ಕರ್ನಾಟಕ

karnataka

ETV Bharat / state

ನಾಲ್ವಡಿ ಕೃಷ್ಣರಾಜರು ಎಡ್ವಿನ್​ಗೆ ಉಡುಗೂರೆಯಾಗಿ ನೀಡಿದ್ದ ಆಸ್ತಿ ಕಬಳಿಕೆ... ಈಶ್ವರನ್​ಗೆ ಇಡಿ ಶಾಕ್​ - ವನ್ಯಜೀವಿ ತಜ್ಞ ಎಡ್ವಿನ್ ಜೋಬರ್ಟ್ ವ್ಯಾನಿಂಗ್ ಆಸ್ತಿ ಕಬಳಿಕೆ ಪ್ರಕರಣ ಸುದ್ದಿ

ನಾಲ್ವಡಿ ಕೃಷ್ಣರಾಜ ಒಡೆಯರು ವ್ಯಾನಿಂಗ್ ಗೆ ಉಡುಗೂರೆಯಾಗಿ ನೀಡಿದ್ದ ಬೂಮಿಯನ್ನು ಈಶ್ವರನ್ ಎಂಬುವವರು ವ್ಯಾನಿಂಗ್​ ಅವರಿಗೆ ಪರಿಚಯವಾಗಿ ಸ್ನೇಹದ ನಾಟಕ ಮಾಡಿ ನಂತರ ಯಾಮಾರಿಸಿ ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಕಬಳಿಕೆ ಮಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ವಿಚಾರ ಎಡ್ವಿನ್ ಜೋಬರ್ಟ್ ವ್ಯಾನಿಂಗ್ ಗೆ ತಿಳಿದು ಇಡಿಗೆ ದೂರು ನೀಡಿದ್ದರು. ಸದ್ಯ ಇಡಿ ಆಸ್ತಿ ಜಪ್ತಿ ಮಾಡಿರೋದಾಗಿ ಅಧಿಕೃತವಾಗಿ ತಿಳಿಸಿದೆ.

ಇಡಿ

By

Published : Nov 21, 2019, 12:20 PM IST

ಬೆಂಗಳೂರು:ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಉಡುಗುರೆಯಾಗಿ ಮೈಸೂರಿನ ಅರಮನೆಯ ವನ್ಯಜೀವಿ ತಜ್ಞ ಎಡ್ವಿನ್ ಜೋಬರ್ಟ್ ವ್ಯಾನಿಂಗ್ ಅವರಿಗೆ ನೀಡಿದ್ದ ಭೂಮಿಯನ್ನ ಕಬಳಿಸಿದ್ದರೆನ್ನಲಾದ ಮೈಕೆಲ್ ಫ್ಲಾಯ್ಡ್ ಈಶ್ವರನ್ ಅವರಿಗೆ (ಇಡಿ), ಜಾರಿ ನಿರ್ದೇಶನಾಲಯ ಶಾಕ್ ನೀಡಿದೆ. ಇಡಿ ಅಧಿಕಾರಿಗಳು ತನಿಖೆ ಸಂಪೂರ್ಣವಾಗಿ ನಡೆಸಿ ಇದೀಗ ಆಸ್ತಿ ಜಪ್ತಿ ಮಾಡಿರುವುದಾಗಿ ಇಡಿ ಅಧಿಕೃತ ಟ್ವಿಟರ್ ನಲ್ಲಿ ತಿಳಿಸಿದೆ.

ಅಂದು ಮೃತ ಪ್ರಾಣಿಗಳ ದೇಹವನ್ನು ಕೆಡದಂತೆ ವನ್ಯಜೀವಿ ತಜ್ಞ ಎಡ್ವಿನ್ ಜೋಬರ್ಟ್ ವ್ಯಾನಿಂಗ್ ಸಂಗ್ರಹಿಸಿಡುವ ಕೆಲಸ ಮಾಡುತ್ತಿದ್ದರು. ಎಡ್ವಿನ್​ ಕೆಲಸದಿಂದ ಸಂತಸಗೊಂಡಿದ್ದ ಅಂದಿನ ರಾಜ ನಾಲ್ವಡಿ ಕೃಷ್ಣರಾಜ ಒಡೆಯರ್​ ಅವರು ವ್ಯಾನಿಂಗ್ ಗೆ ಮೈಸೂರಿನಲ್ಲಿ ಒಂದು ಮನೆ, ಕೇರಳದಲ್ಲಿ 220ಎಕರೆ ಭೂಮಿಯನ್ನ ಉಡುಗೊರೆಯಾಗಿ ನೀಡಿದ್ದರು ಎನ್ನಲಾಗ್ತಿದೆ.

ಆದರೆ ಎಡ್ವಿನ್ ಜೋಬರ್ಟ್ ವ್ಯಾನಿಂಗ್ ಗೆ ಈಶ್ವರನ್ ಪರಿಚಯವಾಗಿ ನಂತರ ಸ್ನೇಹಿತನಾಗಿದ್ದರು. ಬಳಿಕ ಅವರನ್ನು ಯಾಮಾರಿಸಿ, ನಕಲಿ ದಾಖಲೆ ಸೃಷ್ಟಿಸುವ ಮೂಲಕ ಆಸ್ತಿ ಕಬಳಿಕೆ ಮಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ವಿಚಾರ ಎಡ್ವಿನ್ ಜೋಬರ್ಟ್ ವ್ಯಾನಿಂಗ್ ಗೆ ತಿಳಿದು ಇಡಿಗೆ ದೂರು ನೀಡಿದ್ದರು. ಸದ್ಯ ಇಡಿ ಆಸ್ತಿ ಜಪ್ತಿ ಮಾಡಿರೋದಾಗಿ ಅಧಿಕೃತವಾಗಿ ಪ್ರಕಟಿಸಿದೆ.

ABOUT THE AUTHOR

...view details