ಕರ್ನಾಟಕ

karnataka

ETV Bharat / state

ಪ್ರವಾಸೋದ್ಯಮ ಪುನಶ್ಚೇತನಕ್ಕೆ ಪರಿಣಾಮಕಾರಿ ಮಾರ್ಗಸೂಚಿ: ಸಿ.ಟಿ ರವಿ - Tourism Revival

ಸಿಎಂ ಗೃಹ ಕಚೇರಿ ಕೃಷ್ಣಾಗೆ ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಭೇಟಿ ನೀಡಿದ್ರು. ಕೊರೊನಾದಿಂದ ಕುಸಿದಿರುವ ಪ್ರವಾಸೋದ್ಯಮ ಕ್ಷೇತ್ರದ ಪುನಶ್ಚೇತನ ಕುರಿತು ಸಿಎಂ ಜೊತೆ ಮಾತುಕತೆ ನಡೆಸಿದರು.

ಪ್ರವಾಸೋದ್ಯಮ ಸಚಿವ ಸಿ.ಟಿ ರವಿ
ಪ್ರವಾಸೋದ್ಯಮ ಸಚಿವ ಸಿ.ಟಿ ರವಿ

By

Published : Apr 29, 2020, 9:44 PM IST

ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಪರಿಣಾಮದಿಂದ ಕುಸಿದಿರುವ ಪ್ರವಾಸೋದ್ಯಮ ಕ್ಷೇತ್ರವನ್ನು ಪುನಶ್ಚೇತನಗೊಳಿಸಲು ಕಾರ್ಯನಿರ್ವಹಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ತಿಳಿಸಿದ್ದಾರೆ.

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾಗೆ ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಭೇಟಿ ನೀಡಿದ್ರು. ಕೊರೊನಾದಿಂದ ಕುಸಿದಿರುವ ಪ್ರವಾಸೋದ್ಯಮ ಕ್ಷೇತ್ರದ ಪುನಶ್ಚೇತನ ಕುರಿತು ಸಿಎಂ ಜೊತೆ ಮಾತುಕತೆ ನಡೆಸಿದರು. ಇಲ್ಲಿಯವರೆಗೆ ನಡೆಸಿದ ಸಭೆಗಳಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಸಂಗ್ರಹಿಸಿ ಮುಖ್ಯಮಂತ್ರಿಗಳಿಗೆ ಮನವಿ ರೂಪದಲ್ಲಿ ಸಲ್ಲಿಕೆ ಮಾಡಿದರು.

ಸಿಎಂ ಭೇಟಿ ನಂತರ ಮಾತನಾಡಿದ ಸಿ.ಟಿ ರವಿ:

ಪ್ರವಾಸೋದ್ಯಮದ ಪುನಶ್ಚೇನಕ್ಕೆ ಅಗತ್ಯ ನೆರವು ಘೋಷಿಸುವಂತೆ ಮುಖ್ಯಮಂತ್ರಿಗಳನ್ನು ಕೋರಲಾಗಿದೆ. ಕೇಂದ್ರ ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್‌ರವರಿಗೆ ಮನವಿ ಸಲ್ಲಿಸಿ, ಅಗತ್ಯ ನೆರವು ಘೋಷಿಸುವಂತೆ ಕೋರಲಾಗುವುದು ಎಂದರು.

ಲಾಕ್​​ಡೌನ್​​ ಹಿನ್ನೆಲೆಯಲ್ಲಿ ಸಂಪೂರ್ಣವಾಗಿ ಕುಸಿದಿರುವ ಪ್ರವಾಸೋದ್ಯಮದ ಪುನಶ್ಚೇತನಕ್ಕೆ ತುರ್ತು ಕ್ರಮವಹಿಸಲು ಕೇಂದ್ರ ಸರ್ಕಾರ ರಾಷ್ಟ್ರೀಯ ಪ್ರವಾಸೋದ್ಯಮ ಟಾಸ್ಕ್ ಫೋರ್ಸ್ ರಚಿಸಿರುವುದನ್ನು ಸ್ವಾಗತಿಸಿದ್ದಾರೆ. ಟಾಸ್ಕ್​​ ‌ಪೋರ್ಸ್ ಸಮಿತಿ ಸಭೆ ಸದ್ಯದಲ್ಲಿಯೇ ಕೇಂದ್ರ ಪ್ರವಾಸೋದ್ಯಮ ಸಚಿವರ ನೇತೃತ್ವದಲ್ಲಿ ಸಭೆ ನಡೆಯಲಿದೆ. ಈ ಸಭೆಗೆ ಕರ್ನಾಟಕ ರಾಜ್ಯ ಸರ್ಕಾರವು ಈಗಾಗಲೇ ಅಗತ್ಯ ಸಿದ್ದತೆಗಳನ್ನು ಮಾಡಿಕೊಂಡಿದೆ ಎಂದರು.

