ಬೆಂಗಳೂರು:ನವದೆಹಲಿಯ ಫ್ಲ್ಯಾಟ್ಗಳ ಮೇಲಿನ ಐಟಿ ದಾಳಿ ಪ್ರಕರಣದಲ್ಲಿ ಇಡಿ ಸಮನ್ಸ್ ವಿರುದ್ಧ ಮಾಜಿ ಸಚಿವ ಡಿ ಕೆ ಶಿವಕುಮಾರ್ ಸೇರಿ ಇತರ ಮೂವರು ಆಪ್ತರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಇಂದು ಹೈಕೋರ್ಟ್ನಿಂದ ಆದೇಶ ಬರಲಿದೆ.
ಇಡಿ ಸಮನ್ಸ್.. ಡಿಕೆಶಿ ಸೇರಿ ನಾಲ್ವರು ಸಲ್ಲಿಸಿದ್ದ ಅರ್ಜಿ ಕುರಿತು ಇಂದು ಹೈಕೋರ್ಟ್ ತೀರ್ಪು.. - ಮಾಜಿ ಸಚಿವ ಡಿ.ಕೆ. ಶಿವಕುಮಾರ್
ನವದೆಹಲಿಯ ಫ್ಲ್ಯಾಟ್ಗಳ ಮೇಲಿನ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಡಿ ಕೆ ಶಿವಕುಮಾರ್ ಹಾಗೂ ಮೂವರು ಆರೋಪಿಗಳು ಸಲ್ಲಿಸಿದ್ದ ಅರ್ಜಿಯ ತೀರ್ಪನ್ನು ಇಂದು ಹೈಕೋರ್ಟ್ ನೀಡಲಿದೆ.

ಈ ಕುರಿತು ಆರೋಪಿಗಳಾದ ಮಾಜಿ ಸಚಿವ ಡಿಕೆಶಿ, ಸಚಿನ್ ನಾರಾಯಣ, ಸುನಿಲ್‌ಕುಮಾರ್ ಶರ್ಮಾ ಹಾಗೂ ಆಂಜನೇಯ ಹನುಮಂತಯ್ಯ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿಗಳಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆದಿತ್ತು.ಮಾಜಿ ಸಚಿವ ಡಿಕೆಶಿ ಪರ ವಾದ ಮಂಡಿಸಿದ ಹಿರಿಯ ವಕೀಲ ಬಿ ವಿ ಆಚಾರ್ಯ ಸಿಆರ್‍ಪಿಸಿ ಸೆಕ್ಷನ್ 482ರಡಿ ಈಗಾಗ್ಲೇ ಡಿಕೆಶಿ ಸಮನ್ಸ್ ಕುರಿತು ತೀರ್ಪು ನೀಡಿರುವುದಾಗಿ ಏಕಸದಸ್ಯ ನ್ಯಾಯಪೀಠ ಹೇಳಿದೆ. ಆದರೆ, ಈ 482 ರಡಿ ತೀರ್ಪು ನೀಡುವ ಅಧಿಕಾರ ಏಕಸದಸ್ಯ ಪೀಠಕ್ಕೆ ಇಲ್ಲ. ಹಾಗಾಗಿ ಏಕಸದಸ್ಯ ನ್ಯಾಯಪೀಠದ ತೀರ್ಪನ್ನು ರದ್ದುಪಡಿಸಬೇಕು ಎಂದು ಮನವಿ ಮಾಡಿದ್ರು.
ಈ ವೇಳೆ ಜಾರಿ ನಿರ್ದೇಶನಾಲಯದ ಪರ ವಾದ ಮಂಡಿಸಿದ ಹಿರಿಯ ವಕೀಲ ಎಸ್. ನಾಗಾನಂದ ಸಿಆರ್‍ಪಿಸಿ ಸೆಕ್ಷನ್ 482ರಡಿ ಏಕಸದಸ್ಯ ನ್ಯಾಯಪೀಠ ತೀರ್ಪು ಕೊಟ್ಟಿರುವುದರಿಂದ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ವಿಚಾರಣೆಗೆ ಅಂಗೀಕಾರ್ಹವಲ್ಲ. ಕ್ರಿಮಿನಲ್ ಸ್ವರೂಪದ ಪ್ರಕರಣಗಳ ಮೇಲೆ ಸಂವಿಧಾನದ ಕಲಂ 226 ಹಾಗೂ ಸಿಆರ್‍ಪಿಸಿ ಸೆಕ್ಷನ್ 482 ಅನ್ವಯವಾಗುತ್ತದೆ ಎಂದರು.ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ ಮೇಲ್ಮನವಿ ಅರ್ಜಿ ವಿಭಾಗೀಯ ಪೀಠದ ಅಧಿಕಾರ ವ್ಯಾಪ್ತಿಗೆ ಬರುವ ಕುರಿತು ಇಂದು ಮಧ್ಯಾಹ್ನ 2:30ಕ್ಕೆ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದೆ.