ಬೆಂಗಳೂರು:ಮುಂಜಾನೆ ಎದ್ದು ಬೈಕ್ನಲ್ಲಿ ಏರಿಯಾ ರೌಂಡ್ ಹಾಕ್ತಿದ್ದ ವ್ಯಕ್ತಿಯೊಬ್ಬ, ಅಂಗಡಿಗಳ ಮುಂದೆ ಇರುವ ಹಾಲು ಮತ್ತು ಮೊಸರನ್ನ ಕದಿಯುತ್ತಿದ್ದ. ಕ್ರೇಟ್ ನಲ್ಲಿರುವ ಹಾಲಿನ ಪ್ಯಾಕೇಟ್ ಕದ್ದು, ಸ್ವಲ್ಪ ಸಮಯದ ನಂತರ ಮತ್ತೆ ಅದೇ ಅಂಗಡಿಗಳಿಗೆ ಮಾರಾಟ ಮಾಡಲು ಬಂದಾಗ ಲಾಕ್ ಆಗಿದ್ದಾನೆ.
ಕಳೆದ ಕೆಲ ದಿನಗಳಿಂದ ಹಾಲು ಕಳ್ಳತನ ಆಗುತ್ತಿರುವ ಬಗ್ಗೆ ತಲೆಕೆಡಿಸಿಕೊಂಡಿದ್ದ ಅಂಗಡಿಯವರು ಸಿಸಿಟಿವಿ ಮೊರೆ ಹೋಗಿ ಕೊನೆಗೂ ಹಾಲಿನ ಕಳ್ಳನನ್ನ ಹಿಡಿದಿದ್ದಾರೆ. ಸಿಸಿಟಿವಿಯ ಅರಿವಿಲ್ಲದೆ ಕದ್ದ ಹಾಲನ್ನ ಕಳ್ಳ, ಅದೇ ಅಂಗಡಿಗೆ ಮಾರಲು ತಂದಾಗ ಆತನನ್ನು ಹಿಡಿದು ಥಳಿಸಲಾಗಿದೆ.