ಬೆಂಗಳೂರು : ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬೆಂಗಳೂರಿನ ಪಿಜನ್ ಎಜುಕೇಶನ್ ಟೆಕ್ನಾಲಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಸೇರಿದ 3.94ಕೋಟಿ ರೂ ಹಣವನ್ನ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
1999ರ ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆ (FEMA) 37A ಅಡಿ ಕಂಪನಿಯ ಹಣವನ್ನ ಜಪ್ತಿ ಮಾಡಲಾಗಿದೆ. ಒಡಾ ಕ್ಲಾಸ್ ಆ್ಯಪ್ ಮೂಲಕ ಆನ್‌ಲೈನ್ ಶಿಕ್ಷಣ ಒದಗಿಸುತ್ತಿದ್ದ ಪಿಜನ್ ಎಜುಕೇಶನ್ ಟೆಕ್ನಾಲಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಚೀನಾ ಮೂಲದ ಲಿಯು ಕ್ಯಾನ್ ಹಾಗೂ ಭಾರತದ ವೇದಾಂತ್ ಹಮಿರ್ವಾಸಿಯಾರನ್ನ ತನ್ನ ನಿರ್ದೇಶಕರನ್ನಾಗಿ ಹೊಂದಿದ್ದು, ಬೆಂಗಳೂರಿನಿಂದ ಕಾರ್ಯ ನಿರ್ವಹಿಸುತ್ತಿತ್ತು.
ಪಿಜನ್ ಎಜುಕೇಶನ್ ಟೆಕ್ನಾಲಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯನ್ನ ಕ್ಯಾಮನ್ ದ್ವೀಪಗಳಿಂದಲೇ ಶೇಕಡಾ ನೂರರಷ್ಟು ಚೀನಾ ಮೂಲದ ವ್ಯಕ್ತಿಗಳು ನಿರ್ವಹಿಸುತ್ತಿದ್ದರು. ಜಾಹೀರಾತು ವೆಚ್ಚದ ಹೆಸರಿನಲ್ಲಿ ಕಂಪನಿಯ ಖಾತೆಯಿಂದ 82.72 ಕೋಟಿ ರೂಪಾಯಿ ಹಣ ಚೀನಾ ಮತ್ತು ಹಾಂಕಾಂಗ್ ಮೂಲದ ಖಾತೆಗಳಿಗೆ ವರ್ಗಾವಣೆಯಾಗಿರುವುದು ತನಿಖೆ ವೇಳೆ ಪತ್ತೆಯಾಗಿದೆ. ಮೇ 19ರಂದು ಕಂಪನಿಯ 8.26 ಕೋಟಿ ರೂ ಹಣವನ್ನ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಜಪ್ತಿ ಮಾಡಿದ್ದರು.
ಓದಿ :ಬೆಂಗಳೂರು: ಚೀನಾದ ಪಿಜನ್ ಎಜುಕೇಶನ್ ಟೆಕ್ನಾಲಜಿಯ ₹8.26 ಕೋಟಿ ಜಪ್ತಿ
ಮೇನಲ್ಲಿ ಪಿಜನ್ ಸಂಸ್ಥೆ ಮೇಲೆ ಇಡಿ ದಾಳಿ: ಅಕ್ರಮ ಹಣ ವರ್ಗಾವಣೆ ತಡೆ ಪ್ರಕರಣದಲ್ಲಿ ಬೆಂಗಳೂರಿನ ಪಿಜನ್ ಎಜುಕೇಶನ್ ಟೆಕ್ನಾಲಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ಗೆ ಸೇರಿದ 8.26 ಕೋಟಿ ರೂಪಾಯಿ ಹಣವನ್ನು ಜಾರಿ ನಿರ್ದೇಶನಾಲಯ (ಇಡಿ)ದ ಅಧಿಕಾರಿಗಳು ಮೇ ತಿಂಗಳಿನಲ್ಲಿ ವಶಕ್ಕೆ ಪಡೆದಿದ್ದರು.
ಈ ಸಂಸ್ಥೆಯನ್ನು ಕ್ಯಾಮನ್ ದ್ವೀಪಗಳಿಂದಲೇ ಶೇಕಡಾ ನೂರರಷ್ಟು ಚೀನಾ ಮೂಲದ ವ್ಯಕ್ತಿಗಳು ನಿರ್ವಹಿಸುತ್ತಿರುವುದು. ಜಾಹೀರಾತು ವೆಚ್ಚದ ಹೆಸರಿನಲ್ಲಿ ಕಂಪನಿಯ ಖಾತೆಯಿಂದ 82.72 ಕೋಟಿ ರೂಪಾಯಿ ಹಣ ಚೀನಾ ಮತ್ತು ಹಾಂಕಾಂಗ್ ಮೂಲದ ಖಾತೆಗಳಿಗೆ ವರ್ಗಾವಣೆಯಾಗಿರುವುದು ತನಿಖೆ ವೇಳೆ ಪತ್ತೆಯಾಗಿತ್ತು. ಈ ಬಗ್ಗೆ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದ್ದು, ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ (ಫೆಮಾ) ಸೆಕ್ಷನ್ 37ಎ ಅಡಿ ಹಣ ಜಪ್ತಿ ಮಾಡಲಾಗಿದೆ ಎಂದು ಇಡಿ ತಿಳಿಸಿತ್ತು.
