ಬೆಂಗಳೂರು: ಕಳೆದ ವರ್ಷಾರಂಭದಲ್ಲಿ ದೇಶಕ್ಕೆ ವಕ್ಕರಿಸಿದ್ದ ಮಹಾಮಾರಿ ಕೊರೊನಾ ಸೋಂಕಿನ ಹರಡುವಿಕೆ ತಡೆಯಲೆಂದು ಲಾಕ್ಡೌನ್ ಘೋಷಣೆಯಾಯ್ತು. ಬಳಿಕ ಕೋವಿಡ್ ಆರ್ಭಟ ಕಡಿಮೆಯಾಗುತ್ತಿದ್ದಂತೆ ಹಂತ ಹಂತವಾಗಿ ಅನ್ಲಾಕ್ ಆಗುತ್ತಾ ಬಂತು. ತದನಂತರ ಸೋಂಕು ನಿಯಂತ್ರಣಕ್ಕೆ ವ್ಯಾಕ್ಸಿನ್ ಅಭಿಯಾನ ಆರಂಭವಾಯ್ತು. ಇದೀಗ ಎಲ್ಲಾ ಕ್ಷೇತ್ರಗಳು ಚೇತರಿಸಿಕೊಳ್ಳುತ್ತಿವೆಯಾದರೂ ಕೊರೊನಾ ಸೋಂಕು ಇನ್ನೂ ಸಂಪೂರ್ಣವಾಗಿ ನಮ್ಮನ್ನು ಬಿಟ್ಟುಹೋಗಿಲ್ಲ. ಇದರ ನೇರ ಪರಿಣಾಮ ಬಿದ್ದದ್ದು ಮಾತ್ರ ಶಾಲಾ-ಕಾಲೇಜುಗಳಿಗೆ.
ಕಳೆದ ಕೆಲವು ದಿನಗಳ ಹಿಂದಷ್ಟೇ ಶಾಲಾ-ಕಾಲೇಜುಗಳು ಆರಂಭವಾಗಿದೆ. ಮೊದ ಮೊದಲು ಶಿಕ್ಷಣ ಇಲಾಖೆಯು 10 ನೇ ತರಗತಿ ಮತ್ತು ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಪೂರ್ಣಾವಧಿ ತರಗತಿ ಆರಂಭಿಸಿತ್ತು. ಬಳಿಕ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ನಿಧಾನವಾಗಿ ಅಂದರೆ ಕಳೆದ ಫೆಬ್ರವರಿ 22 ರಿಂದ 6 ರಿಂದ 9ನೇ ತರಗತಿಗಳು ಆರಂಭವಾಗಿವೆ. ಕೋವಿಡ್ ಹಿನ್ನೆಲೆ ರಾಜ್ಯದ ಶಾಲೆಗಳಲ್ಲಿ ಹಾಜರಾತಿ ಪ್ರಕ್ರಿಯೆ ಹೇಗಿದೆ? ಕೋವಿಡ್ ನಿಯಮಗಳನ್ನು ಪಾಲನೆ ಮಾಡಲಾಗುತ್ತಿದೆಯಾ? ಈ ಬಗ್ಗೆ ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್ ಪ್ರತಿಕ್ರಿಯಿಸಿದ್ದಾರೆ.
ತೃಪ್ತಿದಾಯಕ ಹಾಜರಾತಿ ಪ್ರಮಾಣ:
6 ರಿಂದ 10ನೇ ತರಗತಿವರೆಗೆ ರೆಗ್ಯುಲರ್ ಕ್ಲಾಸ್ ನಡೆಯುತ್ತಿದ್ದು, ಇದರಲ್ಲಿ 9 -10ನೇ ತರಗತಿಯ ಹಾಜರಾತಿ ತೃಪ್ತಿದಾಯಕವಾಗಿದೆ. ಹಲವೆಡೆ ಶೇ.70 ರಷ್ಟು ಹಾಜರಾತಿ ಇದ್ದು, ಇನ್ನು ಕೆಲವು ಜಿಲ್ಲೆಯಲ್ಲಿ ಶೇ. 90 ರಷ್ಟು ಹಾಜರಾತಿ ಇದೆ. ಆದರೆ 6, 7 ಮತ್ತು 8ನೇ ತರಗತಿಯ ಹಾಜರಾತಿಯು ಸ್ವಲ್ಪ ಕಡಿಮೆ ಇದ್ದು, ಮುಂಬರುವ ದಿನಗಳಲ್ಲಿ ಇದು ಏರಿಕೆ ಆಗುವ ನಿರೀಕ್ಷೆ ಇದೆಯೆಂದು ತಿಳಿಸಿದರು.
ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಕೋವಿಡ್ ಕ್ಲಸ್ಟರ್ - ಮಕ್ಕಳ ಮೇಲೆ ವಿಶೇಷ ನಿಗಾ: