ಮಂಗಳೂರು: ನದಿತಟಗಳ ಅತಿಕ್ರಮಣವನ್ನು ತಡೆಯಲು, ತ್ಯಾಜ್ಯ ರಾಶಿ, ನೆರೆ ಹಾವಳಿ, ಜೀವವೈವಿಧ್ಯ ಸಂರಕ್ಷಣೆ ಮಾಡುವ ಉದ್ದೇಶದಿಂದ ಬಿದಿರು ನೆಡುತೋಪು ನಿರ್ಮಾಣದ ಇಕೋ ರೆಸ್ಟೋರೇಶನ್ ಎಂಬ ಯೋಜನೆಯನ್ನು ಅರಣ್ಯ ಇಲಾಖೆಯು ಮಂಗಳೂರಿನಲ್ಲಿ ಹಮ್ಮಿಕೊಂಡಿದೆ.
ತಾಲೂಕಿನ ನೇತ್ರಾವತಿ ಮತ್ತು ಫಲ್ಗುಣಿ ನದಿಯ ಎರಡುೂ ಬದಿಯಲ್ಲಿ ಮತ್ತು ಬಂಟ್ವಾಳ ತಾಲೂಕಿನ ನೇತ್ರಾವತಿ ನದಿಯ ಇಕ್ಕೆಲಗಳಲ್ಲಿ ಈ ಯೋಜನೆ ರೂಪಿಸಲಾಗುತ್ತಿದೆ. ಮಂಗಳೂರು ತಾಲೂಕಿನಲ್ಲಿ 66 ಕಿ.ಮೀ. ಮತ್ತು ಬಂಟ್ವಾಳ ತಾಲೂಕಿನ 30 ಕಿ.ಮೀ. ನದಿ ಬದಿ ವ್ಯಾಪ್ತಿಯಲ್ಲಿ ಯೋಜನೆ ಬರುತ್ತಿದೆ. ಒಟ್ಟು 96 ಕಿ.ಮೀ ವ್ಯಾಪ್ತಿಯಲ್ಲಿ ಒಟ್ಟು 35 ಸಾವಿರ ಗಿಡಗಳನ್ನು ನೆಡಲಾಗುತ್ತಿದೆ. ಈ ಮೂಲಕ ರಾಜ್ಯದ ಮಾದರಿ ಯೋಜನೆಯಾಗಿ ಮಂಗಳೂರಿನಲ್ಲಿ ಇಕೋ ರೆಸ್ಟೋರೇಶನ್ ಅನುಷ್ಠಾನಕ್ಕೆ ತರಲಾಗುತ್ತಿದೆ.