ಕರ್ನಾಟಕದಲ್ಲಿ ಕುಸಿದಿರುವ ಪ್ರವಾಸೋದ್ಯಮದ ಪುನಶ್ಚೇತನಕ್ಕಾಗಿ ಶ್ರಮವಹಿಸಲು 2 ವಿಡಿಯೋ ಕಾನ್ಫರೆನ್ಸ್‌ಗಳನ್ನು ಕೇಂದ್ರ ಸರ್ಕಾರ NTTF ರಚಿಸುವ ಮೊದಲೇ ನಡೆಸಿದ್ದು, ಮೊದಲನೆಯ ಸಭೆಯನ್ನು ಪ್ರವಾಸೋದ್ಯಮ ಇಲಾಖೆ ನಿರ್ದೇಶಕರ ನೇತೃತ್ವದಲ್ಲಿ 2ನೇ ಸಭೆಯನ್ನು ನನ್ನ ಅಧ್ಯಕ್ಷತೆಯಲ್ಲಿ ನಡೆಸಿ, ಪ್ರವಾಸೋದ್ಯಮದ ಪುನಶ್ಚೇತನಕ್ಕೆ ವಿವಿಧ ಸಂಘಟನೆ/ ಸಲಹೆಗಾರರಿಂದ ಸಲಹೆ ಸ್ವೀಕರಿಸಿದ್ದೇವೆ ಎಂದು ಸಚಿವ ಸಿ.ಟಿ ರವಿ ಮಾಹಿತಿ ನೀಡಿದ್ದಾರೆ.

ಪ್ರವಾಸೋದ್ಯಮ ಪುನಶ್ಚೇತನಕ್ಕೆ ಪ್ರಭಾವ ಬೀರುವ ಅಂಶಗಳು:

1. ಮಾರ್ಕೆಟಿಂಗ್ ಮತ್ತು ಪ್ರಮೋಷನ್.

2 ಕೌಶಲ್ಯ ತರಬೇತಿ ಪ್ರಾರಂಭಿಸುವುದು.

3. ಸೇಫ್ಟಿ ಮತ್ತು ಹೈಜಿನ್‌ ಟ್ಯಾಗ್ ಲೈನ್​​ನೊಂದಿಗೆ ರಾಜ್ಯ ಪ್ರವಾಸಿಗರ ಸುರಕ್ಷತೆಯನ್ನು ಖಾತ್ರಿಗೊಳಿಸುವುದು.

4. ಉಳಿದ ಎಲ್ಲ ರಾಜ್ಯಗಳಿಗಿಂತ ಕರ್ನಾಟಕ ರಾಜ್ಯ ಪ್ರವಾಸಿಗರಿಗೆ ಸುರಕ್ಷಿತವಾಗಿದೆ ಎಂಬ ವಿಶ್ವಾಸ ಮೂಡಿಸುವುದು.

5. ಕಡಿಮೆ ಬಡ್ಡಿ ದರದಲ್ಲಿ ವರ್ಕಿಂಗ್ ಕ್ಯಾಪಿಟಲ್ ಕೊಡುವುದು, ಟ್ಯಾಕ್ಸ್ ರಿಲೀಫ್, ತೆರಿಗೆ ರಜೆ, ಕೆಲಸಗಾರರ ಉದ್ಯೋಗಿ ರಕ್ಷಣೆ ಇತರ ಹಲವಾರು ಅಂಶಗಳನ್ನು ಒಳಗೊಂಡಂತೆ ಪ್ರವಾಸೋದ್ಯಮ ವಿಶೇಷ ಪ್ಯಾಕೇಜ್ ಬಗ್ಗೆ ಪ್ರಸ್ತಾಪಿಸಿದ್ದಾರೆ.

