ಬೆಂಗಳೂರು: ರಾಜ್ಯಾದ್ಯಂತ ಕೊರೊನಾ ಪಾಸಿಟಿವಿಟಿ ಪ್ರಮಾಣ ಕಡಿಮೆ ಇರುವ ಜಿಲ್ಲೆಗಳಲ್ಲಿ 6,7 ಹಾಗೂ 8ನೇ ತರಗತಿ ಆರಂಭವಾಗುತ್ತಿದೆ. ಈಗಾಗಲೇ ಮೊದಲ ಹಂತವಾಗಿ 9ರಿಂದ ಪಿಯುಸಿ ತರಗತಿ ಆರಂಭಿಸಿರುವ ಶಿಕ್ಷಣ ಇಲಾಖೆ, ಇದೀಗ ಎರಡನೇ ಹಂತವಾಗಿ ಪ್ರಾಥಮಿಕ ತರಗತಿ ಆರಂಭಿಸುತ್ತಿದೆ.
ಇಂದಿನಿಂದ ಶಾಲಾ ತರಗತಿ ಆರಂಭ: ಮುನ್ನೆಚ್ಚರಿಕೆಯೊಂದಿಗೆ ತರಗತಿ ಶುರು ಎಂದ ಶಿಕ್ಷಣ ಸಚಿವ
ಸರ್ಕಾರವು ಮಕ್ಕಳ ಅಪೇಕ್ಷೆ, ಆಸೆಗೆ ಸ್ಪಂದಿಸಿದೆ. ತಾಂತ್ರಿಕ ಸಲಹಾ ಸಮಿತಿ ಸಲಹೆಯಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಶಾಲಾರಂಭ ಮಾಡಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದರು.
ಈ ಕುರಿತು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಮಾತಾನಾಡಿದ್ದು, ಸರ್ಕಾರವು ಮಕ್ಕಳ ಅಪೇಕ್ಷೆ, ಆಸೆಗೆ ಸ್ಪಂದಿಸಿದೆ. ತಾಂತ್ರಿಕ ಸಲಹಾ ಸಮಿತಿ ಸಲಹೆಯಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಶಾಲಾರಂಭ ಮಾಡಲಾಗಿದೆ. ಪ್ರತಿ ಬಾರಿ ಪ್ರವಾಸಗಳನ್ನ ಕೈಗೊಂಡಾಗಲೂ ಪೋಷಕರು- ಮಕ್ಕಳು ಬಂದು ಶಾಲೆಗಳನ್ನ ತೆರೆಯುವಂತೆ ಒತ್ತಾಯ ಮಾಡುತ್ತಿದ್ದರು. ಹಲವು ಹಳ್ಳಿಗಳಲ್ಲಿ ಕೊರೊನಾ ಇಲ್ಲ. ಹೀಗಾಗಿ, ಮಕ್ಕಳ ತಜ್ಞರ ಅಭಿಪ್ರಾಯ ಪಡೆದು ಇದೀಗ 6-8 ನೇ ತರಗತಿ ಆರಂಭ ಮಾಡಲಾಗುತ್ತಿದೆ. ಈಗಾಗಲೇ ಶಿಕ್ಷಣ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿವೆ. ಡಿಡಿಪಿಐ ಜಿಲ್ಲಾಧಿಕಾರಿಗಳು ಕ್ರಮವಹಿಸಿದ್ದು, ಎಸ್ಒಪಿ ಪ್ರಕಾರ ಶಾಲಾರಂಭ ಮಾಡುತ್ತಿದ್ದೇವೆ ಎಂದು ಹೇಳಿದರು.
- ಶಾಲೆ ಕಾರಣಕ್ಕೆ ಯಾವ ಮಕ್ಕಳಿಗೂ ಕೊರೊನಾ ಬಂದಿಲ್ಲ:ಶಾಲೆ ಕಾರಣಕ್ಕೆ ಯಾವ ಮಗುವಿಗೂ ಕೊರೊನಾ ಪಾಸಿಟಿವ್ ಬಂದಿಲ್ಲ. 43 ಸಾವಿರ ವಿದ್ಯಾರ್ಥಿಗಳಿಗೆ ತಜ್ಞರು ಪರೀಕ್ಷೆ ಮಾಡಿದ್ದಾರೆ. ವಿದ್ಯಾರ್ಥಿಗಳಿಗೆ ಸೋಂಕು ಹರಡುವುದು ಶೇ.3ರಷ್ಟಿದೆ ಅಂತಿದ್ದಾರೆ. ಕೇವಲ ಒಂದೇ ಮಗುವಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದರು.
- 1-5ನೇ ತರಗತಿ ಶಾಲಾರಂಭದ ಕುರಿತು ಚರ್ಚೆ:ಇನ್ನು ಪ್ರಾಥಮಿಕ ತರಗತಿ 1-5ನೇ ತರಗತಿಯನ್ನೂ ಆರಂಭಿಸುವಂತೆ ಒತ್ತಡಗಳು ಬಂದಿವೆ. ಹೀಗಾಗಿ, ಈ ಕುರಿತು ತಾಂತ್ರಿಕ ಸಲಹಾ ಸಮಿತಿಯ ಜೊತೆಗೆ ಚರ್ಚೆ ಮಾಡಲಾಗುವುದು. ಅಕ್ಟೋಬರ್ - ನವೆಂಬರ್ನಲ್ಲಿ ಕೊರೊನಾ ಬಗ್ಗೆ ತಾಂತ್ರಿಕ ಇಲಾಖೆ ಎಚ್ಚರಿಕೆ ನೀಡಿದೆ. ಹೀಗಾಗಿ ತಜ್ಞರ ಸಭೆ ಮಾಡಿ 1 ರಿಂದ 5 ನೇ ತರಗತಿ ಆರಂಭದ ಕುರಿತು ಚರ್ಚೆ ಮಾಡಲಾಗುವುದು ಎಂದು ತಿಳಿಸಿದರು. ಇನ್ನು ಎಲ್ಲೆಲ್ಲಿ ಶಿಕ್ಷಕರ ಕೊರತೆ ಇದೆ ಅಲ್ಲಲ್ಲಿ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದರು.