ಬೆಂಗಳೂರು: ಕರ್ನಾಟಕ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಹಾಗೂ ಭಾಷಾ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ನೌಕರರ ರಾಜೀನಾಮೆ ಮತ್ತು ಹಿಂಬಡ್ತಿ ವಿಚಾರದಲ್ಲಿ ಕರ್ನಾಟಕ ಶಿಕ್ಷಣ ಕಾಯಿದೆ 1983 ಅನ್ವಯವಾಗಲಿದೆ ಎಂದು ಹೈಕೋರ್ಟ್ ತಿಳಿಸಿದೆ.
ಕರ್ನಾಟಕ ಶಿಕ್ಷಣ ಕಾಯಿದೆ ಸೆಕ್ಷನ್ 97 ರಾಜೀನಾಮೆ ನೀಡುವುದಕ್ಕೂ ಮುನ್ನ ಆಡಳಿತ ಮಂಡಳಿಗೆ ನೋಟಿಸ್ ನೀಡುವ ವಿಚಾರ ಮತ್ತು ನಿಗದಿತ ನಮೂನೆಯಲ್ಲಿ ರಾಜ್ಯ ಸರ್ಕಾರದಲ್ಲಿ ಅಧಿಕಾರದಲ್ಲಿರುವ ಅಧಿಕಾರಿಯಿಂದ ದೃಢೀಕರಿಸುವ ವಿಚಾರನ್ನು ತಿಳಿಸಲಿದೆ. ಸೆಕ್ಷನ್ 98 ಹಿಂಬಡ್ತಿ ನೀಡುವುದಕ್ಕಾಗಿ ಸಕ್ಷಮ ಪ್ರಾಧಿಕಾರ ಮತ್ತು ಹಿರಿಯ ಅಧಿಕಾರಿಗಳ ಅನುಮತಿ ಪಡೆದ ಬಳಿದ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿದೆ.
ರಾಜರಾಜೇಶ್ವರಿ ದಂತ ಕಾಲೇಜು ಮತ್ತು ಆಸ್ಪತ್ರೆ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ನ್ಯಾಯಪೀಠ ಅರ್ಜಿಯನ್ನು ವಜಾಗೊಳಿಸಿದೆ. ಅಲ್ಲದೇ ಕರ್ನಾಟಕ ಶಿಕ್ಷಣ ಕಾಯಿದೆಯ ಈ ಸೆಕ್ಷನ್ಗಳು ಕಾರ್ಮಿಕ ಕಾನೂನಿನಂತೆ ಸಾಮಾಜಿಕ ಭದ್ರತೆಯನ್ನು ಒದಗಿಸಲಿವೆ ಎಂದು ಅಭಿಪ್ರಾಯ ಪಟ್ಟಿದೆ.
ಕಾಲೇಜಿನ ವಾದವನ್ನು ಆಲಿಸಿದ ನ್ಯಾಯಪೀಠ, ಉದ್ಯೋಗಿಗಳ ಹಿಂಬಡ್ತಿಗೆ ಸಂಬಂಧಿಸಿದಂತೆ ಕಾಯಿದೆಯ ಸೆಕ್ಷನ್ 98(1)ರಲ್ಲಿ ಯಾವುದೇ ಉದ್ಯೋಗ ಎಂಬ ಪದ ಬಳಸಲಾಗಿದೆ. ಅಲ್ಲದೆ ಸೆಕ್ಷನ್ 2(15)ರ ಪ್ರಕಾರ ಶಿಕ್ಷಣ ಸಂಸ್ಥೆಯಲ್ಲಿರುವ ಉದ್ಯೋಗದಲ್ಲಿರುವ ವ್ಯಕ್ತಿ ಎಂಬುದಾಗಿ ವ್ಯಾಖ್ಯಾನಿಸುತ್ತದೆ. ಅಲ್ಲದೆ, ಪ್ರತಿ ಉದ್ಯೋಗಿ ಹುದ್ದೆಯನ್ನು ಲೆಕ್ಕಿಸದೆ ಒಳಗೊಂಡಿರುತ್ತದೆ. ಕಾರ್ಯಗಳ ಸ್ವರೂಪ ಅಥವಾ ಶಿಕ್ಷಣ ಸಂಸ್ಥೆಯ ಪ್ರಕಾರ, ವಿಭಾಗ 2(14) ಅಡಿಯಲ್ಲಿ ಹೊರತುಪಡಿಸಿ, ಇದು 'ಶಿಕ್ಷಣ ಸಂಸ್ಥೆ'ಯನ್ನು ವ್ಯಾಖ್ಯಾನಿಸುತ್ತದೆ. ‘ಬೋಧಕ ಸಿಬ್ಬಂದಿ’ ಮತ್ತು ‘ಅನುದಾನಿತ ಶಿಕ್ಷಣ ಸಂಸ್ಥೆ’ ಎಂಬ ಪದಗಳನ್ನು ಬಳಸಿಕೊಳ್ಳುವ ಸೆಕ್ಷನ್ 98(2)ರ ಪಠ್ಯದಿಂದ ಇದು ಸ್ಪಷ್ಟವಾಗುತ್ತದೆ ಎಂದು ಪೀಠ ಹೇಳಿದೆ.