ಬೆಂಗಳೂರು :ಸಾಮಾಜಿಕ ಜಾಲತಾಣದ ಮೂಲಕ ನಿರುದ್ಯೋಗಿಗಳಿಗೆ ಪಾರ್ಟ್ ಟೈಮ್ ಕೆಲಸ ಕೊಡಿಸುವ ಸೋಗಿನಲ್ಲಿ ಹಣ ಹೂಡಿಕೆ ಮಾಡಿ ವಂಚಿಸುತ್ತಿದ್ದ ಚೀನಾ ಮೂಲದ ಕಂಪನಿಯ ಕಚೇರಿಗಳ ಮೇಲೆ ಇಡಿ ದಾಳಿ ನಡೆಸಿದೆ. ಸುಮಾರು 12 ಕಡೆಗಳಲ್ಲಿ ದಾಳಿ ಮಾಡಿ 5.85 ಕೋಟಿ ರೂಪಾಯಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ) ಜಪ್ತಿ ಮಾಡಿದೆ.
ವಾಟ್ಸ್ಆ್ಯಪ್ ಹಾಗೂ ಟೆಲಿಗ್ರಾಂ ಮುಖಾಂತರ ನಿರುದ್ಯೋಗಿಗಳಿಗೆ ಕೆಲಸದ ಭರವಸೆ ನೀಡಿ ತಮ್ಮತ್ತ ಸೆಳೆದುಕೊಳ್ಳುತ್ತಿದ್ದ ಚೀನಾ ಮೂಲದ ಕೀಪ್ ಶೇರರ್ ಹೆಸರಿನ ಕಂಪನಿ ನೋಂದಣಿ ಶುಲ್ಕ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿತ್ತು. ಈ ಕಂಪನಿಯು ಸೆಲೆಬ್ರಿಟಿ ವಿಡಿಯೊ ಶೇರ್ ಮಾಡುವ ಕೆಲಸವನ್ನು ಉದ್ಯೋಗಿಗಳಿಗೆ ನೀಡುತಿತ್ತು. ಆರಂಭದಲ್ಲಿ ಪ್ರತಿ ವಿಡಿಯೊ 20 ರೂಪಾಯಿ ನೀಡುತಿತ್ತು. ಕೆಲವೇ ದಿನಗಳ ಬಳಿಕ ಗೂಗಲ್ ಪ್ಲೇ ಸ್ಟೋರ್ ನಿಂದ ಕೀಪ್ ಶೇರರ್ ಆ್ಯಪ್ ಕಾಣೆಯಾಗಿತ್ತು.