ಬೆಂಗಳೂರು:ಕೇಂದ್ರ ಸರ್ಕಾರದ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯದ ವತಿಯಿಂದ ಈಸ್ ಆಫ್ ಲಿವಿಂಗ್ ಇಂಡೆಕ್ಸ್ (Ease of Living Index-Eoli) ಅಂದ್ರೆ 'ಸುಲಲಿತ ಜೀವನ ಮಟ್ಟ' ಕುರಿತು ಸಮೀಕ್ಷೆಯನ್ನು ಬೆಂಗಳೂರು ನಗರದಲ್ಲಿ ನಡೆಸಲಾಗುತ್ತಿದೆ.
ಬೆಂಗಳೂರು ನಗರ ನಿಮಗೆ ಯಾವ ರೀತಿಯ ಜೀವನ ಗುಣಮಟ್ಟ ನೀಡಿದೆ? ಕೇಂದ್ರದಿಂದ ಸಮೀಕ್ಷೆ - ಬೆಂಗಳೂರು ಸುಲಭವಾದ ಜೀವನ ಗ್ರಹಿಕೆ ಸಮೀಕ್ಷೆ
ಕೇಂದ್ರ ಸರ್ಕಾರದ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯದ ವತಿಯಿಂದ 'ಸುಲಲಿತ ಜೀವನ ಮಟ್ಟ' ಸಮೀಕ್ಷೆ ನಡೆಸಲಾಗುತ್ತಿದೆ. ಇದರ ಭಾಗವಾಗಿ ಬಿಬಿಎಂಪಿ ನೀಡುವ ಸೇವೆಗಳ ಬಗ್ಗೆ ಜನರು ಸಾಮಾಜಿಕ ಜಾಲತಾಣದಲ್ಲಿ ನಡೆಯುವ ಸಮೀಕ್ಷೆಯಲ್ಲಿ ಅಭಿಪ್ರಾಯ ಹಂಚಿಕೊಳ್ಳಬಹುದಾಗಿದೆ.

ಸುಲಭವಾದ ಜೀವನ ಗ್ರಹಿಕೆ ಸಮೀಕ್ಷೆ
ಇದರ ಭಾಗವಾಗಿ ಬಿಬಿಎಂಪಿ ನೀಡುವ ಸೇವೆಗಳ ಬಗ್ಗೆ ಜನರು ಸಾಮಾಜಿಕ ಜಾಲತಾಣದಲ್ಲಿ ನಡೆಯುವ ಸಮೀಕ್ಷೆಯಲ್ಲಿ ಅಭಿಪ್ರಾಯ ಹಂಚಿಕೊಳ್ಳಬಹುದಾಗಿದೆ.
ಫೆಬ್ರವರಿ 01-2020ರಿಂದ ಫೆ. 29-2020ರವರೆಗೆ ಪಾಲಿಕೆಯ ಕಾರ್ಯಕ್ಷಮತೆ ಸೂಚ್ಯಂಕ ಕುರಿತು ಸಾಮಾಜಿಕ ಮಾಧ್ಯಮಗಳ ಮೂಲಕ ಸುಲಲಿತ ಜೀವನ ಮಟ್ಟ ಸಮೀಕ್ಷೆ ನಡೆಯಲಿದೆ. ಶಿಕ್ಷಣ, ಆರೋಗ್ಯ, ನೀರು ಮತ್ತು ನೈರ್ಮಲ್ಯ, ಘನತ್ಯಾಜ್ಯ, ಮೂಲ ಸೌಕರ್ಯ, ನೋಂದಣಿ ಹಾಗೂ ಪರವಾನಗಿ ಸೇವೆ ಬಗ್ಗೆ ಸಮೀಕ್ಷೆ ನಡೆಸುತ್ತಿದೆ.