ಕರ್ನಾಟಕ

karnataka

ETV Bharat / state

ನಾಳೆಯಿಂದ 1 ರಿಂದ 5ನೇ ತರಗತಿಗಳು ಆರಂಭ... ಈ ಮಾರ್ಗಸೂಚಿ ಪಾಲನೆ ಕಡ್ಡಾಯ - ಕರ್ನಾಟಕ ಶಿಕ್ಷಣ ಇಲಾಖೆ

ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಕಡಿಮೆಯಾಗಿದ್ದು, ಸೋಮವಾರದಿಂದ 1 ರಿಂದ 5 ನೇ ತರಗತಿಗಳು ಆರಂಭವಾಗಲಿವೆ. ಇದಕ್ಕಾಗಿ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.

1st to 5th class on tomorrow
ನಾಳೆಯಿಂದ 1ರಿಂದ 5 ನೇ ಭೌತಿಕ ತರಗತಿಗಳು ಆರಂಭ

By

Published : Oct 24, 2021, 3:53 PM IST

ಬೆಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ಪ್ರಾಥಮಿಕ ತರಗತಿ ಆರಂಭಕ್ಕೆ ಶಿಕ್ಷಣ ಇಲಾಖೆ ಹಿಂದೆಟ್ಟು ಹಾಕಿತ್ತು. ಸೋಂಕಿನ ತೀವ್ರತೆ ಕಡಿಮೆಯಾದ ಹಿನ್ನೆಲೆಯಲ್ಲಿ ಸೋಮವಾರದಿಂದ 1ರಿಂದ 5 ನೇ ತರಗತಿಗಳ ಆರಂಭಕ್ಕೆ ಶಿಕ್ಷಣ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ.

ಅಕ್ಟೋಬರ್ 25ರಿಂದ 1 ರಿಂದ 5ನೇ ತರಗತಿಯ ಭೌತಿಕ ಪಾಠ-ಪ್ರವಚನಗಳು ಆರಂಭವಾಗಲಿದ್ದು, ಶಾಲೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಲುವಾಗಿ ಶೇ.50 ರಷ್ಟು ಮಾತ್ರ ಹಾಜರಾತಿಗೆ ಅವಕಾಶ ಕಲ್ಪಿಸಲಾಗಿದೆ. ಬರೋಬ್ಬರಿಗೆ 20 ತಿಂಗಳ ನಂತರ ಭೌತಿಕ ತರಗತಿಗಳು ಆರಂಭವಾಗುತ್ತಿದ್ದು, ಶಾಲೆಗಳ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಲಾಗಿದೆ. ಕೋವಿಡ್ ನಿಯಮ ಕಟ್ಟುನಿಟ್ಟಾಗಿ ಪಾಲಿಸುವಂತೆ ಎಚ್ಚರಿಕೆ ನೀಡಿದೆ.

ಪ್ರಮುಖ ಮಾರ್ಗಸೂಚಿಗಳು :

  • ಕಠಿಣ ಕ್ರಮಗಳ ಪಾಲನೆಯೊಂದಿಗೆ ಪುಟಾಣಿಗಳ ಶಾಲೆ ಶುರು
  • ಶೇ.50ರಷ್ಟು ಹಾಜರಾತಿಯಲ್ಲಿ ತರಗತಿ ನಡೆಸಲು ಅವಕಾಶ
  • ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರವೇ ಶಾಲೆಗಳು ಒಪನ್
  • ಎರಡು ದಿನ ಶಾಲೆ ಕೊಠಡಿಗಳ ಸ್ವಚ್ಚತಾ ಕಾರ್ಯ
  • ಮಕ್ಕಳಿಗೆ ಒಂದು ದಿನ ತರಗತಿ ನಡೆಸಿ ಒಂದು ದಿನ ರಜೆ
  • ಪಾಸಿಟಿವಿಟಿ ಶೇ.1ಕ್ಕಿಂತ ಕಡಿಮೆ ಇರುವ ಜಿಲ್ಲೆ, ತಾಲೂಕು ವಲಯಗಳಲ್ಲಿ ಮಾತ್ರ ಶಾಲೆ ಆರಂಭ
  • ಮಕ್ಕಳು ಶಾಲೆಗೆ ಹಾಜರಾಗಲು ಪೋಷಕರ ಒಪ್ಪಿಗೆ ಪತ್ರ ಕಡ್ಡಾಯ
  • ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬಿಸಿ ನೀರಿನ ಸೌಲಭ್ಯ ನೀಡಿಕೆ
  • ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯವಲ್ಲ
  • ಆನ್​​​ಲೈನ್ & ಆಫ್​​​ಲೈನ್ ಎರಡೂ ತರಗತಿಗೂ ಅವಕಾಶ
  • 15 ರಿಂದ 20 ಮಕ್ಕಳ ತಂಡ ರಚಿಸಿ ಮಕ್ಕಳಿಗೆ ಪಾಠ
  • ಎರಡು ಡೋಸ್ ಪಡೆದ ಶಿಕ್ಷಕರಿಗೆ ಮಾತ್ರ ಪಾಠ ಮಾಡಲು ಅವಕಾಶ
  • ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 10 ರಿಂದ ಮಧ್ಯಾಹ್ನ 1.30 ರವರೆಗೆ ಮಾತ್ರ ತರಗತಿ
  • ಶನಿವಾರ ಬೆಳಗ್ಗೆ 8 ರಿಂದ 11.40 ರವರೆಗೆ ತರಗತಿ ನಡೆಯಲಿವೆ
  • ಯಾವುದೇ ಶಾಲೆಯಲ್ಲಿ ಎಲ್​​ಕೆಜಿ, ಯುಕೆಜಿ ತೆರೆಯಲು ಅವಕಾಶ ಇಲ್ಲ
  • ನಾಳೆಯಿಂದ ಅರ್ಧದಿನ ಮಾತ್ರ ತರಗತಿ ಬಳಿಕ ನ. 2 ರಿಂದ ಪೂರ್ತಿ ದಿನ ತರಗತಿ ನಡೆಸಲು ಸೂಚನೆ ನೀಡಲಾಗಿದೆ

ಆಫ್​​ಲೈನ್ ಮತ್ತು ಆನ್​​ಲೈನ್ ಕ್ಲಾಸ್ ಪೋಷಕರ ಆಯ್ಕೆ:

ಇನ್ನು ಶಾಲೆಗೆ ಕಳುಹಿಸುವುದು, ಬಿಡುವುದು ಪೋಷಕರ ಆಯ್ಕೆಯಾಗಿದ್ದು, ಮಕ್ಕಳನ್ನು ಶಾಲೆಗೆ ಕಳುಹಿಸುವುದನ್ನು ಕಡ್ಡಾಯಗೊಳಿಸಿಲ್ಲ. ಈಗಾಗಲೇ ಶಾಲೆಗಳಲ್ಲಿ ಆನ್ ಲೈನ್ ತರಗತಿಗಳು ನಡೆಯುತ್ತಿದ್ದು, ಅದನ್ನೆ ಮುಂದುವರೆಸಬಹುದು. ಒಂದು ವೇಳೆ ಪೋಷಕರು ಆಫ್​​ಲೈನ್ ಕ್ಲಾಸ್​ಗೂ ಮಕ್ಕಳನ್ನು ಕಳಿಸಬಹುದು.

ABOUT THE AUTHOR

...view details