ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಮತ್ತೆ ವಿದ್ಯಾಗಮ ಆರಂಭಿಸಲು ಸುತ್ತೋಲೆ ಹೊರಡಿಸಿದ ಶಿಕ್ಷಣ ಇಲಾಖೆ - ರಾಜ್ಯದಲ್ಲಿ ಮತ್ತೆ ವಿದ್ಯಾಗಮ

ಒಬ್ಬರು ಶಿಕ್ಷಕರು 20 ರಿಂದ 25 ಮಕ್ಕಳ ಗುಂಪು ರಚನೆ ಮಾಡಿ ತರಗತಿ ನಿರ್ವಹಣೆ ಮಾಡಬೇಕು. ಪೋಷಕರ ಮೊಬೈಲ್ ನಂಬರ್​ಗೆ ಪೋನ್ ಮಾಡಿ ಶಿಕ್ಷಣ ಚಟುವಟಿಕೆ ‌ಮುಂದುವರಿಸುವ ವ್ಯವಸ್ಥೆ ಮಾಡಲಾಗುತ್ತದೆ‌. ಪಾಳಿ ಪದ್ಧತಿಯಲ್ಲಿ ತರಗತಿಗಳ ನಿರ್ವಹಣೆ ಅಯಾ ಶಾಲೆ ಶಿಕ್ಷಕರದ್ದಾಗಿರುತ್ತದೆ. ಮೂರು ವಿಧದಲ್ಲೂ ಶಿಕ್ಷಣ ಸ್ಥಗಿತಗೊಳ್ಳದಂತೆ ತರಗತಿ ನಡೆಸಲು ಸೂಚನೆ ನೀಡಲಾಗಿದೆ.

ರಾಜ್ಯದಲ್ಲಿ ಮತ್ತೆ ವಿದ್ಯಾಗಮ
ರಾಜ್ಯದಲ್ಲಿ ಮತ್ತೆ ವಿದ್ಯಾಗಮ

By

Published : Jan 8, 2022, 2:26 AM IST

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಹಾಗೂ ರೂಪಾಂತರಿ ವೈರಸ್, ಒಮಿಕ್ರಾನ್ ಕೇಸ್ ಹೆಚ್ಚಳ ಹಿನ್ನೆಲೆ ಮತ್ತೆ ವಿದ್ಯಾಗಮ ಕಾರ್ಯಕ್ರಮವನ್ನು ಮತ್ತೆ ಆರಂಭಿಸುವಂತೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

ಈಗಾಗಲೆ ಸರ್ಕಾರ 1 ರಿಂದ 9 ತರಗತಿಯ ಆಫ್ ಲೈನ್ ತರಗತಿಗಳನ್ನು ತಾತ್ಕಾಲಿಕವಾಗಿ ಜನವರಿ 6ರಿಂದ 19ರವರೆಗೆ ರದ್ದು ಮಾಡಲಾಗಿದೆ. ಆದರೆ ವಿದ್ಯಾರ್ಥಿಗಳ ಕಲಿಕೆ ನಿರಂತರವಾಗಿರಲಿ ಎನ್ನುವ ಉದ್ದೇಶದಿಂದ ವಿದ್ಯಾಗಮ ಯೋಜನೆಯಡಿಯಲ್ಲಿ ಮೂರು ಮಾದರಿಯಲ್ಲಿ ಮಕ್ಕಳಿಗೆ ಪರ್ಯಾಯ ಶಿಕ್ಷಣ, ಮೊಬೈಲ್ ರಹಿತ ತರಗತಿ/ಆಫ್ ಲೈನ್ ತರಗತಿ, ಇಂಟರ್ ನೆಟ್ ರಹಿತ ಮೊಬೈಲ್ ಪೋನ್ ಹೊಂದಿರುವ ತರಗತಿ, ಇಂಟರ್ ನೆಟ್ ಸಹಿತ ಮೊಬೈಲ್ ಟ್ಯಾಬ್ ತರಗತಿಗಳ‌ನ್ನು ಜಾರಿಗೆ ತರಲಾಗುತ್ತಿದೆ.

