ಕರ್ನಾಟಕ

karnataka

ETV Bharat / state

ಅಭಿವೃದ್ಧಿ ಕೆಲಸ ಮಾಡಿರೋದು ನನ್ನ ತಪ್ಪಾ.. ಕೃಷ್ಣಬೈರೇಗೌಡರ ಟೀಕೆಗೆ ಡಿವಿಎಸ್‌ ತಿರುಗೇಟು - undefined

ಕಾಂಗ್ರೆಸ್​​​​​ನವರು ಬಾಯಿಬಿಟ್ಟರೆ ಸುಳ್ಳು ಹೇಳುತ್ತಾರೆ. ಕಾಂಗ್ರೆಸ್ ಅಭ್ಯರ್ಥಿ ನನ್ನ ಮೇಲೆ ಮತದಾರರಲ್ಲಿ ಇಲ್ಲ ಸಲ್ಲದನ್ನು ಹೇಳುತ್ತಿದ್ದಾರೆ ಎಂದು ಗುಡಿಗಿದರು. ನಾವು ಕಳೆದ ಐದು ವರ್ಷಗಳಲ್ಲಿ ಕೇಂದ್ರದಿಂದ‌ ಕರ್ನಾಟಕಕ್ಕೆ ಸುಮಾರು 2300 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದೇವೆ ಎಂದು ಸದಾನಂದ ಗೌಡರು ಹೇಳಿದರು.

ಬೈರೇಗೌಡರ ಮಾತಿಗೆ  ಡಿವಿಎಸ್ ತಿರುಗೇಟು.

By

Published : Mar 30, 2019, 10:39 AM IST

ಬೆಂಗಳೂರು : ಸದಾನಂದ ಗೌಡರು ಕಳೆದ ಐದು ವರ್ಷಗಳ ಕಾಲ ಜನರ ಬಳಿ ಹೋಗಲಿಲ್ಲ. ಯಾವುದೇ ಅಭಿವೃದ್ಧಿ ಕೆಲಸವನ್ನೂ ಮಾಡಲಿಲ್ಲ ಎಂದ ಸಚಿವ ಕೃಷ್ಣ ಬೈರೇಗೌಡರ ಮಾತಿಗೆ ಕೇಂದ್ರ ಸಚಿವ ಡಿವಿಎಸ್ ತಿರುಗೇಟು ನೀಡಿದ್ದಾರೆ.

ಬೈರೇಗೌಡರ ಮಾತಿಗೆ ಡಿವಿಎಸ್ ತಿರುಗೇಟು

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಕೃಷ್ಣಬೈರೇಗೌಡ ಮತ ಪ್ರಚಾರ ನಡೆಸಿದರು. ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದ ದೇವಮೂಲೆಯಾದ ಭಟ್ಟರಹಳ್ಳಿ ಶ್ರೀ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿಸುವ ಮೂಲಕ ಪ್ರಾಚಾರ ಕಾರ್ಯ ಆರಂಭಿಸಿದ ನಂತರ ಮಾತನಾಡಿದ‌ ಅವರು, ಸದಾನಂದ ಗೌಡರ ಬಗ್ಗೆ ಟೀಕೆಗಳನ್ನು ಮಾಡಿದ್ದರು.

ಸದಾನಂದಗೌಡರು ಕ್ಷೇತ್ರಕ್ಕೆ ಭೇಟಿ ನೀಡುವುದೇ ಅಪರೂಪವಾಗಿದೆ. ಅಧಿಕ ಮತಗಳಿಂದ ಗೆಲ್ಲಿಸಿದ್ದಕ್ಕಾದರೂ ಸಾರ್ವಜನಿಕರ ಭೇಟಿ ಮಾಡಬೇಕಾಗಿತ್ತು. ಹೆಚ್ಎಎಲ್, ಐಟಿಐ, ಬೆಮಲ್, ಬಿಎಲ್ ಮುಚ್ಚುವ ಹಂತ ತಲುಪಿವೆ ಎಂದು ಸಂಸದ ಡಿವಿ. ಸದಾನಂದಗೌಡ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸದಾನಂದಗೌಡ ಕಳೆದ ಐದು ವರ್ಷದಲ್ಲಿ ಎಷ್ಟು ಸಾರಿ ನಿಮ್ಮ ಊರಿಗೆ ಬಂದಿದ್ದಾರೆ, ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹಾಯ ಮಾಡಿದ್ದಾರೆ ಎಂದು ಜನರನ್ನು ಕೇಳಿದರು. ಅವರು ಚುನಾವಣೆಯಲ್ಲಿ ಗೆದ್ದು ಮನೆಯಲ್ಲಿ ಕುಳಿತುಕೊಂಡಿದ್ದಾರೆ. ಜನರ ಸಮಸ್ಯಗಳಿಗೆ ಸ್ಪಂದಿಸುತ್ತಿಲ್ಲ ಎಂದು ಟೀಕಿಸಿದರು.

