ಬೆಂಗಳೂರು:ಐವರು ಡಿವೈಎಸ್ಪಿ ವರ್ಗಾವಣೆ ಆದೇಶವನ್ನು ತಡೆ ಹಿಡಿದು ಡಿಐಜಿ ಪ್ರವೀಣ್ ಸೂದ್ ಮಹತ್ವದ ಆದೇಶ ಹೊರಡಿಸಿದ್ದಾರೆ.
ತಡೆ ಹಿಡಿದಿರುವ ಡಿವೈಎಸ್ಪಿ ಅಧಿಕಾರಿಗಳು ಎಂ.ಎಸ್. ಸುರೇಶ್ ರೆಡ್ಡಿ, ಡಿಸಿಆರ್ಇ ಬಾಗಲಕೋಟೆಯಿಂದ ಭ್ರಷ್ಟಾಚಾರ ನಿಗ್ರಹ ದಳಕ್ಕೆ ವರ್ಗಾವಣೆ ಆದೇಶ ಹೊರಡಿಸಲಾಗಿತ್ತು.

ಓದಿ: 25 ಡಿವೈಎಸ್ಪಿಗಳ ವರ್ಗಾವಣೆಗೆ ರಾಜ್ಯ ಸರ್ಕಾರ ಆದೇಶ
ಇನ್ನುಳಿದಂತೆ ಬಿ.ಆರ್ ಗೋಪಿ ಸಕಲೇಶ್ವರ ಉಪ ವಿಭಾಗದಿಂದ ಅರಸೀಕೆರೆ ಉಪವಿಭಾಗಕ್ಕೆ , ರಾಮನಗೌಡ ಅ. ಹಟ್ಟಿ ಡಿಸಿಆರ್ಬಿ ಧಾರವಾಡ ಜಿಲ್ಲೆಯಿಂದ ರಾಮದುರ್ಗ ಉಪ ವಿಭಾಗ ಬೆಳಗಾವಿ ಜಿಲ್ಲೆಗೆ, ಎಲ್. ನಾಗೇಶ್ ಅರಸೀಕೆರೆ ಉಪ ವಿಭಾಗ ಹಾಸನ ಜಿಲ್ಲೆಯಿಂದ ಕೆಎಲ್ಎ ಎಸ್ಐಟಿ ಹಾಗೂ ಶಂಕರಗೌಡ ಅಣ್ಣಾ ಸಾಹೇಬ್ ಪಾಟೀಲ್ ರಾಮದುರ್ಗ ಉಪವಿಭಾಗ ಬೆಳಗಾವಿ ಜಿಲ್ಲೆಯಿಂದ ರಾಜ್ಯ ಗುಪ್ತ ವಾರ್ತೆಗೆ ವರ್ಗಾವಣೆ ಗೊಂಡಿದ್ದರು. ಮುಂದಿನ ಆದೇಶದವರೆಗೂ ಈ ತಡೆ ಅನ್ವಯವಾಗಲಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ನಿನ್ನೆ ಒಟ್ಟು 25 ಡಿವೈಎಸ್ಪಿಗಳ ವರ್ಗಾವಣೆ ಮಾಡಲಾಗಿದ್ದು, ಈ ಬಗ್ಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು.