ಬೆಂಗಳೂರು: ಬಿಡಿಎ (ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ) ಪ್ರತಿಷ್ಠಿತ ಬಡಾವಣೆಗಳ ವಿವಿಧ ವಿಸ್ತೀರ್ಣದ ಮೂಲೆ ನಿವೇಶನಗಳನ್ನು ಇ-ಹರಾಜು ಮೂಲಕ ವಿಲೇವಾರಿ ಮಾಡುವ ಪ್ರಕ್ರಿಯೆಯನ್ನು ಮುಂದುವರಿಸಿದ್ದು, ಈಗ ಮೂರನೇ ಹಂತದಲ್ಲಿ ಅರ್ಕಾವತಿ ಬಡಾವಣೆ, ಹೆಚ್.ಎಸ್.ಆರ್ ಬಡಾವಣೆ, ಸರ್. ಎಂ. ವಿಶ್ವೇಶ್ವರಯ್ಯ ಬಡಾವಣೆ, ಜೆ.ಪಿ. ನಗರ, ಬನಶಂಕರಿ ಹಾಗೂ ಜ್ಞಾನಭಾರತಿ ಬಡಾವಣೆಗಳ ಒಟ್ಟು 402 ನಿವೇಶನಗಳನ್ನು ಹರಾಜಿಗಿಡಲಾಗಿದೆ.
ನಿವೇಶನಗಳ ಇ-ಹರಾಜು ಪ್ರಕ್ರಿಯೆಯು ದಿನಾಂಕ 09.09.2020 ರ ಬೆಳಿಗ್ಗೆ 11.00 ಗಂಟೆಯಿಂದ ಬಿಡ್ಡಿಂಗ್ ಪ್ರಾರಂಭವಾಗಲಿದೆ. ಸಾರ್ವಜನಿಕರು ಇ-ಪ್ರೊಕ್ಯೂರ್ಮೆಂಟ್ ಮೂಲಕ ಆನ್ಲೈನ್ನಲ್ಲಿ ಬಿಡ್ ಮಾಡಿ, ನಿವೇಶನಗಳನ್ನು ಖರೀದಿಸಬಹುದಾಗಿದೆ.
ಇ-ಹರಾಜು ಪ್ರಕ್ರಿಯೆಯು ಒಟ್ಟು ಆರು ಹಂತದಲ್ಲಿ ನಡೆಯಲಿದ್ದು, ಪ್ರತಿ ಹಂತದಲ್ಲಿ 70 ನಿವೇಶನಗಳ ಬಿಡ್ಡಿಂಗ್ ಮುಕ್ತಾಯವಾಗಲಿದೆ. ಇ-ಹರಾಜು ದಿನಾಂಕ 09.09.2020 ರಂದು ಪ್ರಾರಂಭವಾಗಲಿದ್ದು, ದಿನಾಂಕ 03.10.2020 ರಂದು ಅಂತಿಮವಾಗಿ ಬಿಡ್ಡಿಂಗ್ ಮುಕ್ತಾಯಗೊಳ್ಳಲಿದೆ.
ಹರಾಜಿಗಿರುವ ಎಲ್ಲಾ ನಿವೇಶನಗಳಿಗೂ ಜಿಯೋ ಮ್ಯಾಪಿಂಗ್ ಅಳವಡಿಸಿ ಪ್ರಾಧಿಕಾರದ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. ಬಿಡ್ದಾರರು ಜಗತ್ತಿನ ಯಾವುದೇ ಮೂಲೆಯಲ್ಲಿ ಕುಳಿತು ನಿವೇಶನಗಳನ್ನು ವೀಕ್ಷಿಸಬಹುದಾಗಿದೆ. ಇ-ಹರಾಜು ಬಿಡ್ಡಿಂಗ್ 6 ಹಂತದಲ್ಲಿ ಪೂರ್ಣಗೊಳ್ಳಲಿದೆ.
ನೋಟಿಫಿಕೇಶನ್ ಅನುಸಾರ ವೇಳಾಪಟ್ಟಿ