ಬೆಂಗಳೂರು:ಎಕ್ಸ್ಪ್ರೆಸ್ ಕಂಪ್ಯೂಟರ್ ಹಾಗೂ ಇಂಡಿಯನ್ ಎಕ್ಸ್ಪ್ರೆಸ್ ಸಮೂಹದಿಂದ ನಡೆಸಲಾದ ಸ್ಪರ್ಧೆಯಲ್ಲಿ ಎಂಟರ್‌ಪ್ರೈಸಸ್ ಮೊಬಿಲಿಟಿ ವಿಭಾಗದಲ್ಲಿ ಬೆಂಗಳೂರು ನಗರ ಸಂಚಾರ ಪೊಲೀಸರು ಜಾರಿಗೊಳಿಸಿರುವ 'ಇ ಚಲನ್' ಉಪಕ್ರಮಕ್ಕೆ ಇ-ಗವರ್ನನ್ಸ್ ಚಾಂಪಿಯನ್ ಪ್ರಶಸ್ತಿ ದೊರಕಿದೆ.
ಸ್ಪರ್ಧೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ 23ಕ್ಕೂ ಅಧಿಕ ಇಲಾಖೆಗಳು ಹಾಗೂ ಸಂಸ್ಥೆಗಳು ಸ್ಪರ್ಧಿಸಿದ್ದವು. ಬೆಂಗಳೂರು ಸಂಚಾರ ಪೊಲೀಸ್ ವಿಭಾಗವು ಹಲವು ಜನಸ್ನೇಹಿ ಉಪ್ರಕಮಗಳನ್ನು ಜಾರಿಗೊಳಿಸಿದೆ. ಈ ಪೈಕಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣದಲ್ಲಿ ಉಲ್ಲಂಘನೆಯ ವಿವರ ಹಾಗೂ ದಂಡ ಮೊತ್ತದ ಬಗ್ಗೆ ಎಸ್‌ಎಂಎಸ್ ಅಥವಾ ನೋಟಿಸ್ ಮೂಲಕ ವಾಹನ ಮಾಲೀಕರಿಗೆ ತಲುಪಿಸುವುದು ಹಾಗೂ ಆನ್‌ಲೈನ್, ಪೇಟಿಎಂ, ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಮೂಲಕ ದಂಡ ಪಾವತಿಸಲು ಅನುವಾಗುವಂತೆ ಜಾರಿ ಮಾಡಿರುವ 'ಇ ಚಲನ್' ಉಪಕ್ರಮಕ್ಕೆ ಈ ಪ್ರಶಸ್ತಿ ಲಭಿಸಿದೆ.