ಕರ್ನಾಟಕ

karnataka

ETV Bharat / state

ನಟಿಮಣಿಯರು ಹಾಗೂ ಆಪ್ತರಿಗೆ ಸಂಕಷ್ಟ: ಇಡಿಯಿಂದಲೂ ತನಿಖೆ ಚುರುಕು

ಸ್ಯಾಂಡಲ್​ವುಡ್ ಡ್ರಗ್ಸ್​​​ ನಂಟು ಆರೋಪದಲ್ಲಿ ಸಿಕ್ಕಿಬಿದ್ದ ಆರೋಪಿಗಳಿಗೆ ಇಡಿ ಸಂಕಷ್ಟ ಎದುರಾಗಿದ್ದು, ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಮಾಡಿರುವ ವಿಚಾರ ಸದ್ಯ ತನಿಖೆಯಲ್ಲಿ ಬಯಲಾಗಲಿದೆ‌.

ನಟಿಮಣಿಯರು ಹಾಗೂ ಆಪ್ತರಿಗೆ ಸಂಕಷ್ಟ
ನಟಿಮಣಿಯರು ಹಾಗೂ ಆಪ್ತರಿಗೆ ಸಂಕಷ್ಟ

By

Published : Sep 11, 2020, 7:54 AM IST

ಬೆಂಗಳೂರು: ಸ್ಯಾಂಡಲ್​ವುಡ್ ಡ್ರಗ್ಸ್​​ ನಂಟು ಆರೋಪದಲ್ಲಿ ಸಿಕ್ಕಿಬಿದ್ದ ಪ್ರತಿಯೊಬ್ಬ ಆರೋಪಿಗಳಿಗೆ ಇಡಿ ಸಂಕಷ್ಟ ಎದುರಾಗಿದೆ. ನಿನ್ನೆ ಸಿಸಿಬಿ ಕಚೇರಿಗೆ ಆಗಮಿಸಿದ ಜಾರಿ ನಿರ್ದೇಶನಾಲಯ ಅಧಿಕಾರಿಗಳು ನಗರ ಆಯುಕ್ತ ಕಮಲ್ ಪಂತ್​​​, ಸಿಸಿಬಿ ತನಿಖಾಧಿಕಾರಿ ಸಂದೀಪ್ ಪಾಟೀಲ್ ಹಾಗೂ ಡಿಸಿಪಿ ರವಿ‌ಕುಮಾರ್ ಅವರಿಂದ ಮಾಹಿತಿ ಕಲೆ‌ಹಾಕಿದ್ದಾರೆ. ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಮಾಡಿರುವ ವಿಚಾರ ಸದ್ಯ ತನಿಖೆಯಲ್ಲಿ ಬಯಲಾಗಿದೆ‌.

ಪ್ರಕರಣದಲ್ಲಿ ರಾಗಿಣಿ ದ್ವಿವೇದಿ, ನಟಿ ಸಂಜನಾ, ಕಿಂಗ್​ಪಿನ್ ವಿರೇನ್ ಖನ್ನಾ, ರವಿಶಂಕರ್, ರಾಹುಲ್, ಲೂಮ್ ಪೆಪ್ಪರ್, ನಿಯಾಜ್ ‌ಮೇಲೆ ಇಡಿ ಪ್ರಮುಖ ದಾಖಲೆ ಕಲೆಹಾಕಿದೆ. ಡ್ರಗ್ಸ್​​ ಪ್ರಕರಣದಲ್ಲಿ ವಿದೇಶಿ ಹಣ, ಅಕ್ರಮ ಹಣ, ಹವಾಲ ದಂಧೆ ನಡೆದಿರುವ ಸಾಧ್ಯತೆ ಮೇರೆಗೆ ಇಡಿ ಅಧಿಕಾರಿಗಳು ತನಿಖೆ ನಡೆಸಿ ಇಸಿಐಆರ್ ದಾಖಲಿಸಲಿದೆ.

ಒಂದು ವೇಳೆ ಡ್ರಗ್ಸ್​​​ ಮಾಫಿಯಾ ಆರೋಪದಿಂದ ಹೊರಗಡೆ ಬಂದರೂ ಸಹ ಆರೋಪಿಗಳು ಇಡಿ ತನಿಖೆ ಎದುರಿಸುವುದು ಅನಿವಾರ್ಯವಾಗಿದೆ.

ABOUT THE AUTHOR

...view details