ಕರ್ನಾಟಕ

karnataka

ETV Bharat / state

ಮುಂದಿನ ವರ್ಷದಿಂದ ಪ್ರಾಥಮಿಕ ಶಿಕ್ಷಣದಲ್ಲಿ ಎನ್​​​ಇಪಿ ಜಾರಿ: ಶಿಕ್ಷಣ ಸಚಿವ ಬಿ.ಸಿ.ನಾಗೇಶ್ - ಶಿಕ್ಷಣ ಸಚಿವ ನಾಗೇಶ್ ಹೇಳಿಕೆ

ಎನ್ಇಪಿ(NEP) ಜಾರಿ ಕುರಿತಂತೆ ಈಗಾಗಲೇ ಸಿದ್ಧತೆಗಳು ನಡೆದಿವೆ. ಯಾವ ತರಗತಿಯಿಂದ ಹೇಗೆ ಅನುಷ್ಠಾನ ಮಾಡಬೇಕೆಂದು ಟಾಸ್ಕ್ ಫೋರ್ಸ್ ತಜ್ಞರು ವರದಿ ನೀಡಲಿದ್ದಾರೆ‌‌. ಈ ವರದಿ ಬಂದ ಬಳಿಕ ಮುಂದಿನ ವರ್ಷದಿಂದ ಅನುಷ್ಟಾನ ಮಾಡುತ್ತೇವೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ (Education Minister B.C. Nagesh) ಹೇಳಿದ್ದಾರೆ.

ಬೆಂಗಳೂರಲ್ಲಿ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿಕೆ
ಬೆಂಗಳೂರಲ್ಲಿ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿಕೆ

By

Published : Nov 10, 2021, 4:00 PM IST

ಬೆಂಗಳೂರು: ಈ ದೇಶದಲ್ಲಿ ಕೃಷಿ ನೀತಿ ಅಳವಡಿಕೆಗೂ ವಿರೋಧಗಳು ಎದುರಾಗಿವೆ. ಹೀಗಿರುವಾಗ ಶಿಕ್ಷಣ ನೀತಿಯ ಕುರಿತು ಕೂಡ ವಿರೋಧಗಳು ಬಂದಿವೆ. ಆ ವಿರೋಧಗಳ ಬಗ್ಗೆ ತಲೆಕೆಡಿಸಿಕೊಳ್ಳದೇ ರಾಜ್ಯದಲ್ಲಿ ಮುಂದಿನ ವರ್ಷದಿಂದ ಪ್ರಾಥಮಿಕ ಶಿಕ್ಷಣದಲ್ಲಿ ಎನ್​​​ಇಪಿ (National Education Policy) ಜಾರಿ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಹೇಳಿದರು.


ಎನ್ಇಪಿ(NEP) ಜಾರಿ ಕುರಿತಂತೆ ಈಗಾಗಲೇ ಸಿದ್ಧತೆಗಳು ನಡೆದಿವೆ. ಯಾವ ತರಗತಿಯಿಂದ ಹೇಗೆ ಅನುಷ್ಠಾನ ಮಾಡಬೇಕೆಂದು ಟಾಸ್ಕ್ ಫೋರ್ಸ್ ತಜ್ಞರು ವರದಿ ನೀಡಲಿದ್ದಾರೆ‌‌. ಈ ವರದಿ ಬಂದ ಬಳಿಕ ಮುಂದಿನ ವರ್ಷದಿಂದ ಅನುಷ್ಟಾನ ಮಾಡುತ್ತೇವೆ. ಹೊಸ ಶಿಕ್ಷಣ ನೀತಿ ಓದದೇ ವಿರೋಧಿಸುವವರು ಮೂರು ರೀತಿಯಲ್ಲಿ ಇದ್ದಾರೆ.

ಒಂದು ವರ್ಗ ಹೊಸ ಶಿಕ್ಷಣ ನೀತಿ ಓದದೆಯೇ ಉತ್ತಮವಾಗಿದೆ ಅನ್ನುತ್ತಾರೆ, ಮತ್ತೊಂದು ವರ್ಗ ನೀತಿ ಓದದೇ ವಿರೋಧ ಮಾಡುವವರು, ಹಲವರು ಓದಿ ಅರ್ಥೈಸಿಕೊಂಡವರು. ಓದದೇ ಅರ್ಥ ಮಾಡಿಕೊಳ್ಳದೇ ವಿರೋಧಿಸುವವರ ಬಗ್ಗೆ ನಾವು ತಲೆಕೆಡಿಸಿಕೊಳ್ಳಲ್ಲ ಎಂದು ಸಚಿವರು ಹೇಳಿದರು.

ಯಾಕೆಂದರೆ, ಕೇಂದ್ರ ಸರ್ಕಾರ ಕೋವಿಡ್ ಲಸಿಕೆ ನೀಡಲು ಹೊರಟಾಗ ಹಲವರು ವಿರೋಧಿಸಿದರು, ಹೀಗಾಗಿ ವಿರೋಧ ಮಾಡುವವರು ನಮ್ಮ ಮಧ್ಯೆ ಇದ್ದಾರೆ. ಅವರಿಗೆ ಹೆಚ್ಚು ಆದ್ಯತೆ ನೀಡುವ ಅಗತ್ಯವಿಲ್ಲ ಎಂದರು. ‌ಈಗಿರುವ ಶಿಕ್ಷಣದಲ್ಲೂ ಕೊರತೆ ಇದ್ದೇ ಇದೆ. ಇದರ ಬದಲಾವಣೆ ಈಗಿನ‌ ಪರಿಸ್ಥಿತಿಗೆ ಅಗತ್ಯ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಎನ್​​ಇಪಿ ಕುರಿತು ನಾಲ್ಕು ಅಧಿವೇಶವನ್ನು ನಡೆಸಲಾಗುತ್ತಿದ್ದು, ಶಿಕ್ಷಣ ತಜ್ಞರಾದ ಗುರುರಾಜ್ ಕರಜಗಿ, ಎಂ ಕೆ, ಎಂ ಕೆ ಶ್ರೀಧರ್ ಭಾಗಿಯಾಗಿದ್ದರು.

ABOUT THE AUTHOR

...view details