ಏಪ್ರಿಲ್ನಲ್ಲಿ ನಡೆದಿತ್ತು ದಾಳಿ: ಇಡಿ ಇಡಿ ಅಧಿಕಾರಿಗಳು ಕಳೆದ ಏಪ್ರಿಲ್ನಲ್ಲಿ ಈ ಸಂಸ್ಥೆ ಮೇಲೆ ದಾಳಿ ಶೋಧ ಕಾರ್ಯ ನಡೆಸಿದ್ದರು. ಈ ವೇಳೆ ಸಂಸ್ಥೆಯ ಎಲ್ಲ ವ್ಯವಹಾರಗಳು, ಹಣಕಾಸು ನಿರ್ಧಾರಗಳನ್ನು ಒಳಗೊಂಡಂತೆ ಪ್ರತಿಯೊಂದು ತೀರ್ಮಾನವನ್ನು ಚೀನಾದಲ್ಲಿ ಕುಳಿತಿರುವ ವ್ಯಕ್ತಿಗಳು ತೆಗೆದುಕೊಳ್ಳುತ್ತಿದ್ದಾರೆ. ಚೀನಾದ ನಿರ್ದೇಶಕ ಲಿಯು ಕ್ಯಾನ್ ಸೂಚನೆಯ ಮೇರೆಗೆ ಸಂಸ್ಥೆ ಜಾಹೀರಾತು ಮತ್ತು ಮಾರುಕಟ್ಟೆ ವೆಚ್ಚದ ಹೆಸರಿನಲ್ಲಿ 82.72 ಕೋಟಿ ರೂ.ಗಳನ್ನು ಎರಡು ರಾಷ್ಟ್ರಗಳಿಗೆ ವರ್ಗಾವಣೆಗೊಂಡಿರುವುದನ್ನು ಪತ್ತೆ ಹಚ್ಚಲಾಗಿತ್ತು.
ಅಲ್ಲದೇ, ಹಣ ವರ್ಗಾವಣೆಗೆ ಸಂಬಂಧಿಸಿದಂತೆ ತನ್ನ ಕಡೆಯಿಂದ ಯಾವುದೇ ಸೇವಾ ಸ್ವೀಕೃತಿಯ ದಾಖಲೆಗಳು ಮತ್ತು ಹೇಳಿದ ವೆಚ್ಚಗಳಿಗೆ ಯಾವುದೇ ಜಾಹೀರಾತಿನ ಪುರಾವೆಗಳನ್ನು ನೀಡಲು ಸಾಧ್ಯವಿಲ್ಲ ಎಂದು ಸಂಸ್ಥೆ ಹೇಳಿತ್ತು. ಜೊತೆಗೆ ಲಿಯು ಕ್ಯಾನ್‌ನ ಸೂಚನೆಯಂತೆ ಹಣ ಪಾವತಿಸಲಾಗಿತ್ತು ಕಂಪನಿಯ ನಿರ್ದೇಶಕ ಮತ್ತು ಖಾತೆ ವ್ಯವಸ್ಥಾಪಕರು ತನಿಖೆ ಸಂದರ್ಭದಲ್ಲಿ ಒಪ್ಪಿಕೊಂಡಿದ್ದರು. ಗೂಗಲ್ ಮತ್ತು ಫೇಸ್‌ಬುಕ್ ಮೂಲಕ ಜಾಹೀರಾತುಗಳನ್ನು ಪ್ರಕಟಿಸಲಾಗಿದೆ ಎಂದು ಚೀನಾದ ನಿರ್ದೇಶಕರು ಹೇಳಿದ್ದರು ಎಂಬುವುದಾಗಿ ಸಂಸ್ಥೆಯ ಭಾರತೀಯ ನಿರ್ದೇಶಕ ವೇದಾಂತ ಹಮಿರ್ವಾಸಿಯಾ ಹೇಳಿಕೆ ನೀಡಿದ್ದರು ಎಂದು ಇಡಿ ಮಾಹಿತಿ ನೀಡಿತ್ತು.