ಒಬ್ಬರು ಶಿಕ್ಷಕರು 20 ರಿಂದ 25 ಮಕ್ಕಳ ಗುಂಪು ರಚನೆ ಮಾಡಿ ತರಗತಿ ನಿರ್ವಹಣೆ ಮಾಡಬೇಕು. ಪೋಷಕರ ಮೊಬೈಲ್ ನಂಬರ್​ಗೆ ಪೋನ್ ಮಾಡಿ ಶಿಕ್ಷಣ ಚಟುವಟಿಕೆ ‌ಮುಂದುವರಿಸುವ ವ್ಯವಸ್ಥೆ ಮಾಡಲಾಗುತ್ತದೆ‌. ಪಾಳಿ ಪದ್ಧತಿಯಲ್ಲಿ ತರಗತಿಗಳ ನಿರ್ವಹಣೆ ಅಯಾ ಶಾಲೆ ಶಿಕ್ಷಕರದ್ದಾಗಿರುತ್ತದೆ. ಮೂರು ವಿಧದಲ್ಲೂ ಶಿಕ್ಷಣ ಸ್ಥಗಿತಗೊಳ್ಳದಂತೆ ತರಗತಿ ನಡೆಸಲು ಸೂಚನೆ ನೀಡಲಾಗಿದೆ.

ರೇಡಿಯೋ, ದೂರದರ್ಶನ, ವಿಡಿಯೋ, ವಾಟ್ಸಪ್ ಮೂಲಕವೂ ಕಲಿಕಾ ನಿರ್ವಹಣೆಗೆ ಅವಕಾಶವಿದೆ. 1 ರಿಂದ ‌3 ನೇ ತರಗತಿ ಬೆಳಿಗ್ಗೆ 10 ರಿಂದ 12:30 ರವರೆಗೆ ನಡೆಯುತ್ತದೆ. 4 ರಿಂದ 5ನೇ ತರಗತಿವರೆಗೆ ದಿನ ಬಿಟ್ಟು ದಿನ ಬೆಳಿಗ್ಗೆ 10 ರಿಂದ 12:30 ರವರೆಗೆ, 6 ನೇ ತರಗತಿ 10 ರಿಂದ 1:15 ರವರೆಗೆ, 7 ಹಾಗೂ 8 ನೇ ತರಗತಿ ಮಂಗಳವಾರ ಹಾಗೂ, ಗುರುವಾರದಂದು ಬೆಳಿಗ್ಗೆ 10 ರಿಂದ 1:15 ರವರೆಗೆ ತರಗತಿ ನಡೆಯಲಿದೆ. 9 ನೇ ತರಗತಿ ದಿನಬಿಟ್ಟು ದಿನ ತರಗತಿ ಇರಲಿದ್ದು, ಬೆಳಿಗ್ಗೆ 10:15 ರಿಂದ ಮಧ್ಯಾಹ್ನ 1:15 ರವರೆಗೆ ನಡೆಯಲಿದೆ. ಕೊರೊನಾ ಮಾರ್ಗಸೂಚಿ ಅನುಸರಿಸಿ ಶಾಲಾ ಅವರಣದಲ್ಲಿ ತಂಡಗಳೊಂದಿಗೆ ತರಗತಿಯನ್ನು ( ಆಫ್ ಲೈನ್ ) ನಡೆಸಲು ಸೂಚನೆ ಬಿಡುಗಡೆ ಮಾಡಲಾಗಿದೆ. ಶಾಲೆಗಳ ನಿರ್ವಹಣೆಗೆ ಡಿಡಿಪಿಐ, ಅಧ್ಯಾಪಕರು,‌ ಮುಖ್ಯೋಪಾಧ್ಯಯರು, ಬಿಇಒ ಅಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿದೆ.

ಇದನ್ನೂ ಓದಿ:ಕರ್ನಾಟಕವನ್ನು ದೇಶದ ನಂ.1 ರಾಜ್ಯವನ್ನಾಗಿಸಲು ಪ್ರಯತ್ನ ಮಾಡಿ: KAS ಅಧಿಕಾರಿಗಳಿಗೆ ಸಿಎಂ ಕರೆ

ABOUT THE AUTHOR

...view details