6. ಅಂತರರಾಜ್ಯ ಪ್ರವಾಸಿ ತೆರಿಗೆ, ಕೇರಳ, ತಮಿಳುನಾಡು, ಪಾಂಡಿಚೇರಿ, ಆಂಧ್ರ, ತೆಲಂಗಾಣ ರಾಜ್ಯಗಳಲ್ಲಿ ಪ್ರವೇಶ ತೆರಿಗೆ ಇರುವುದಿಲ್ಲ. ಆದರೆ, ಕರ್ನಾಟಕದಲ್ಲಿ ಪ್ರವೇಶ ತೆರಿಗೆ ಇರುವುದರಿಂದ ಅಲ್ಲಿನ ಪ್ರವಾಸಿಗರು ಕರ್ನಾಟಕ ಪ್ರವಾಸವನ್ನು ಬಹುತೇಕ ರದ್ದುಪಡಿಸುತ್ತಾರೆ. ಹಾಗಾಗಿ ಅಂತರ್​​ರಾಜ್ಯ ಪ್ರವೇಶ ತೆರಿಗೆ ರದ್ದುಪಡಿಸುವುದು, ವಿಶೇಷ ಅನುಮತಿ ಚೆಕ್ ಪೋಸ್ಟ್​​ಗಳಲ್ಲೇ ಟೂರ್ ಪರ್ಮಿಟ್ ಕೊಡುವ ಬಗ್ಗೆ ಕೋರಿಕೆ ಸಲ್ಲಿಸಿದ್ದಾರೆ.

7. ಸುಮಾರು 2.50 ಲಕ್ಷ ಪ್ರವಾಸಿ ಟ್ಯಾಕ್ಸಿ ಡ್ರೈವರ್​​ಗಳು ಪ್ರವಾಸಿಗರು ಬಾರದೆ ದಿನದ ದುಡಿಮೆಯ ಯಾವುದೇ ಮೂಲವಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಟೂರಿಸ್ಟ್​​ ಗೈಡ್​​​​​ಗಳಿಗೂ ಯಾವುದೇ ಆದಾಯವಿಲ್ಲ ಇವರು ಸಂಘಟಿತರಾಗಿ ಇವರಿಗೆ ಆರ್ಥಿಕ ಬೆಂಬಲ ನೀಡಬೇಕೆಂಬ ಬೇಡಿಕೆ ಮುಂದಿಟ್ಟಿದ್ದಾರೆ.

ಪ್ರವಾಸೋದ್ಯಮದ ಪುನಶ್ಚೇನಕ್ಕೆ 5 ಹಂತಗಳ ಉತ್ತೇಜನಕ್ಕೆ ಸಲಹೆ:

1.ಪ್ರಸ್ತುತ ಲಾಕ್​​​ಡೌನ್ ಮುಕ್ತಾಯಗೊಳ್ಳುವವರೆಗೆ ಯಾವುದೇ ಪ್ರವಾಸ ಕೈಗೊಳ್ಳದಂತೆ ಪ್ರವಾಸಿಗರಿಗೆ ಕೊರೊನಾ ಪರಿಣಾಮದ ತೀವ್ರತೆಯ ಅರಿವು ಮೂಡಿಸುವುದು.

2.ಲಾಕ್‌ಡೌನ್ ಮುಕ್ತಾಯದ ನಂತರ ಸ್ಥಳೀಯ ಪ್ರವಾಸೋದ್ಯಮಕ್ಕೆ ಉತ್ತೇಜಿಸುವುದು. ಅಂದರೆ ಸ್ಥಳೀಯ ಚಟುವಟಿಕೆಗಳು, ನೋಡು ಬಾ ನಮ್ಮೂರ, ಡೈನಿಂಗ್ ಔಟ್ ವಿತ್ ಇನ್ ಸಿಟಿ ಆಯೋಜಿಸುವುದು, ಸಿಂಗಾಪುರ ಮಾದರಿಯಲ್ಲಿ ಲವ್ ಯುವರ್ ಲೋಕಲ್ ಆಂದೋಲನ ಮಾಡುವುದು.

