ಕರ್ನಾಟಕ

karnataka

ETV Bharat / state

ನಾನೇನು ದುಡ್ಡು ಕದ್ದಿಲ್ಲ, ರೇಪ್ ಮಾಡಿಲ್ಲ ಎಂದ ಟ್ರಬಲ್ ಶೂಟರ್​ ಡಿ ಕೆ ಶಿವಕುಮಾರ್.. - bangalore political news,

ನಾನೇನು ಹಣ ಕದ್ದಿಲ್ಲ, ರೇಪ್​ ಮಾಡಿಲ್ಲ, ಇಡಿ ಸಮನ್ಸ್​ ನೀಡಿದ ಹಿನ್ನೆಲೆಯಲ್ಲಿ ದೆಹಲಿಗೆ ತುರ್ತಾಗಿ ತೆರಳ ಬೇಕಿದೆ. ಅಲ್ಲಿಗೆ ಹೋಗುವ ಮುನ್ನ ಮಾಧ್ಯಮದವರ ಜೊತೆ ಮಾತನಾಡಿ ಹೋಗುತ್ತೇನೆ ಎಂದು ಮಾಜಿ ಸಚಿವ ಡಿ ಕೆ ಶಿವಕುಮಾರ ಹೇಳಿದರು.

ಮಾಜಿ ಸಚಿವ ಡಿ.ಕೆ.ಶಿವಕುಮಾರ

By

Published : Aug 30, 2019, 10:17 AM IST

ಬೆಂಗಳೂರು:ನೀವು ಟೆನ್ಷನ್ ಆಗಬೇಡಿ, ನಾನೇನು ಹಣ ಕದ್ದಿಲ್ಲ, ರೇಪ್​ ಮಾಡಿಲ್ಲ ಎಂದು ಸಮ್ಮಿಶ್ರ ಸರ್ಕಾರ ಇದ್ದಾಗ ಸರ್ಕಾರ ಉಳಿಸಲು ಶಾಸಕರನ್ನು ಹಿಡಿದಿಟ್ಟಿದ್ದೆ. ಅದಕ್ಕೆ ಹೀಗೆಲ್ಲ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಡಿ ಕೆ ಶಿವಕುಮಾರ ಹೇಳಿದರು.

ಮಾಜಿ ಸಚಿವ ಡಿ ಕೆ ಶಿವಕುಮಾರ..

ದೆಹಲಿಯಲ್ಲಿ ದೊರೆತ ಹಣದ ಕುರಿತು ಮಾಹಿತಿ ನೀಡಲು ಇಡಿ ಸಮನ್ಸ್ ನೀಡಿದ ಹಿನ್ನೆಲೆ, ಮಾಜಿ ಸಚಿವ ಡಿ ಕೆ ಶಿವಕುಮಾರ್ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅಗಸ್ಟ್ 29ರಂದು ಹೈಕೋರ್ಟ್​ನಲ್ಲಿ ತೀರ್ಪು ಬಂದ ನಂತರ ರಾತ್ರೋರಾತ್ರಿ ಇಡಿ ಸಮನ್ಸ್ ಜಾರಿ ಮಾಡಿದೆ. ಅಗಸ್ಟ್ 30ರ ಮಧ್ಯಾಹ್ನ 1ಗಂಟೆಗೆ ವಿಚಾರಣೆಗೆ ಬರಬೇಕು ಎಂದಿದ್ದಾರೆ. ಹೀಗಾಗಿ ಹೋಗಬೇಕಿದೆ. ಅದಕ್ಕೂ ಮುನ್ನ ನಿಮ್ಮ ಜೊತೆ ಮಾತನಾಡಿಯೇ ದೆಹಲಿಗೆ ಹೋಗುತ್ತೇನೆ ಎಂದರು.

ABOUT THE AUTHOR

...view details