ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಕೊರೋನಾ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ನಿಯಂತ್ರಣಕ್ಕಾಗಿ ಹರಸಾಹಸ ಪಡುತ್ತಿರುವ ಪೊಲೀಸರಿಗೆ ವಿದ್ಯಾವಂತರಿಂದಲೇ ಸೂಕ್ತ ಸಹಕಾರ ಸಿಗುತ್ತಿಲ್ಲ.
ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಸೂಚಿಸಿರುವ ಕೆಲವು ನಿಬಂಧನೆಗಳನ್ನು ಗಾಳಿಗೆ ತೂರುತ್ತಿರುವುದು ಕಂಡುಬರುತ್ತಿದೆ. ತಿಳುವಳಿಕೆ ಇರುವವರೇ ನಿಯಮ ಉಲ್ಲಂಘಿಸಿ, ನಂತರ ನಮಗೆ ಈ ಬಗ್ಗೆ ಮಾಹಿತಿ ಇಲ್ಲ ಎಂದು ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಇವರಿಗೆ ಅರಿವು ಮೂಡಿಸುವುದು ಪೊಲೀಸರರಿಗೆ ತಲೆನೋವಾಗಿ ಪರಿಣಮಿಸಿದೆ.
ನೆಟ್ಟಕಲ್ಲಪ್ಪ ವೃತ್ತದಲ್ಲಿ ಆಡಿ ಕಾರಿನಲ್ಲಿ ಆಗಮಿಸಿದ ರಾಜ್ಯದ ಪ್ರತಿಷ್ಠಿತ ಪತ್ರಿಕೆ ಮುಖ್ಯಸ್ಥರೊಬ್ಬರ ಪುತ್ರ ಪೊಲೀಸರ ಜೊತೆ ನಡೆಸಿದ ವಾಗ್ವಾದ ಹಾಗೂ ಅವರಿಗೆ ಅರಿವು ಮೂಡಿಸಲು ಪೊಲೀಸ್ ಅಧಿಕಾರಿ ಪಟ್ಟ ಶ್ರಮದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸರ್ಕಾರದ ಲಾಕ್ಡೌನ್ ಆದೇಶ ಗಾಳಿಗೆ ತೂರುತ್ತಿರುವ ವಿದ್ಯಾವಂತರು ಆಡಿ ಕಾರಿನಲ್ಲಿ ಬಂದಿದ್ದ ಪತ್ರಿಕೆ ಮುಖ್ಯಸ್ಥರ ಪುತ್ರ ಮಾಸ್ಕ್ ಧರಿಸಿರಲಿಲ್ಲ. ಯಾಕೆ ಎಂದು ಪ್ರಶ್ನಿಸಿದ್ದಕ್ಕೆ ನೆಟ್ಟಕಲ್ಲಪ್ಪ ವೃತ್ತಕ್ಕೆ ಹೊರಟಿದ್ದೇನೆ. ನಿಮಗೆ ಚಾಲನಾ ಪರವಾನಗಿ ಬೇಕಾ? ಎಂದು ವಾದ ಮಾಡಿದ್ದಾರೆ. ಶಿಕ್ಷಿತರಾಗಿ ನಿಮಗೆ ಮಾಸ್ಕ್ ಧರಿಸಬೇಕೆಂಬ ಪರಿಜ್ಞಾನವಿಲ್ಲವಾ ಎಂದಿದ್ದಕ್ಕೆ, ಇಲ್ಲ ನನಗೆ ಅದರ ಅರಿವಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ. ಕೊನೆಗೂ ತಾಳ್ಮೆ ಕಳೆದುಕೊಂಡ ಪೊಲೀಸ್ ಅಧಿಕಾರಿ, ತಮ್ಮ ಸಿಬ್ಬಂದಿ ಮೂಲಕ ಒಂದು ಹೊಸ ಮಾಸ್ಕ್ ಕೊಡಿಸಿ ಹಾಕಿಸಿ ಕಳುಹಿಸಿದ್ದಾರೆ.