3.ರಾಜ್ಯದೊಳಗಿನ ಪ್ರಾದೇಶಿಕವಾರು, ಅಂತರ್​​ ಜಿಲ್ಲಾ ಪ್ರವಾಸೋದ್ಯಮಕ್ಕೆ ಉತ್ತೇಜನ ಮತ್ತು ಪ್ರೋತ್ಸಾಹ ನೀಡುವುದು.

4.ದೇಶೀಯ ಪ್ರವಾಸೋದ್ಯಮ ಅಂದರೆ ಅಂತರ್​​ ರಾಜ್ಯ ಪ್ರವಾಸೋದ್ಯಮಕ್ಕೆ ಪ್ರವಾಸಿಗರನ್ನು ಸಜ್ಜುಗೊಳಿಸುವುದು, ಉತ್ತೇಜಿಸುವುದು.

5. ಸುರಕ್ಷತೆಯನ್ನು ಖಾತ್ರಿಪಡಿಸಿಕೊಂಡು ಹಂತಹಂತವಾಗಿ ಅಂತರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸುವುದು ಹಾಗೂ ಉತ್ತೇಜಿಸುವುದು.

18 ಕ್ಕೂ ಹೆಚ್ಚು ಸಂಘಟನೆಗಳು ಪ್ರವಾಸೋದ್ಯಮ ಪುನಶ್ವೇತನಕ್ಕಾಗಿ ಕೋರಿದ ವಿನಾಯಿತಿ

1.ರಾಷ್ಟ್ರ ಮತ್ತು ರಾಜ್ಯ ಸರ್ಕಾರದ ಟಾಸ್ಕ್ ಫೋರ್ಸ್ ಸಮಿತಿ ಆಗಿಂದಾಗ್ಗೆ ಸಭೆ ಸೇರಿ ಪುನಶ್ವೇತನದ ಕ್ರಿಯಾ ಯೋಜನೆ ಮತ್ತು ತ್ವರಿತಗತಿಯ ಅನುಷ್ಠಾನಕ್ಕೆ / ಅನುಮೋದನೆಗೆ ಶ್ರಮವಹಿಸುವುದು.

2.ಪ್ರವಾಸೋದ್ಯಮದಲ್ಲಿ ಬಂಡವಾಳ ಹೂಡುವ ಉದ್ದಿಮೆದಾರರಿಗೆ ಬಡ್ಡಿರಹಿತ ದೀರ್ಘಾವಧಿ ಸಾಲ ನೀಡುವ ಮೂಲಕ ಕುಸಿದು ಬಿದ್ದಿರುವ ಪ್ರವಾಸೋದ್ಯಮವನ್ನು ರಕ್ಷಿಸುವುದು.

3.ಒಂದು ವರ್ಷದ ವೇತನವನ್ನು ಪ್ರವಾಸೋದ್ಯಮದಲ್ಲಿ ತೊಡಗಿರುವ ಎಲ್ಲಾ ವರ್ಗದ ನೌಕರಿಗೆ ನರೇಗಾದಲ್ಲಿರುವಷ್ಟು ಕನಿಷ್ಠ ವೇತನ ಪಾವತಿಸುವುದು.

4. ಜಿಎಸ್ಟಿ ಹಾಗೂ ಇತರೆ ಪ್ರತ್ಯೇಕ ಹಾಗೂ ಪರೋಕ್ಷ ತೆರಿಗೆ ಗಳಿಗೆ ಒಂದು ವರ್ಷ ತೆರಿಗೆ ರಜೆ ನೀಡುವುದು, ರಿಸರ್ವ್ ಬ್ಯಾಂಕ್ ನೀಡುವ ಸಾಲದ ಬಡ್ಡಿ ದರವನ್ನು ಹಾಲಿ ದರದಿಂದ ಮೂರನೇ ಒಂದು ಭಾಗವನ್ನು ಕಡಿತಗೊಳಿಸುವುದು.

5.ಪ್ರವಾಸಿ ತೆರಿಗೆ, ಪರವಾನಗಿ ಶುಲ್ಕ, ನವೀಕರಣ ಶುಲ್ಕ, ಅಬಕಾರಿ ತೆರಿಗೆಯನ್ನು ರಾಜ್ಯದಾದ್ಯಂತ ಕಡಿತಗೊಳಿಸುವುದು.

ABOUT THE AUTHOR

...view details