಕಲ್ಯಾಣ ಇಲಾಖೆ:
ಒಟ್ಟು ಅನುದಾನ- 6,354.99 ಕೋಟಿ
ಬಿಡುಗಡೆ- 3,980.56 ಕೋಟಿ
ಪ್ರಗತಿ - 42%

3) ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ:
ಒಟ್ಟು ಅನುದಾನ- 5,589.09 ಕೋಟಿ
ಬಿಡುಗಡೆ- 2,382.78 ಕೋಟಿ
ಪ್ರಗತಿ - 32.09%

4) ಆರೋಗ್ಯ ಇಲಾಖೆ:
ಒಟ್ಟು ಅನುದಾನ- 15,743.15 ಕೋಟಿ
ಬಿಡುಗಡೆ- 7,494.91 ಕೋಟಿ
ಪ್ರಗತಿ- 43.08%

5) ಜಲಸಂಪನ್ಮೂಲ ಇಲಾಖೆ:
ಒಟ್ಟು ಅನುದಾನ- 21,011.99 ಕೋಟಿ
ಬಿಡುಗಡೆ- 8,183.17 ಕೋಟಿ
ಪ್ರಗತಿ- 42.10%

6) ಇಂಧನ ಇಲಾಖೆ:
ಒಟ್ಟು ಅನುದಾನ- 12,663.55 ಕೋಟಿ
ಬಿಡುಗಡೆ- 4,913.17 ಕೋಟಿ
ಪ್ರಗತಿ - 44.73%

7) ಅರಣ್ಯ ಇಲಾಖೆ:
ಒಟ್ಟು ಅನುದಾನ- 2,281.53 ಕೋಟಿ
ಬಿಡುಗಡೆ- 1353.30 ಕೋಟಿ
ಪ್ರಗತಿ -41.22%

8) ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ:
ಒಟ್ಟು ಅನುದಾನ- 1,569.91 ಕೋಟಿ
ಬಿಡುಗಡೆ- 727.84 ಕೋಟಿ
ಪ್ರಗತಿ- 34.95%

9) ಗ್ರಾಮೀಣಾಭಿವೃದ್ಧಿ ಇಲಾಖೆ:
ಒಟ್ಟು ಅನುದಾನ- 25,018.88 ಕೋಟಿ
ಬಿಡುಗಡೆ- 9,490.54 ಕೋಟಿ
ಪ್ರಗತಿ- 35.87%

10) ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ:
ಒಟ್ಟು ಅನುದಾನ- 2,949.35 ಕೋಟಿ
ಬಿಡುಗಡೆ- 1,224.60 ಕೋಟಿ
ಪ್ರಗತಿ- 27.42%

11) ಕೃಷಿ ಇಲಾಖೆ:
ಒಟ್ಟು ಅನುದಾನ- 7,784.51 ಕೋಟಿ
ಬಿಡುಗಡೆ- 2,599.47 ಕೋಟಿ
ಪ್ರಗತಿ- 22.65%

12) ಆಹಾರ ಇಲಾಖೆ:
ಒಟ್ಟು ಅನುದಾನ- 2,984.59 ಕೋಟಿ
ಬಿಡುಗಡೆ- 1,419.84 ಕೋಟಿ
ಪ್ರಗತಿ- 30.73%

13) ವಸತಿ ಇಲಾಖೆ:
ಒಟ್ಟು ಅನುದಾನ- 5,984.86 ಕೋಟಿ
ಬಿಡುಗಡೆ- 1,272.41 ಕೋಟಿ
ಪ್ರಗತಿ- 34.10%

14) ಸಾರಿಗೆ ಇಲಾಖೆ:
ಒಟ್ಟು ಅನುದಾನ- 4,554.75 ಕೋಟಿ
ಬಿಡುಗಡೆ- 2,227.73 ಕೋಟಿ
ಪ್ರಗತಿ- 27.31%

15) ಪ್ರವಾಸೋದ್ಯಮ ಇಲಾಖೆ:
ಒಟ್ಟು ಅನುದಾನ- 344.74 ಕೋಟಿ
ಬಿಡುಗಡೆ- 147.64 ಕೋಟಿ
ಪ್ರಗತಿ- 22.01%

ಇದನ್ನೂ ಓದಿ:ರಾಜ್ಯ ಬಜೆಟ್-2022-23ನೇ ಸಾಲಿನ ಹೊಸ ಘೋಷಣೆಗಳಿವು..

Last Updated : Dec 12, 2022, 8:49 PM IST

ABOUT THE AUTHOR

...view details