ಬೆಂಗಳೂರು: ಕೋವಿಡ್ ಟೆಸ್ಟ್ ಹೇಗೆ, ಎಲ್ಲಿ ಮಾಡುತ್ತಾರೆ ಎಂಬ ಗೊಂದಲ ಪರಿಹರಿಸಲು ಈಗ ಬಿಬಿಎಂಪಿ ಹೊಸ ಲಿಂಕ್ ನೀಡಿದೆ. ಈ ಲಿಂಕ್ ಮೂಲಕ ಟೆಸ್ಟಿಂಗ್ ಸೆಂಟರ್ ಅನ್ನು ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ.
ಕೋವಿಡ್ ಕೇಂದ್ರಗಳನ್ನು ಪತ್ತೆ ಹಚ್ಚುವುದು ಈಗ ಸುಲಭ, ಹೇಗೆ ಗೊತ್ತೇ? - ಬೆಂಗಳೂರು ಕೋವಿಡ್ ಟೆಸ್ಟಿಂಗ್ ಸೆಂಟರ್ ಸುದ್ದಿ
ಬಿಬಿಎಂಪಿ ಆಯುಕ್ತರಾದ ಬಿ.ಹೆಚ್.ಅನಿಲ್ ಕುಮಾರ್ ಟ್ವೀಟ್ ಮಾಡಿದ್ದು, ರಾಜ್ಯದ ಯಾವುದೇ ಭಾಗದಲ್ಲಿದ್ದರೂ ಈ ಲಿಂಕ್ ಬಳಸಿ ಹತ್ತಿರದ ಕೋವಿಡ್ ಟೆಸ್ಟಿಂಗ್ ಸೆಂಟರ್ ಪತ್ತೆ ಹಚ್ಚಬಹುದು ಎಂದು ತಿಳಿಸಿದ್ದಾರೆ.
ಕೋವಿಡ್ ಟೆಸ್ಟಿಂಗ್ ಸೆಂಟರ್
ಬಿಬಿಎಂಪಿ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ಈ ಕುರಿತು ಟ್ವೀಟ್ ಮಾಡಿದ್ದು, ರಾಜ್ಯದ ಯಾವುದೇ ಭಾಗದಲ್ಲಿದ್ದರೂ ಹತ್ತಿರದ ಕೋವಿಡ್ ಟೆಸ್ಟಿಂಗ್ ಸೆಂಟರ್ ಪತ್ತೆ ಹಚ್ಚಬಹುದು ಎಂದು ತಿಳಿಸಿದ್ದಾರೆ.
ಬಳಕೆದಾರರು https://t.co/4N0Re74NeX ಈ ಲಿಂಕ್ ತೆರೆಯಬೇಕು. ಹತ್ತಿರದ H ಎಂಬ ಚಿಹ್ನೆ ಕ್ಲಿಕ್ ಮಾಡಿದ್ರೆ ಆಸ್ಪತ್ರೆ ಮ್ಯಾಪ್ ತೆರೆದುಕೊಳ್ಳಲಿದೆ. ಇದರಲ್ಲಿ ಖಾಸಗಿ ಹಾಗೂ ಸರ್ಕಾರಿ ಎರಡು ಆಸ್ಪತ್ರೆಗಳ ವಿವರವೂ ಸಿಗಲಿದೆ. ಇಲ್ಲಿ ಗೂಗಲ್ ಮ್ಯಾಪ್‌ನೊಂದಿಗೆ ಟೆಸ್ಟಿಂಗ್ ಸೆಂಟರ್‌ಗಳನ್ನು ಲಿಂಕ್ ಮಾಡಲಾಗಿದೆ.