ಕರ್ನಾಟಕ

karnataka

ETV Bharat / state

ಆರ್​​ಟಿಇ ಸೀಟುಗಳಿಗೆ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ: ಪರಿಷ್ಕೃತ ವೇಳಾಪಟ್ಟಿ ಹೀಗಿದೆ..

ಆರ್‌ಟಿಇಗೆ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ ಮಾಡುವಂತೆ ಮನವಿ ಬಂದಿದೆ. ಈ ಕಾರಣಕ್ಕೆ ಮಾರ್ಚ್ 15 ರವರೆಗೆ ದಿನಾಂಕ ವಿಸ್ತರಿಸಲಾಗಿದೆ. ಪರಿಷ್ಕೃತ ವೇಳಾಪಟ್ಟಿ ಪ್ರಕಟಗೊಂಡಿದ್ದು, ಹೆಚ್ಚು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅನುಕೂಲವಾಗಲಿದೆ.

ಶಿಕ್ಷಣ ಇಲಾಖೆ
ಶಿಕ್ಷಣ ಇಲಾಖೆ

By

Published : Mar 2, 2022, 6:37 PM IST

ಬೆಂಗಳೂರು: 2022-23ನೇ ಸಾಲಿನಲ್ಲಿ ಶಿಕ್ಷಣ ಹಕ್ಕು ಕಾಯಿದೆಯಡಿ (ಆರ್‌ಟಿಇ) ಸೀಟು ಕೋರಿ ಅರ್ಜಿ ಸಲ್ಲಿಸಲು ದಿನಾಂಕ ನಿಗದಿಪಡಿಸಲಾಗಿತ್ತು. ಫೆಬ್ರವರಿ 3ರಿಂದ ಮಾರ್ಚ್ 3ವರೆಗೆ ಒಂದು ತಿಂಗಳವರೆಗೆ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು.

ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯಿದೆ-2009 ರ ಸೆಕ್ಷನ್ 12(1) (ಬಿ) ಹಾಗೂ 12(1) (ಸಿ) ಪ್ರಕಾರ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ ಮಕ್ಕಳಿಗೆ ಪ್ರವೇಶ ಇಚ್ಚಿಸುವ ಪೋಷಕರು ಅರ್ಜಿ ಸಲ್ಲಿಸುವ ಅರ್ಜಿದಾರರು ತಮ್ಮ ವ್ಯಾಪ್ತಿಯ ನೆರೆಹೊರೆ ಶಾಲೆಗಳ ಮಾಹಿತಿಯನ್ನು ಇಲಾಖಾ ವೆಬ್‌ಸೈಟ್ http://www.schooleducation.kar.nic.in ರಲ್ಲಿ ಖಚಿತಪಡಿಸಿಕೊಂಡು ದಾಖಲಾತಿಗೆ ಅರ್ಜಿ ಸಲ್ಲಿಸಬಹುದು.‌

  • ಅನುದಾನಿತ ಶಾಲೆಗಳೂ ಸೇರಿದಂತೆ ಆನ್​​ಲೈನ್‌ ಅರ್ಜಿ ಸಲ್ಲಿಸುವ ಅವಧಿ- ಮಾರ್ಚ್ 3 ರಿಂದ15ರ ತನಕ
  • ಇಐಡಿ ಮೂಲಕ ಸಲ್ಲಿಸಿದ ಅರ್ಜಿಗಳ ಡೇಟಾ ಪರಿಶೀಲನೆ- ಮಾರ್ಚ್ 18 ರ ತನಕ
  • ವಿಶೇಷ ಪ್ರವರ್ಗಗಳು, ಕ್ರಮಬದ್ದವಲ್ಲದ ಅರ್ಜಿ ಪರಿಶೀಲನೆ- ಮಾರ್ಚ್ 18 ರ ತನಕ
  • ಲಾಟರಿ ಪ್ರಕ್ರಿಯೆಗೆ ಅರ್ಹ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟ- ಮಾರ್ಚ್ 25
  • ಆನ್ ಲೈನ್ ಮೂಲಕ ಮೊದಲ ಸುತ್ತು- ಏಪ್ರಿಲ್ 4
  • ಶಾಲೆಗಳಲ್ಲಿ ದಾಖಲಾತಿ ಪ್ರಾರಂಭ- ಏಪ್ರಿಲ್ 5 ರಿಂದ16ರ ತನಕ
  • ಎರಡನೇ ಸುತ್ತಿನ ಸೀಟು ಹಂಚಿಕೆ- ಮೇ 4
  • ಎರಡನೇ ಸುತ್ತಿನಲ್ಲಿ ಹಂಚಿಕೆಯಾದ ಸೀಟುಗಳಿಗೆ ಶಾಲೆಗಳಲ್ಲಿ ದಾಖಲಾತಿ ಅವಧಿ- ಮೇ 5 ರಿಂದ ಮೇ 16ರ ತನಕ

For All Latest Updates

TAGGED:

ABOUT THE AUTHOR

...view details