ಇದಕ್ಕೆ ಪ್ರತಿಯಾಗಿ ಕೆ.ಆರ್.ಪುರಂ ವಿಧಾನ ಸಭಾ ಕ್ಷೇತ್ರದ ವಾಸವಿ ಮಹಲ್‍ನಲ್ಲಿ ಆರ್ಯ ವೈಶ್ಯ ಸಮಾಜ ಹಾಗೂ ವಾಲ್ಮೀಕಿ ಜನಾಂಗ,ಯಾದವ ಜನಾಂಗದವರಲ್ಲಿ ಮತ ಕೇಳಲು ಆಗಮಿಸಿ ನಂತರ ಮಾತನಾಡಿದ ಸದನಂದಗೌಡರು,ಕಾಂಗ್ರೆಸ್​​​​​ನವರು ಬಾಯಿಬಿಟ್ಟರೆ ಸುಳ್ಳು ಹೇಳುತ್ತಾರೆ. ಕಾಂಗ್ರೆಸ್ ಅಭ್ಯರ್ಥಿ ನನ್ನ ಮೇಲೆ ಮತದಾರರಲ್ಲಿ ಇಲ್ಲ ಸಲ್ಲದನ್ನು ಹೇಳುತ್ತಿದ್ದಾರೆ ಎಂದು ಗುಡಿಗಿದರು. ನಾವು ಕಳೆದ ಐದು ವರ್ಷಗಳಲ್ಲಿ ಕೇಂದ್ರದಿಂದ‌ ಕರ್ನಾಟಕಕ್ಕೆ ಸುಮಾರು 2300 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದೇವೆ ಎಂದರು.

ಕಳೆದ ಒಂದು ತಿಂಗಳ ಹಿಂದೆ ಕೃಷ್ಣಬೈರೇಗೌಡ ನಮ್ಮ ಮನೆಗೆ ಬಂದು ಕರ್ನಾಟಕಕ್ಕೆ ಅನುದಾನವನ್ನು ಬಿಡುಗಡೆ ಮಾಡುವಂತೆ ಕೇಳಿಕೋಂಡರು. ಎಲ್ಲಾ ಲೋಕಸಭಾ ಸದಸ್ಯರು ಹಾಗೂ ರಾಜ್ಯ ಸಭಾ ಸದಸ್ಯರನ್ನು ಕರೆಸಿ, ಮಾತನಾಡಿ ಕರ್ನಾಟಕಕ್ಕೆ ಹಣವನ್ನು ಬಿಡುಗಡೆ ಮಾಡಿದ್ದು ನನ್ನ ತಪ್ಪಾ.. ಬೆಂಗಳೂರಿನಲ್ಲಿ 50-50 ಕ್ರಾಸ್ ಶೇರಿಂಗ್​​​​​ನಲ್ಲಿ ಹದಿನೇಳು ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡಲಾಯಿತು. ಅದು ನನ್ನ ತಪ್ಪಾ.. ಜಾಲಹಳ್ಳಿಗೆ ಪಾಸ್ ಪೋರ್ಟ್ ಕಚೇರಿಯನ್ನು ತಂದ್ದಿದ್ದು ನನ್ನ ತಪ್ಪಾ.. ಯಶ್ವಂತಪುರಕ್ಕೆ ಕೇಂದ್ರಿಯ ವಿದ್ಯಾಲಯ ತಂದ್ದಿದ್ದು ನನ್ನ ತಪ್ಪಾ..

ಬೆಂಗಳೂರು-ಮೈಸೂರು ಡಬ್ಲಿಂಗ್ ವಿದ್ಯುತ್ ಮಾಡಿಸಿದ್ದು ನನ್ನ ತಪ್ಪಾ.. ಮಂಗಳೂರು ಹಾಸನ ರಸ್ತೆ ಸಾರಿಗೆ ನೆನೆಗುಂದಿಗೆ ಬಿದ್ದಾಗ 200 ಕೋಟಿ ರೂಪಾಯಿ ಬಿಡುಗಡೆ ಮಾಡಿಸಿದ್ದು ನನ್ನ ತಪ್ಪಾ.. ಬೀದರ್ ಗುಲ್ಬರ್ಗ ರೈಲ್ವೆ ಮಾಡಿಸಿದ್ದು ಇವರಿಗೆ ಗೊತ್ತಿಲ್ವಾ, ಇವರತರ ಸುಮ್ಮಸುಮ್ಮನೆ ಕೆಲಸ ಮಾಡಿಲ್ಲವೆಂದರೂ ಸುಮ್ಮನೇ ಟಾಮ್‌ ಟಾಮ್ ಹೊಡೆಯುವುದು ಅಲ್ಲ. ನಾನು ಮುಖ್ಯಮಂತ್ರಿಯಾಗಿ ಹಾಗೂ ಲೋಕಸಭಾ ಮಂತ್ರಿಯಾಗಿ ಕಳೆದ ಐದು ವರ್ಷಗಳಲ್ಲಿ ನನ್ನ ಕೆಲಸ ನನ್ನ ಕೊಡುಗೆಗಳು ಮಾತನಾಡುತ್ತದೆ. ಇದಕ್ಕೆ ಸಾಕ್ಷಿ ಆ ಚಾಮುಂಡೇಶ್ವರಿ ಎಂದು ಕಾಂಗ್ರೆಸ್‌ ವಿರುದ್ಧ ಗರಂ ಆದರು.

For All Latest Updates

TAGGED:

ABOUT THE AUTHOR

...view details