ಬೆಂಗಳೂರು:ರಾಜ್ಯದ ಕೆಲ ಶಾಲೆಗಳು ಎಲ್ಕೆಜಿ, ಯುಕೆಜಿ ಹಾಗೂ ಪ್ರಾಥಮಿಕ ಮಕ್ಕಳಿಗೆ ಮನೆಯಲ್ಲೇ ಆನ್‍ಲೈನ್ ತರಗತಿ ನಡೆಸಲು ಮುಂದಾಗಿವೆ. ಈ ಮೂಲಕ ಪೋಷಕರಿಂದ ಶುಲ್ಕ ವಸೂಲಿ ಮಾಡುತ್ತಿವೆ. ಇದು ಸಲ್ಲದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಖಡಕ್ ವಾರ್ನ್ ಮಾಡಿದ್ದಾರೆ.
ಮಕ್ಕಳಿಗೆ ಆನ್‍ಲೈನ್ ತರಗತಿ ಅವಶ್ಯಕತೆ ಇರುವುದೇ? ಅಥವಾ ಇಲ್ವಾ? ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಆನ್‍ಲೈನ್ ಮೂಲಕ ಶಿಕ್ಷಣದ ಅವಶ್ಯಕತೆ ಇಲ್ಲದಿರುವ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಿಗೂ ಈ ಮೂಲಕ ಶಿಕ್ಷಣ ನೀಡುತ್ತೇವೆಂದು ಕೆಲವು ಖಾಸಗಿ ಶಾಲೆಗಳು ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಶೋಷಿಸುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ.