ಕರ್ನಾಟಕ

karnataka

ETV Bharat / state

ವಿಚಾರಣೆಯಿಂದ ವಿನಾಯಿತಿ ಕೇಳಿದ್ರೂ ಅನುಮತಿ ನೀಡದ ಇಡಿ ಅಧಿಕಾರಿಗಳು.. ಡಿಕೆಶಿಗಿಲ್ಲ ಗಣೇಶ ಹಬ್ಬ.. - MP D K Suresh

ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಇಡಿ ವಿಚಾರಣೆ ಎದುರಿಸುತ್ತಿರುವ ಮಾಜಿ ಸಚಿವ ಡಿ ಕೆ ಶಿವಕುಮಾರ್‌ ನಾಳೆಯೂ ಹಬ್ಬ ಮಾಡುವಂತಿಲ್ಲ. ಗಣೇಶ ಹಬ್ಬದ ಪ್ರಯುಕ್ತ ವಿಚಾರಣೆಯಿಂದ ವಿನಾಯಿತಿ ಕೋರಿದರೂ ಇಡಿ ಮಾತ್ರ ಒಪ್ಪಿಗೆ ನೀಡಿಲ್ಲ, ನಾಳೆಯೂ ಡಿಕೆಶಿ ವಿಚಾರಣೆ ಮುಂದುವರೆಸಿದೆ.

ಡಿಕೆಶಿಗಿಲ್ಲ ಗಣೇಶ ಹಬ್ಬ

By

Published : Sep 1, 2019, 9:51 PM IST

ಬೆಂಗಳೂರು :ಕಾಂಗ್ರೆಸ್‍ ಟ್ರಬಲ್‍ ಶೂಟರ್‍ ಎಂದೇ ಜನಪ್ರಿಯರಾಗಿರುವ ಮಾಜಿ ಸಚಿವ ಡಿ ಕೆ ಶಿವಕುಮಾರ್ ಪಾಲಿಗೆ ಈ ಸಾರಿಯ ಗಣೇಶನ ಹಬ್ಬ ಸಂಭ್ರಮ ತಂದಿಲ್ಲ.

ಅಕ್ರಮ ಆಸ್ತಿಗಳಿಕೆ ಸಂಬಂಧ ಇಡಿ ಅಧಿಕಾರಿಗಳ ವಿಚಾರಣೆ ಹಿನ್ನೆಲೆ ದಿಲ್ಲಿಗೆ ತೆರಳಿರುವ ಡಿಕೆಶಿ ಅಲ್ಲೇ ಇದ್ದು, ಗೌರಿ-ಗಣೇಶ ಹಬ್ಬದ ಸಂಭ್ರಮ ಕಳೆದುಕೊಂಡಿದ್ದಾರೆ. ಇಡಿ ಅಧಿಕಾರಿಗಳು ನಾಳೆ ಬೆಳಗ್ಗೆ ಕೂಡ ವಿಚಾರಣೆ ನಡೆಸಲಿರುವ ಕಾರಣ ಗಣೇಶ ಹಬ್ಬದ ಸಂಭ್ರಮವೂ ಅವರ ಪಾಲಿಗೆ ಇಲ್ಲದಂತಾಗಿದೆ.

ಮಾಜಿ ಸಚಿವ ಡಿಕೆಶಿಗಿಲ್ಲ ಗಣೇಶ ಹಬ್ಬ..

ಎರಡು ದಿನದ ಹಿಂದೆಯೇ ದಿಲ್ಲಿಗೆ ತೆರಳಿರುವ ಡಿಕೆಶಿ ಇಡಿ ಅಧಿಕಾರಿಗಳ ನಿರಂತರ ವಿಚಾರಣೆಗೆ ಸಹಕರಿಸುತ್ತಿದ್ದಾರೆ. ನಿನ್ನೆ ರಾತ್ರಿಯವರೆಗೂ ವಿಚಾರಣೆ ನಡೆಸಿದ್ದಾರೆ. ಹಬ್ಬದ ಪ್ರಯುಕ್ತ ವಿಚಾರಣೆಯಿಂದ ವಿನಾಯಿತಿ ಕೋರಿದರೂ ಇಡಿ ಮಾತ್ರ ಒಪ್ಪಿಗೆ ಕೊಟ್ಟಿಲ್ಲ. ಹಾಗಾಗಿ ಇಡಿ ನಾಳೆ ವಿಚಾರಣೆ ಮುಂದುವರೆಸಲಿದೆ.ಇದರಿಂದ ಡಿಕೆಶಿ ನಿವಾಸ ಬಿಕೋ ಎನ್ನುತ್ತಿದೆ. ಅಭಿಮಾನಿಗಳು ನಿವಾಸದ ಬಳಿ ಬಂದು ವಾಪಾಸ್ಸಾಗುತ್ತಿದ್ದಾರೆ. ಕನಕಪುರ ಸೇರಿದಂತೆ ಹಲವೆಡೆ ಪ್ರತಿಭಟನೆಗಳು ನಡೆಯುತ್ತಿವೆ. ನಿನ್ನೆ ಯುವ ಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರಲ್ಲಿ ಪ್ರತಿಭಟನೆ ನಡೆಸಿದ್ದರು.

ಸದ್ಯ ಸಂಸದ ಡಿ ಕೆ ಸುರೇಶ್‍ ಅವರ ಅಪಾರ್ಟ್‍ಮೆಂಟ್‌ನಲ್ಲಿ ಡಿಕೆಶಿ ವಾಸವಾಗಿದ್ದಾರೆ. ಅವರ ಕುಟುಂಬ ಸದಸ್ಯರು ಕೂಡ ಜತೆಯಲ್ಲೇ ಇದ್ದಾರೆ. ನಾಳೆ ಬೆಳಗ್ಗೆ ಇಡಿ ಅಧಿಕಾರಿಗಳ ವಿಚಾರಣೆಗೆ ಹಾಜರಾಗಬೇಕಿದ್ದು, ಇಂದು ಕೆಲ ಬೆಂಬಲಿಗರು ಅವರನ್ನು ದಿಲ್ಲಿಯಲ್ಲಿಯೇ ಭೇಟಿಯಾಗಿ ಧೈರ್ಯ ತುಂಬುವ ಕಾರ್ಯ ಮಾಡಿದ್ದಾರೆ.

ABOUT THE AUTHOR

...view details